Kalaburagi Infra. retweeted
ಕಲ್ಯಾಣ ಕನಾ೯ಟಕದಲ್ಲಿ ಕಾಡೇ ಇಲ್ಲ. @aranya_kfd ಸಚಿವ @RLR_BTM ಅವರೇ ಕಲ್ಯಾಣದತ್ತ ಗಮನಕೊಡಿ
@Vijaykarnataka
@editor_vk
@Sudarshanvk2 @RajeevaVK
@PriyankKharge @MBPatil
@grahakara @secretarykkrdb
Kalaburagi Infra. retweeted
The wait is almost over! 🚆🔥
Bengaluru–Mumbai #VandeBharat_Sleeper train is ready for its inaugural run!🚆🔥
Kalaburagi Infra. retweeted
ಬೆಂಗಳೂರು–ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ನ.1ರಂದು ಉದ್ಘಾಟನಾ ಸಂಚಾರ, ನ.3ರಿಂದ ಸಾರ್ವಜನಿಕ ಸೇವೆ. ವೇಗದ ರೈಲು ಸಂಪರ್ಕದಿಂದ ಕಲಬುರಗಿ ಜನರ ಉದ್ಯೋಗ, ವ್ಯಾಪಾರ, ಶಿಕ್ಷಣ ಹಾಗೂ ಮುಂಬೈ–ಬೆಂಗಳೂರು ಪ್ರಯಾಣಕ್ಕೆ ಅನುಕೂಲ.
#Kalaburagi #KalyanaKarnataka #VandeBharatSleeper #BangaloreMumbai #IndianRailways
Kalaburagi Infra. retweeted
Big Thank you @AshwiniVaishnaw @narendramodi @SWRRLY @Central_Railway @Tejasvi_Surya @VSOMANNA_BJP for finally fixing the travel woes between #Mumbai-#Bengaluru route with #VandeBharatSleeper train via #Pune, #Solapur , #Kalaburagi #Raichur #Yadgir route kudos to everyone
Kalaburagi Infra. retweeted
Priyank Kharge 📑🔄 keeps rotating pages of Kalaburagi’s Master Plan, but where’s the ground work? 😂 Big projects on paper, no visible progress on the ground! Confirmed: a good spokesperson, but can he uplift Kalaburagi from backwardness? @PriyankKharge @DKShivakumar
ಕಲಬುರಗಿ ನಗರದ ವಿದ್ಯುತ್ ಸಂಪರ್ಕ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ಯೋಜನೆ ರೂಪಿಸಲಾಗಿದೆ,
ನಗರದಾದ್ಯಂತ ಪ್ರಮುಖ ರಸ್ತೆಗಳಲ್ಲಿ ಭೂಗತ ವಿದ್ಯುತ್ ಸಂಪರ್ಕ ಜಾಲವನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು.
ಮೇಲ್ಮಟ್ಟದ ಕಂಬಗಳ ರಹಿತವಾದ ಈ ಯೋಜನೆಯಿಂದ ವಿದ್ಯುತ್ ಅವಘಡಗಳನ್ನು ನಿಯಂತ್ರಿಸುವುದಕ್ಕೆ, ನಗರದ ಸೌಂದರ್ಯ ಹೆಚ್ಚುವುದಕ್ಕೆ ಸಂಚಾರ ಸಮಸ್ಯೆ ಕಡಿಮೆಗೊಳಿಸುವುದಕ್ಕೆ ಹಾಗೂ ಇನ್ನಿತರ ಅಡೆತಡೆಗಳನ್ನು ನಿಯಂತ್ರಿಸುವುದಕ್ಕೆ ಸಹಕಾರಿಯಾಗಲಿದೆ.
ಈ ಯೋಜನೆಯ ರೂಪುರೇಷೆಯ ಕುರಿತು ಜೆಸ್ಕಾಂ ಅಧ್ಯಕ್ಷರಾದ ಪ್ರವೀಣ್ ಪಾಟೀಲ್ ಹಾಗೂ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಸಭೆ ನಡೆಸಲಾಯಿತು.
