Pinned Tweet
ವೀರಶೈವ/ಲಿಂಗಾಯತರು 'ಅಗ್ನಿ ಭಂಜಕರು' ಎನ್ನುವುದೇ ಸುಳ್ಳು ಸಂಕಥನ. ವೀರಭದ್ರೇಶ್ವರ ನಿಗೆ ' ನಿಟಿಲಾಗ್ನಿನೇತ್ರಸಂಭವ' ಎನ್ನುವ ಹೆಸರೂ ಉಂಟು, ಅಂದರೆ ಶಿವನ ಅಗ್ನಿಗಣ್ಣಿನಿಂದ ಜನಿಸಿದವನು. ಶಿವ ಸ್ವಯಂ ಯಜ್ಞ, ಅವನೇ ಇಲ್ಲದ ಯಜ್ಞಕ್ಕೆ ಯಾವ ಮಹತ್ವವೂ ಇಲ್ಲದಾಗಿ ದಕ್ಷ ಯಾಗವನ್ನು ಹಾಳುಗೆಡವುತ್ತಾರೆ ವೀರಭದ್ರ ಮತ್ತು ಗಣಗಳು. ೧/ವೀ
ಗಣಧುರಂಧರ retweeted
जगद्गुरु शंकराचार्य श्री श्री भारतीतीर्थ जी महाराज के करकमलसंजात जगद्गुरु शंकराचार्य अनंतश्रीविभूषित श्री श्री विधुशेखरभारती जी महाराज ने लोककल्याण केलिए उज्जैन में स्थित श्री महाकालेश्वर ज्योतिर्लिंग की विशेष पूजा संपन्न की।
Blessed Glimpse: Sringeri Jagadguru Shankaracharya Sri Sri Vidhushekhara Bharati Sannidhanam performed Vishesha Puja to the sacred Sri Mahakaleshwar Jyotirlinga at Ujjain for Loka Kalyana.
After a long interval of 32 years, the sacred land of Madhya Pradesh is once again being graced by the visit of the Sringeri Jagadguru Shankaracharya - a momentous occasion in the enduring relationship between this region and the Sringeri Sharada Peetham. This sacred bond dates back to the very inception of the Peetham, as Sri Sureshwaracharya, its first Peethadheeshwar, hailed from ancient Mahishmati, present-day Maheshwar. Further strengthened by the devoted patronage of the Maharajas of Indore, Dewas and Gwalior, and the historic Vijaya Yatras of the previous Jagadgurus.
Stay tuned to the official WhatsApp channel for notifications and updates:
tinyurl.com/SharadaPeethamWA
*-*-*
#Mahakal #Mahakaleshwar #Ujjain #Jyotirlinga #HarHarMahadev #Sringeri #Shankaracharya #SharadaPeetham #SanatanaDharma #Mahadev #MadhyaPradesh #SringeriSharadaPeetham #Jagadguru #SriVidhushekharaBharati #Sannidhanam #Dharma #VijayaYatra #SanatanaDharma #Advaita #Vedanta #GuruParampara #VedicTradition #BharatiyaSamskriti #AdiShankaracharya #Dharma #HinduTradition #Bharat #शंकराचार्य
ಗಣಧುರಂಧರ retweeted
Justice Smiles, Joseph.
🚨#BREAKING : #SUPREMECOURT orders lighting of the #KarthigaiDeepam at the #Deepathoon tomorrow using the flame lit at the Uchipillaiyar Mandapam on 24 November.
Court clarifies that if the said flame is not burning, any other arrangements may be made, but the lamp must be lit.