#ಕಲಬುರಗಿಕಲ್ಯಾಣ
Kalaburagi Infra. retweeted
ಉತ್ತರ ಕರ್ನಾಟಕದ ಪ್ರತಿಭೆಗಳಿಗಾಗಿ ಪ್ರತ್ಯೇಕ ಅವಕಾಶ. ಕಲಬುರಗಿಯಲ್ಲಿ ಆಡಿಷನ್ ಆಯೋಜಿಸುತ್ತಿದ್ದೇವೆ. 🎬✨
ಸ್ಥಳ ಮತ್ತು ಸಮಯವನ್ನು ಶೀಘ್ರದಲ್ಲೇ ತಿಳಿಸಲಾಗುವುದು.
ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರತಿಭೆಗಳಿಗಾಗಿ ಅಕ್ಟೋಬರ್ 02ರಂದು ವಿಜಯ ಕಾಲೇಜು, ಜಯನಗರ, ಬೆಂಗಳೂರಿನಲ್ಲಿ ಆಡಿಷನ್ ನಡೆಯಲಿದೆ.
ನಿಮಗೆ ಅನುಕೂಲವಾಗುವ ಸ್ಥಳವನ್ನು ಆಯ್ಕೆ ಮಾಡಿಕೊಂಡು, ಈ ಸುಂದರ ಪ್ರಯಾಣದ ಭಾಗವಾಗಿ! ❤️
We’re pleased to announce a separate audition in KALABURAGI for aspiring talents from North Karnataka and surrounding areas.
The venue and timings for Kalaburagi will be announced soon. Stay tuned!
Talents from Bengaluru and nearby areas can attend the Bengaluru audition on OCTOBER 02nd at Vijaya College, Jayanagar, Bengaluru.
Choose the location that’s most convenient for you and be a part of this exciting journey! 🎬❤️
Kalaburagi Infra. retweeted
Jokumaraswamy — a living folk tradition rooted in the villages of North Karnataka.
According to traditional belief, Jokumaraswamy is born on Bhadrapada Shukla Ashtami, following the Ganesha festival, and lives for seven days. During this period, the idol is carried from house to house, accompanied by folk songs and prayers for rain, good crops and prosperity.
📍Gajendragad.Gadag District
🎥 Video Courtesy: Yashraj Ghorpade
Follow @gadag_heritage for more stories, photographs and documentation from the history and heritage of Gadag.
Have you witnessed Jokumaraswamy in your village? 👇
Share your memories in the comments.
#GadagHeritage #Jokumaraswamy #Gadag #Gajendragad #NorthKarnataka
Kalaburagi Infra. retweeted
ಕಲಬುರಗಿಯ ಮಲೆನಾಡು ಚಿಂಚೋಳಿ ಅರಣ್ಯಧಾಮ!
✍️ ದಸ್ತಗೀರ ನದಾಫ್ ಯಳಸಂಗಿ
👉varthabharati.in/nimma-ankan…
#drnadaf #nadafstories #chincholi #chincholiforest #ಕಲಬುರಗಿ #kalaburagi #malenadu #environment #forest
Kalaburagi Infra. retweeted
Wahhh 🔥🔥
The Best reel of kalaburagi in the decade ✨
ಅಂದು ಇಂದು ಮುಂದು
ಎಂದಿಗೂ ಕನ್ನಡದ ತವರು
ನಮ್ಮ ಕಲಬುರಗಿ 💛❤️
#kalaburagi #nrupatunga ⚡
Kalaburagi Infra. retweeted
Hello Kalaburgi!
Kalaburagi Infra. retweeted
ಸಂವಿಧಾನ ಸಂವಿಧಾನ ಅನ್ನೋರೋ ತಮ್ಮ ಜಿಲ್ಲೆ ನಾ ಯಾಕೆ ಉದ್ದಾರ ಮಾಡ್ತಾ ಇಲ್ಲಾ?
-ಗುಲ್ಬರ್ಗ ಯೂನಿವರ್ಸಿಟಿ ಕೇಳೋಕ್ಕೆ ಹೋಗ್ಬೇಡಿ ದೇಶ ದಲ್ಲಿ ಮೊದಲ ಸ್ಥಾನ ದಲ್ಲಿ ಬರತ್ತೆ.
-ನೀರಾವರಿ 😡
-Highway 😡
-ಕೇರೆ ಅಭಿರುದ್ದಿ 😡
-Tourism's 😡
-ಶಿಕ್ಷಣ 😡
Kalaburagi Infra. retweeted
ಕಲಬುರಗಿ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕೂಟರ ಹೆಮ್ಮೆಯ ಅರಸ ಅಮೋಘವಷ೯ ನೃಪತುಂಗನ ಹೆಸರಿಡುವಂತೆ ಒತ್ತಾಯಿಸಿ ಇಂದು ಕನಾ೯ಟಕ ನವನಿಮಾ೯ಣ ಸೇನೆ ಕಲಬುರಗಿ ಜಿಲ್ಲಾಘಟಕದ ಪದಾಧಿಕಾರಿಗಳು ಅಧ್ಯಕ್ಷ ರವಿ ದೇಗಾಂವ ನೇತೃತ್ವದಲ್ಲಿ ಕಲ್ಯಾಣ ಕನಾ೯ಟಕ ವಿಮೋಚನಾ ದಿನಾಚರಣೆಯಲ್ಲಿ ಭಾಗಿಯಾಗಲು ಕಲಬುರಗಿ ನಗರಕ್ಕೆ ಆಗಮಿಸಿದ ಮುಖ್ಯಮಂತ್ರಿ ಶ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
#KalburgiAirport #AmoghavarshaNrupatunga #DKShivakumar @DKShivakumar
Kalaburagi Infra. retweeted
She served as the Director of the Kidwai Memorial Institute of Oncology and dedicated her post-retirement life to rural cancer screening and awareness. She was awarded the Padma Shri and the Karnataka Rajyotsava Award for her service.
Kalaburagi Infra. retweeted
Dr. Vijayalakshmi Deshmane (Padma Shri): Born in Kalaburagi (Jewargi taluk),she overcame extreme poverty to become one of Karnataka's top surgical oncologists.
Kalaburagi Infra. retweeted
Replying to @PMOIndia
@PMOIndia @AshwiniVaishnaw @VSOMANNA_BJP @Tejasvi_Surya @JoshiPralhad @CMofKarnataka @H_D_Devegowda @hd_kumaraswamy request pls give mukti from 3RD GRADED SOLAPUR RLY DIV CR ZN PLS MERGE ENTIRE BIDAR KLBG YADAGIR RAICHUR IN ONE ZONE ONE DIV FOR BETTER OPERATIONAL TO SERVE PUBLIC
Kalaburagi Infra. retweeted
We need one more #Sardar Patel to liberate #Kalaburagi from @DRMSolapur @Central_Railway & operate Kalaburagi rail division will it be you?
@blsanthosh @VSOMANNA_BJP @AshwiniVaishnaw @kharge @PriyankKharge @JoshiPralhad @narendramodi @DKShivakumar @IamGKumarNaik @SagarKhandre12 ?