ರಾಘವಾಂಕನ ಸಿದ್ಧರಾಮ ಚಾರಿತ್ರ ದಲ್ಲಿನ ಆ ವಾಕ್ಯ ಹೀಗಿದೆ " ಭೂಪ ಬಿಜ್ಜಳನಳಿದ ವೀರಜಗದೇವನಿಂ ಸಿದ್ಧ ಸಂಕೇತದಂತೆ"- ಅಂದರೆ " ಸಿದ್ಧರಾಮ ಮೋದಲೇ ಭವಿಷ್ಯ ನುಡಿದಂತೆ ಬಿಜ್ಜಳನು ಜಗದೇವನಿಂದ ಹತನಾದ "ಅಂತ. ಸಿದ್ಧರಾಮ ಹೇಳಿಸಿ ಜಗದೇವನಿಂದ ಮಾಡಿಸಿದ ಅಂತ ಅಲ್ಲ.ಅಡ್ಡಕಸುಬಿ ಸಂಶೋಧಕರ ಮಾತುಗಳನ್ನು ಉಲ್ಲೇಖಿಸುವುದನ್ನು ಬಿಟ್ಟು ಮೂಲ ಆಕರಗಳನ್ನು ಓದಿ
🚨ಪ್ರತಿಯೊಬ್ಬರೂ👇ಕೆಳಗಿನ 2 ಪುಟಗಳನ್ನು ಸಂಪೂರ್ಣವಾಗಿ ಓದಿ.ಸ್ವಯಂ ಘೋಷಿತ ಸಂಶೋಧಕ ರವಿ ಹಂಜ್ ವಿಶ್ವಗುರು ಬಸವಣ್ಣರ ವಿರುದ್ದ ಸಾರಿದ ಎಲ್ಲಾ ಸುಳ್ಳುಗಳು ನಿಮಗೇ ತಿಳಿಯಲಿವೆ. ಸಂಶೋಧಕನಿಗಿರಬೇಕಾದ ಒಂದೂ ಗುಣಗಳಿಲ್ಲ. ಪ್ರಕ್ಷಿಪ್ತ ಯಾವುದು ಇತಿಹಾಸ ಯಾವುದೆಂದೂ ತಿಳಿಯದವ ಸಂಶೋದಕನಂತೆ 🤦♂️.ಎಲ್ಲರಿಗೂ ತಪ್ಪದೇ share & Repost ಮಾಡಿ #Basavanna
3
9
532
ಬಸವರಾಜ ದೇವರ ರಗಳೆ ಸಂಪೂರ್ಣವಾಗಿ ದೊರೆತಿಲ್ಲ... ವೆಂಕಣ್ಣಯ್ಯನವರು ಹೇಳಿದಂತೆ ದೊರೆತಿರುವ ತಾಳೋಲೆಗರಿಯ ಪ್ರತಿಯಲ್ಲಿ ಕಡೆಯ ಸ್ಥಲ ಪ್ರಕ್ಷಿಪ್ತವಾದದ್ದು ಎಂದುಕೊಂಡರೂ, ತೆಲುಗು ಕವಿ ಪಾಲ್ಕುರಿಕೆ ಸೋಮನಾಥನ ಬಸವ ಪುರಾಣ ಮತ್ತು ಅದರ ಯಥಾವತ್ ಕನ್ನಡೀಕರಣ ಗೊಂಡ ಭೀಮ ಕವಿಯ ಬಸವ ಪುರಾಣಗಳು ಹೀಗೆ ಹೇಳುತ್ತವೆ
ಗಣಧುರಂಧರ retweeted
This is happening in Mumbai, in full daytime, in a public place. Minor Ms are harassing and beating a presumably Hindu couple. In a @BJP4Maharashtra ruled state. There is ZERO fear of consequence.
ಹಾಗಾದರೆ ರಂಭಾಪುರಿ ಶ್ರೀಗಳು ರವಿ ಹಂಜ್ ಗೆ ' ರೇಣುಕಾಚಾರ್ಯ ' ಪ್ರಶಸ್ತಿ ಪ್ರದಾನ ಮಾಡಿದ್ದಾದರೂ ಏಕೆ? ಅದನ್ನು ಸ್ಪಷ್ಟಪಡಿಸಬೇಕಲ್ಲವೇ?
6
246
ಬಿಜ್ಜಳ ಶೈವ....ಕಲಚೂರಿಗಳ ಅನೇಕ ಶಾಸನಗಳಲ್ಲಿ ಅವರ ಬಿರುದಾವಳಿಗಳು ಹೀಗಿವೆ...ಸುವರ್ಣ ವೃಷಭಧ್ವಜ, ಡಮರುಗ ತೂರ್ಯನಿರ್ಘೋಷಣ ಇತ್ಯಾದಿ.