On this #KalyanaKarnataka #liberation day let us all take pledge to liberate #Kalaburagi from neglect of @Central_Railway @DRMSolapur & get united under one #zone, one #kalaburagi rail division
@blsanthosh @VSOMANNA_BJP @AshwiniVaishnaw @RailMinIndia @SWRRLY @narendramodi
Kalaburagi Infra. retweeted
On this Hyderabad-Karnataka Liberation day..let us all take pledge to get Klbg dist liberated from misrule of CR ZN & Solapur Div & unite entire Kalyanakarnataka Railway lines under One ZN and one KLBG RLY DIV . Best wishes of Kalyana Karnataka Utsav Day to all
Kalaburagi Infra. retweeted
Announce it
U will be rememberd forever
@DKShivakumar
ಕಲ್ಯಾಣ ಕರ್ನಾಟಕದ ʼಕಲ್ಯಾಣʼಕ್ಕೆ ಸರ್ಕಾರ ಬದ್ಧ
ನಾವು ಮತಕ್ಕಾಗಿ ಅಲ್ಲ, ರಾಜ್ಯದ ಹಿತಕ್ಕಾಗಿ ಕೆಲಸ ಮಾಡುತ್ತೇವೆ. ಪ್ರಜಾಸೇವೆಯೇ ದೇವರ ಸೇವೆ. ಅದಕ್ಕಾಗಿ ಪ್ರಜಾಸೇವೆ ಇಲಾಖೆಯನ್ನೇ ಸ್ಥಾಪಿಸಿದ್ದೇವೆ. ಸರ್ಕಾರವನ್ನೇ ನಿಮ್ಮ ಮನೆ ಬಾಗಿಲಿಗೆ ತಂದು ನಿಮ್ಮ ಸಮಸ್ಯೆಗಳನ್ನು ಪರಿಹರಿಸುತ್ತಿದ್ದೇವೆ. ಪ್ರತಿ 2ನೇ ಹಾಗೂ 4ನೇ ಶನಿವಾರ ನಾನೂ ಸೇರಿದಂತೆ ನಮ್ಮ ಸಚಿವರು, ಶಾಸಕರು ಜಿಲ್ಲೆ, ತಾಲೂಕು, ಹೋಬಳಿ ಮಟ್ಟದಲ್ಲಿ ಪ್ರಜಾಸೇವೆ ಅಭಿಯಾನ ನಡೆಸುತ್ತಿದ್ದೇವೆ.
ಕಲ್ಯಾಣ ಕರ್ನಾಟಕದ ಕಲ್ಯಾಣ ನಮ್ಮ ಆದ್ಯತೆ. ಬೆಂಗಳೂರು ಕರ್ನಾಟಕದ ಕಿರೀಟ. ಕಲ್ಯಾಣ ಕರ್ನಾಟಕ ರಾಜ್ಯದ ಶಕ್ತಿಪೀಠ. ಕಲ್ಯಾಣ ಕರ್ನಾಟಕದಲ್ಲಿ ತುಂಗಭದ್ರಾ, ಕೃಷ್ಣಾ ನದಿಗಳಂತೆ ಅಭಿವೃದ್ಧಿಯೂ ತುಂಬಿ ಹರಿಯುತ್ತಿದೆ. ಕೊಪ್ಪಳದ ನವಲಿಯಲ್ಲಿ ತುಂಗಭದ್ರಾ ಅಣೆಕಟ್ಟಿಗೆ ಸಮತೋಲನ ಜಲಾಶಯ ನಿರ್ಮಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಸಿ.ಆರ್. ಪಾಟೀಲ್ ಅವರ ನೇತೃತ್ವದಲ್ಲಿ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಈ ಐತಿಹಾಸಿಕ ನಿರ್ಣಯ ಕೈಗೊಳ್ಳಲಾಗಿದೆ.
ಕಳೆದ 12 ವರ್ಷಗಳಲ್ಲಿ ಕಲ್ಯಾಣ ಕರ್ನಾಟಕಕ್ಕೆ ಸುಮಾರು ₹25 ಸಾವಿರ ಕೋಟಿ ವಿಶೇಷ ಅನುದಾನ ನೀಡಲಾಗಿದೆ. ಕಲ್ಯಾಣ ಕರ್ನಾಟಕದ ಇತಿಹಾಸ ಬದಲಾಯಿಸಲು ಕಾಂಗ್ರೆಸ್ ಪಕ್ಷ ರಕ್ತ, ಬೆವರು ಹರಿಸಿದೆ.
ಕಲ್ಯಾಣ ಕರ್ನಾಟಕಕ್ಕೆ ವಿಮೋಚನೆ ದೊರೆತಿದ್ದು ನಮ್ಮ ಕಾಂಗ್ರೆಸ್‌ನಿಂದ. ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದರೂ ಕಲ್ಯಾಣ ಕರ್ನಾಟಕಕ್ಕೆ ನಿಜಾಮರು ಸ್ವಾತಂತ್ರ್ಯ ನೀಡಿರಲಿಲ್ಲ. ಆಗ ಕಾಂಗ್ರೆಸ್‌ನ ಹೋರಾಟದಿಂದ ಈ ಭಾಗಕ್ಕೆ ಸ್ವಾತಂತ್ರ್ಯ ಬಂತು. ಸರ್ದಾರ್ ವಲ್ಲಭಭಾಯಿ ಪಟೇಲ್, ನೆಹರು ಅವರು ಕಲ್ಯಾಣ ಕರ್ನಾಟಕವನ್ನು ಕಾಪಾಡಿದರು. ಧರಂಸಿಂಗ್ ಅವರ ವರದಿಯ ಆಧಾರದ ಮೇಲೆ 1990ರಲ್ಲಿ ಹೈದರಾಬಾದ್-ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪನೆಯಾಯಿತು.
371(ಜೆ) ಶ್ರೀಮತಿ ಸೋನಿಯಾ ಗಾಂಧಿ, ಡಾ. ಮನಮೋಹನ್ ಸಿಂಗ್ ಹಾಗೂ ಎಐಸಿಸಿ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರ ಕೊಡುಗೆ. 371(ಜೆ)ಯ ಉದ್ದೇಶ ಒಂದು ಮನೆಯಲ್ಲಿ ಒಬ್ಬರಾದರೂ ಸರ್ಕಾರಿ ನೌಕರ ಇರಬೇಕು. ಊರಿಗೆ ಒಬ್ಬರಾದರೂ ಡಾಕ್ಟರ್ ಇರಬೇಕು. ಊರಿಗೆ ಐವರಾದರೂ ಇಂಜಿನಿಯರ್‌ಗಳು ಇರಬೇಕು ಎಂಬುದು. ಈ ಕನಸನ್ನು ನನಸು ಮಾಡಿರುವುದು ಕಾಂಗ್ರೆಸ್ ಪಕ್ಷ.
ಈ ಭಾಗದ ಜನರ ಬದುಕು ಕಟ್ಟಿದ ಮಹಾನ್ ವ್ಯಕ್ತಿ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರನ್ನು ನೀವ್ಯಾರೂ ಮರೆಯಬಾರದು. ಚಿಕ್ಕವಯಸ್ಸಿನಲ್ಲೇ ಕುಟುಂಬದ ಸದಸ್ಯರನ್ನು ಕಳೆದುಕೊಂಡರೂ ಅದರಿಂದ ಅವರು ಕುಗ್ಗಲಿಲ್ಲ. ಬದಲಿಗೆ ಹೋರಾಟದ ಬದುಕು ಕಟ್ಟಿ ಈಗ ರಾಷ್ಟ್ರಮಟ್ಟದ ನಾಯಕರಾಗಿದ್ದಾರೆ.
ಆರ್ಟಿಕಲ್ 371(ಜೆ) ಜಾರಿಯಾಗಿ 12 ವರ್ಷಗಳಾಗಿವೆ. ₹25 ಸಾವಿರ ಕೋಟಿ ಅನುದಾನದಲ್ಲಿ ಈಗಾಗಲೇ ₹14,000 ಕೋಟಿ ಖರ್ಚು ಮಾಡಲಾಗಿದೆ. 41,103 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. 32,985 ಕಾಮಗಾರಿಗಳು ಪೂರ್ಣಗೊಂಡಿವೆ. 8,118 ಕಾಮಗಾರಿಗಳು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿವೆ. ಈ ಭಾಗದ ಯುವಕರು 371(ಜೆ)ಯಿಂದ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಇಲ್ಲಿಯವರೆಗೆ 79,383 ಯುವಕರಿಗೆ ಉದ್ಯೋಗ ಕಲ್ಪಿಸಲಾಗಿದೆ. ಈಗ 72 ಸಾವಿರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಇದರಲ್ಲಿ 32 ಸಾವಿರ ಹುದ್ದೆಗಳು ಈ ಭಾಗದ ಜನರಿಗೆ ದೊರೆಯಲಿವೆ.