ಹಾಗಾದರೆ ಇದನ್ನು ಏನು ಮಾಡುವುದು?xitter.cf/jayashivashambo/status…
ಜಗತ್ತಿಗೆ ಮಹಾಮನವೀಯತೆಯ ತತ್ವ ಭೋದಿಸಿದ
ಮಹಾಮಾನವತಾವಾದಿ ವಿಶ್ವಗುರು ಬಸವಣ್ಣನವರನ್ನು
ಅವಮಾನಿಸುವ ರೀತಿಯಲ್ಲಿ ಕಳಬೇಡ ಎಂದವರು ಬಿಜ್ಜಳನ ಭಂಡಾರದಿಂದ ಮಹಾಮನೆ ನಡೆಸಿದರು, ಹಾಗೂ ಕೊಲಬೇಡ ಎಂದವರು ಬಿಜ್ಜಳನ ಕೊಲ್ಲಿಸಿದರು ಎಂದು ಅಸಂಬದ್ಧ ಅವಿವೇಕದ ಹೇಳಿಕೆ ನೀಡಿದ ರವಿ ಹಂಜ್ ಎನ್ನುವ ವ್ಯಕ್ತಿಯ ಮನಸ್ಥಿತಿ ಎಷ್ಟು ಕೀಳುಮಟ್ಟದ್ದೆಂದರೆ,
ಯಾವ ಬಿಜ್ಜಳನ ಆಸ್ಥಾನದಲ್ಲಿ ಮಹಾಮಂತ್ರಿಯಾಗಿ ಕಾರ್ಯನಿರ್ವಹಿಸುವಾಗ
ಹೊನ್ನಿನೊಳಗೊಂದೊರೆಯ,
ವಸ್ತ್ರದೊಳಗೊಂದೆಳೆಯ
ಅನ್ನದೊಳಗೊಂದಗುಳ
ಇಂದಿಂಗೆ ನಾಳಿಂಗೆ ಬೇಕೆಂದೆನಾದರೆ
ನಿಮ್ಮಾಣೆ! ನಿಮ್ಮ ಪುರಾತರಾಣೆ.
ನಿಮ್ಮ ಶರಣರಿಗಲ್ಲದೆ ಮತ್ತೊಂದನರಿಯೆ,
ಕೂಡಲಸಂಗಮದೇವಾ.
ಎಂದು ಆತ್ಮಸಾಕ್ಷಿಯನ್ನು ಪ್ರಮಾಣಿಸಿ ಜನ ಸೇವೆಗೈದ,
ಮಹಾಮಾನವತಾವಾದಿಗೆ,
ಭಂಡಾರ ಕದ್ದ ಎನ್ನುವುದು ಎಷ್ಟು ಸರಿ.
ತಮ್ಮ ಮನೆಗೆ ಬಂದ ಕಳ್ಳನನ್ನೂ ಸಾಕ್ಷಾತ್ ಸಂಗಮನಾಥ ನೆಂದು
ಕೈಮುಗಿದು ಕರೆದು ಸತ್ಕಾರಗೈದು, ಕಳ್ಳನ ಮನಃಪರಿವರ್ತನೆ ಮಾಡಿದ ಮಹಾಮಹಿಮನನ್ನು ಕಳ್ಳ ಎಂದು ಕರೆಯುವಷ್ಟರ ಮಟ್ಟಿಗಿನ ಹೀನ ಮನಸ್ಥಿತಿಗೆ ಏನೆನ್ನಬೇಕು. ಕೊಲ್ಲಲು ಬಂದ ಚೂರಿ ಚಿಕ್ಕನೇ ಶರಣನಾಗಿ ಪರಿವರ್ತನೆಯಾದ
ಇನ್ನು,
ದಯವೇ ಧರ್ಮದ ಮೂಲವೆಂದು
ದಯೆಗಿಂತ ದೊಡ್ಡ ಧರ್ಮವಿಲ್ಲವೆಂದು ಸಾರಿ,
ಸಕಲ ಜೀವಾತ್ಮರಿಗೆ ಲೇಸ ಬಯಸಿದ ಮಹಾತ್ಮನಿಗೆ ಕೊಲೆಗಡುಕ ಎನ್ನುವುದು ತಮ್ಮ ಆತ್ಮ ಸಾಕ್ಷಿಯನ್ನೇ ಹತ್ಯೆ ಮಾಡಿಕೊಂಡಂತೆ.