ಈ ಭಾಗದ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಪ್ರತಿವರ್ಷ ₹5 ಸಾವಿರ ಕೋಟಿ ನೀಡಿದೆ. ಮಲ್ಲಿಕಾರ್ಜುನ ಖರ್ಗೆ ಅವರು ಅತಿ ದೊಡ್ಡ ESI ಆಸ್ಪತ್ರೆ ಕಟ್ಟಿಸಿದ್ದಾರೆ. ಕಲ್ಯಾಣ ಕರ್ನಾಟಕ ಆರೋಗ್ಯ ಹಬ್ ಆಗಿ ರೂಪುಗೊಳ್ಳುತ್ತಿದೆ. ಯಾದಗಿರಿ, ಕೊಪ್ಪಳ ಮತ್ತು ಬೀದರ್‌ನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಸ್ಥಾಪಿಸಲಾಗುತ್ತಿದೆ. ಇಂದಿರಾಗಾಂಧಿ ತಾಯಿ-ಮಕ್ಕಳ ಆಸ್ಪತ್ರೆ, ಕಿದ್ವಾಯಿ, ಜಯದೇವ ಆಸ್ಪತ್ರೆಗಳು ಇನ್ನಷ್ಟು ಜನರ ಸೇವೆಗೆ ಸಿದ್ಧವಾಗುತ್ತಿವೆ. ಈ ಆಸ್ಪತ್ರೆಗಳಿಗೆ ₹423 ಕೋಟಿ ವೆಚ್ಚ ಮಾಡಲಾಗುತ್ತಿದೆ. ಇದರಿಂದ ಈ ಭಾಗದ ಜನರು ಬೆಂಗಳೂರು, ಹೈದರಾಬಾದ್‌ಗೆ ಹೋಗುವುದು ತಪ್ಪುತ್ತಿದೆ. ಸೋನಿಯಾ ಗಾಂಧಿಯವರ ನೇತೃತ್ವದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಮಾಡಿದ ಅಭಿವೃದ್ಧಿಯ ಕ್ರಾಂತಿಯನ್ನು ಎಲ್ಲರೂ ಸ್ಮರಿಸಿಕೊಳ್ಳಬೇಕು. ಈ ಭಾಗಕ್ಕೆ 27 ಹೊಸ ರೈಲುಗಳನ್ನು ಮಂಜೂರು ಮಾಡಿಸಿದ್ದಾರೆ.
ಕಲಬುರಗಿ–ವಾಡಿ ಮತ್ತು ಬೀದರ್–ಕಲಬುರಗಿ ಹೊಸ ರೈಲ್ವೆ ಮಾರ್ಗ ಮಾಡಿಸಿದವರು ಖರ್ಗೆಯವರು. ಬಂಜಾರರನ್ನು ಪರಿಶಿಷ್ಟ ಪಟ್ಟಿಗೆ ಸೇರ್ಪಡೆ ಮಾಡಿದ್ದು ಕಾಂಗ್ರೆಸ್ ಪಕ್ಷ. ಇದಾದ ನಂತರ ಬಂಜಾರರ ಬದುಕು ಗಟ್ಟಿಯಾಗುತ್ತಿದೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕೈ ಹಿಡಿದಿದ್ದು ಕಲ್ಯಾಣ ಕರ್ನಾಟಕ. ನಮ್ಮ ಕೈಹಿಡಿದ ನಿಮ್ಮನ್ನು ಕೈಬಿಡುವ ಪ್ರಶ್ನೆಯೇ ಇಲ್ಲ.