ಪದವಿ ಅಧಿಕಾರಕ್ಕಿಂತ, ಸತ್ಯಶುದ್ಧ ಕಾಯಕವೇ ಶ್ರೇಷ್ಠ ಎಂದು
ಬಸವಣ್ಣನವರು ಬಿಜ್ಜಳ ರಾಜನ ಆಸ್ಥಾನದಲ್ಲಿ ಮಹಾಮಂತ್ರಿಗಳಾಗಿದ್ದರೂ, ಆ ಅಧಿಕಾರವನ್ನು ತಮ್ಮ ವೈಯಕ್ತಿಕ ಸುಖ-ಸಂಪತ್ತಿಗಾಗಿ ಬಳಸಿಕೊಳ್ಳಲಿಲ್ಲ. ಅದನ್ನು ಜನಸೇವೆಗೆ ದೊರೆತ ಒಂದು ಅವಕಾಶವೆಂದೇ ಭಾವಿಸಿದ್ದರು.
ಬಿಜ್ಜಳನ ಅರಮನೆಯಲ್ಲಿ ಚಿನ್ನದ ನಿಧಿಯ ಸುಳಿವು ದೊರೆತ ಸಂದರ್ಭದಲ್ಲಿ, ಅದರ ಸ್ಥಳವನ್ನು ಗುರುತಿಸಿ ರಾಜನಿಗೆ ತಿಳಿಸಿದರೆಂದು ಹೇಳಲಾಗುವ ಪ್ರಸಂಗವು ಬಸವಣ್ಣನವರ ನೈತಿಕ ನಿಷ್ಠೆಯನ್ನು ಪ್ರತಿಬಿಂಬಿಸುತ್ತದೆ.
ಸೇವಕರಿಂದ ಆ ಸ್ಥಳವನ್ನು ಅಗೆಸಿದಾಗ ಅಪಾರ ಪ್ರಮಾಣದ ಚಿನ್ನದ ಖಜಾನೆ ದೊರೆಯುತ್ತದೆ. ಅದನ್ನು ಕಂಡು ಸಂತೋಷಗೊಂಡ ರಾಜ ಬಿಜ್ಜಳನು ಬಸವಣ್ಣನವರಿಗೆ, 'ನಿಮಗೆ ಎಷ್ಟು ಪಾಲು ಬೇಕು?' ಎಂದು ಕೇಳುತ್ತಾನೆ.
ಆಗ ಬಸವಣ್ಣನವರು ರಾಜನಿಗೆ ಹೀಗೆ ಎಚ್ಚರಿಸುತ್ತಾರೆ:
ಊರ ಮುಂದೆ ಹಾಲ ಹಳ್ಳ ಹರಿವುತ್ತಿರಲು,
ಒರೆಯಾವಿನ ಬೆನ್ನ ಹರಿಯಲದೇಕಯ್ಯಾ?
ಲಜ್ಜೆಗೆಡಲೇಕೆ, ನಾಣುಗೆಡಲೇಕೆ?
ಕೂಡಲಸಂಗಮದೇವನುಳ್ಳನ್ನಕ್ಕ
ಬಿಜ್ಜಳನ ಭಂಡಾರವೆನಗೇಕಯ್ಯಾ?
ಈ ವಚನದ ಮೂಲಕ ಬಸವಣ್ಣನವರು, ಸಾರ್ವಜನಿಕ ಸಂಪತ್ತಿನ ಮೇಲೆ ವೈಯಕ್ತಿಕ ಆಸೆ ಪಡುವುದು ಸರಿಯಲ್ಲ ಎಂಬ ಸಂದೇಶವನ್ನು ಸಾರುತ್ತಾರೆ.
ರಾಜನಾಗಲಿ, ಮಂತ್ರಿಯಾಗಲಿ, ರಾಜ್ಯದ ಜನರ ಸಂಪತ್ತನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳಬಾರದು. ಜನರ ಸಂಪತ್ತು ಜನರ ಒಳಿತಿಗಾಗಿಯೇ ವಿನಿಯೋಗವಾಗಬೇಕು. ನನಗೆ ನನ್ನ ಸತ್ಯಶುದ್ಧ ಕಾಯಕದಿಂದ ಬಂದ ಸಂಪತ್ತೇ ಸಾಕು ಎಂದ ಬಸವಣ್ಣನವರನ್ನು ಕಳ್ಳನೆಂದು ಕರೆಯುವುದು, ಆತ್ಮದ್ರೋಹವಲ್ಲದೆ ಮತ್ತೇನು.
ಎಲ್ಲರಿಗೂ ಎನ್ನಗಿಂತ ಕಿರಿಯರಿಲ್ಲ ಎಂದು ಶಿರಬಾಗಿ ಶರಣು ಶರಣಾರ್ಥಿ ಎಂದ ಸದುವಿನಯದ ಸಾಕಾರ ಮೂರ್ತಿ ಬಸವಣ್ಣನವರಿಗೆ ಏಕವಚನದಲ್ಲಿ ಅವಮಾನಿಸುವುದು ಎಷ್ಟು ಸಮಂಜಸ, ಕೋಟ್ಯಂತರ ಹೃದಯಗಳ ಒಡೆಯ
ಜಗಮೆಚ್ಚಿದ ಕನ್ನಡಿಗನ, ಜಾತಿ, ಧರ್ಮ, ವರ್ಗ, ವರ್ಣತೀತವಾಗಿ ಅವರ ಬಗ್ಗೆ ಜನರ ಹೃದಯದಲ್ಲಿ ಅಭಿಮಾನ ಎಷ್ಟಿದೆ ಎಂದರೆ, ಒಂಬತ್ತು ಶತಮಾನಗಳು ಗತಿಸಿದರೂ
ನಮ್ಮೆಲ್ಲರ ಅಂತಃಕರಣ ಅಸ್ಮಿತೆಯಾಗಿ,ಬರಿ ನಾಡಿನಲ್ಲಲ್ಲದೇ ದೇಶವಿದೇಶಗಳಲ್ಲೂ
ಅವರ ತತ್ವಾದರ್ಶಗಳು ಪಸರಿಸಿವೆ, ಇಡೀ ವಿಶ್ವದಾದ್ಯಂತ ಎಲ್ಲರೂ ಬಸವಣ್ಣನವರ ತತ್ವಗಳನ್ನು ಅತ್ಯಂತ ಗೌರವದಿಂದ ಕಾಣುತ್ತಾರೆ, ಹೀಗಿರುವಾಗ ವಿಶ್ವಗುರು ಬಸವಣ್ಣನವರ ಬಗ್ಗೆ ಹೀನಾಯವಾಗಿ ಮಾತಾಡುವುದು ಎಷ್ಟು ಉಚಿತ ಹೇಳಿ, ಮಾತಿನಿಂದಲೇ ಸನ್ಮಾನ, ಮಾತಿನಿಂದಲೇ ಅವಮಾನ,ಅಲ್ಲವೇ
ತಾವಾಡುವ ಪ್ರತಿನುಡಿಯು ಮುತ್ತಿನ ಹಾರದಂತಿರಬೇಕು ಎಂದ ಜಗಜ್ಯೋತಿ ಬಸವಣ್ಣನವರ ಬಗ್ಗೆ ಮಾತಾಡುವಾಗ ನಾಲಿಗೆ ಮೇಲೆ ಹಿಡಿತ ಖಂಡಿಯ ಇರಲೇ ಬೇಕು,
ಮೃದು ವಚನವೇ ಸಕಲ ಜಪಂಗಳಯ್ಯ,
ಮೃದು ವಚನವೇ ಸಕಲ ತಪಂಗಳಯ್ಯ.