ಇಲ್ಲಿನ ರಸ್ತೆಗಳ ಸುಧಾರಣೆಗೆ ಕಲ್ಯಾಣಪಥ ಯೋಜನೆ ರೂಪಿಸಿದ್ದೇವೆ. 38 ವಿಧಾನಸಭಾ ಕ್ಷೇತ್ರಗಳಲ್ಲಿ 1,150 ಕಿ.ಮೀ. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ₹1 ಸಾವಿರ ಕೋಟಿ ನೀಡಲಾಗಿದೆ. ಪ್ರತಿ ಕ್ಷೇತ್ರಕ್ಕೆ ₹120 ಕೋಟಿ ತೆಗೆದಿರಿಸಿದ್ದೇವೆ. ಕಲಬುರಗಿಯಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ₹11,770 ಕೋಟಿ ಮೊತ್ತದ ಬೃಹತ್ ಯೋಜನೆಗಳಿಗೆ ನಿರ್ಧಾರ ಮಾಡಲಾಗಿದೆ. 350 KPS ಶಾಲೆಗಳ ನಿರ್ಮಾಣದ ಗುರಿ ಹೊಂದಿದ್ದೇವೆ. 371(ಜೆ)ಯಿಂದ ವೈದ್ಯಕೀಯ ಕ್ಷೇತ್ರದಲ್ಲಿ 10,000ಕ್ಕೂ ಹೆಚ್ಚು ಹಾಗೂ ಇಂಜಿನಿಯರಿಂಗ್‌ನಲ್ಲಿ 31,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರವೇಶದ ಅವಕಾಶ ಕಲ್ಪಿಸಲಾಗಿದೆ. ಆರೋಗ್ಯ ಕ್ಷೇತ್ರಕ್ಕೆ ₹1,797 ಕೋಟಿ ಒದಗಿಸಲಾಗಿದೆ. ಸಣ್ಣ ಕೈಗಾರಿಕೆಗಳಿಗೆ ₹200 ಕೋಟಿ ನೀಡಲಾಗಿದೆ.
ಕಲಬುರಗಿಯಲ್ಲಿ 120ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ಸ್ಥಾಪನೆಯಾಗಿವೆ. 2030ರ ವೇಳೆಗೆ 500ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳ ಸ್ಥಾಪನೆಯ ಗುರಿ ಹೊಂದಿದ್ದೇವೆ. ಕಲ್ಯಾಣ ಕರ್ನಾಟಕದ ಕುಡಿಯುವ ನೀರಿನ ಯೋಜನೆಗಳಿಗೆ ₹7,200 ಕೋಟಿ ವಿನಿಯೋಗಿಸಲಾಗುತ್ತಿದೆ.
ಇದೇ ಕಾಂಗ್ರೆಸ್‌ನ ಜನಪರ ಗ್ಯಾರಂಟಿ, ಅಭಿವೃದ್ಧಿಪರ ಗ್ಯಾರಂಟಿ. ನವ ಕರ್ನಾಟಕ, ಸದೃಢ ಕರ್ನಾಟಕ ನಮ್ಮ ಸಂಕಲ್ಪವಾಗಿದೆ. ನಿಮ್ಮ ನೆರವಿಗೆ ಬಂದ ಕಾಂಗ್ರೆಸ್ ಪಕ್ಷವನ್ನು ನೀವು ಮರೆಯಬಾರದು.
- ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @DKShivakumar ಅವರು ಮಾತನಾಡಿದ ಪ್ರಮುಖ ಅಂಶಗಳು
Kalaburagi Infra. retweeted
On this #KalyanaKarnataka #liberation day let us all take pledge to liberate #Kalaburagi from neglect of @Central_Railway @DRMSolapur & get united under one #zone, one #kalaburagi rail division
@blsanthosh @VSOMANNA_BJP @AshwiniVaishnaw @RailMinIndia @SWRRLY @narendramodi








