ದುವಿನಯವೇ ಸದಾಶಿವನೊಲುಮೆಯಯ್ಯ, ಎಂದವರ ಬಗ್ಗೆ ಅಂತರಂಗದಲ್ಲಿ ಕೆಟ್ಟದಾಗಿ ಭಾವಿಸಿದರೂ ಕೂಡ ಆತ್ಮದ್ರೋಹ, ಅಪರಾಧವೇ ಸರಿ,
ಶರಣರನ್ನು ನಿಂದಿಸುವುದು
ಹಾವಿನ ಹೆಡೆಗಳ ಕೊಂಡು ಕೆನ್ನೆಯ ತುರಿಸುವಂತೆ,
ಉರಿಯ ಕೊಳ್ಳಿಯ ಕೊಂಡು ಮಂಡೆಯ ಸಿಕ್ಕ ಬಿಡಿಸುವಂತೆ,
ಹುಲಿಯ ಮೀಸೆಯ ಹಿಡಿದುಕೊಂಡು ಒಲಿದುಯ್ಯಾಲೆಯನಾಡುವಂತೆ,
ಕೂಡಲಸಂಗನ ಶರಣರೊಡನೆ ಮರೆದು ಸರಸವಾಡಿದಡೆ ಸುಣ್ಣಕಲ್ಲ ಮಡಿಲಲ್ಲಿ ಕಟ್ಟಿಕೊಂಡು ಮಡುವ ಬಿದ್ದಂತೆ.
ಒಂದು ಬಾರಿ ಬಾಯ್ತಪ್ಪಿ ನುಡಿದರೂ
ಕೈತಪ್ಪಿ ಕೆತ್ತಲು ಕಾಲಿಗೆ ಮೂಲ
ಮಾತು ತಪ್ಪಿ ನುಡಿಯಲು ಬಾಯಿಗೆ ಮೂಲವೆಂಬಂತೆ, ಶರಣರ ಬಗ್ಗೆ ನುಡಿಯುವಾಗ ಅರಿವಿನಿಂದ ನುಡಿಯಬೇಕು, ಮೈಯೆಲ್ಲ ಕಣ್ಣಾಗಿರಬೇಕು,
ಇಲ್ಲದಿದ್ದಲ್ಲಿ ಬೆಂಕಿಯುಂಡೆಯನ್ನೇ ಸೆರಗಿನಲ್ಲಿ ಕಟ್ಟಿಕೊಂಡಂತಾಗುತ್ತದೆ,
ಎಚ್ಚರ, ಹೀನ ಮನಸ್ಥಿತಿಗಳೇ ಎಚ್ಚರಾ.
187
ಗಣಧುರಂಧರ retweeted
ಬುರ್ರಕಥಾ ಜನಪದ ಕಲೆ. ಆಂಧ್ರದ ಗರಿವಿಡಿ ಲಕ್ಷ್ಮಿ. ಕರ್ನಾಟಕದ ದರೋಜಿ ಈರಮ್ಮ.
ಆಂಧ್ರಪ್ರದೇಶದ ಉತ್ತರಾಂಧ್ರ ಭಾಗದ ವಿಜಯನಗರಂ ಜಿಲ್ಲೆಯ ಬುರ್ರಕಥಾ ಕಲಾವಿದೆ ಗರಿವಿಡಿ ಪೆದ್ದಲಕ್ಷ್ಮಿಯವರ ಬದುಕು ಮತ್ತು ಕಲಾಸಾಧನೆಯನ್ನು ಆಧರಿಸಿದ ‘ಗರಿವಿಡಿ ಲಕ್ಷ್ಮಿ’ ಚಲನಚಿತ್ರದ ಮೂಲಕ ತೆಲುಗು ಜನತೆ ತಮ್ಮ ಜನಪದ ಕಲೆಯ ಮಹಾನ್ ಸಾಧಕಿಯೊಬ್ಬರನ್ನು ಸಂಭ್ರಮಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ, ಕರ್ನಾಟಕವೂ ಬಳ್ಳಾರಿಯ ಸೊಂಡೂರಿನ ದರೋಜಿ ಎಂಬ ಪುಟ್ಟ ಹಳ್ಳಿಯ ತನ್ನದೇ ಆದ ಅಪ್ರತಿಮ ಜನಪದ ಕಲಾವಿದೆ "ದರೋಜಿ ಈರಮ್ಮ"ನವರನ್ನು ನೆನಪಿಸಿಕೊಳ್ಳಬೇಕಿದೆ!
ಬುಡಗ ಜಂಗಮ ಸಮುದಾಯದಲ್ಲಿ ಜನಿಸಿದ ಈರಮ್ಮನವರು, ಅಕ್ಷರಜ್ಞಾನವಿಲ್ಲದಿದ್ದರೂ ಸುಮಾರು 7,000 ಪುಟಗಳಾಗುವಷ್ಟರ 2 ಲಕ್ಷ ಸಾಲುಗಳ ಜನಪದ ಮಹಾಕಾವ್ಯಗಳನ್ನು ತಮ್ಮ ಸ್ಮೃತಿಯಲ್ಲೇ ಹೊತ್ತು, ತಲೆಮಾರುಗಳಿಗೆ ದಾಟಿಸಿದ ಅಸಾಧಾರಣ ಪ್ರತಿಭೆ. ಶಿವಮ್ಮ ಮತ್ತು ಪಾರ್ವತಮ್ಮನವರೊಂದಿಗೆ ಸೇರಿ ತೆಲುಗು ನಾಡಿನ ಮೂಲದ ಬುರ್ರಕಥಾ ಪರಂಪರೆಯನ್ನು ಕನ್ನಡಕ್ಕೆ ತಂದು, ನಮ್ಮ ಮೌಖಿಕ ಸಾಹಿತ್ಯ ಮತ್ತು ಜನಪದ ಪರಂಪರೆಯನ್ನು ಶ್ರೀಮಂತಗೊಳಿಸಿದವರು.
ಇಷ್ಟೆಲ್ಲಾ ಸಾಧನೆಗಳ ನಡುವೆಯೂ ಈರಮ್ಮನವರು ತಮ್ಮ ಬದುಕಿನ ಬಹುಪಾಲನ್ನು ಬಡತನದಲ್ಲೇ ಕಳೆದರು. 2014ರಲ್ಲಿ ಅವರು ಕೊನೆಯ ದಿನಗಳನ್ನು ಆಸ್ಪತ್ರೆಯಲ್ಲಿ ಕಳೆಯುತ್ತಿದ್ದಾಗಲೂ, ಅವರ ನಿಧನದ ಸಂದರ್ಭದಲ್ಲೂ ಕರ್ನಾಟಕದ ಅಂದಿನ ಮುಖ್ಯಮಂತ್ರಿ ಎನಿಸಿಕೊಂಡವರು ಖುದ್ದಾಗಿ ಭೇಟಿ ನೀಡಿದ ಬಗ್ಗೆ ವರದಿಗಳೇ ಇಲ್ಲ!
"ನಮ್ಮ ಭಾಷೆ ಮತ್ತು ಜನಪದ ಪರಂಪರೆಯನ್ನು ಜೀವಂತವಾಗಿರಿಸಿದ ಇಂತಹ ಸಾಧಕರ ಬದುಕು, ಕಲೆ ಮತ್ತು ಪರಂಪರೆಯನ್ನು ಉಳಿಸಲು ಕೇವಲ ಪ್ರಶಸ್ತಿ, ಸನ್ಮಾನಗಳಷ್ಟೇ ಸಾಕೇ?" ಎಂಬ ಪ್ರಶ್ನೆಯನ್ನು ಕರ್ನಾಟಕದಲ್ಲಿ ಆಡಳಿತದ ಚುಕ್ಕಾಣಿ ಹಿಡಿದ ಎಲ್ಲ ರಾಜಕೀಯ ಪಕ್ಷಗಳೂ ಮತ್ತು "ಕನ್ನಡ ಕನ್ನಡ" ಅಂತ ಎದ್ದೂ ಬಿದ್ದೂ ಓಲಾಡುವವರು ತಮ್ಮನ್ನು ತಾವು ಕೇಳಿಕೊಳ್ಳಬೇಕಿದೆ.
ಬೇಂದ್ರೆ ಅಜ್ಜ “ಕನ್ನಡವು ಕನ್ನಡವ ಕನ್ನಡಿಸುತಿರಲಿ” ಎಂದಿದ್ದರು. ಆದರೆ ಈರಮ್ಮನವರಂತಹ ಮಹಾನ್ ಸಾಧಕರನ್ನೇ ನಾವು ಹೀಗೆ ನಿರ್ಲಕ್ಷಿಸುತ್ತಾ ಹೋದರೆ, ಬೇಂದ್ರೆಯವರ ಆ ಆಶಯ ಸಾಕಾರಗೊಳ್ಳುವುದಾದರೂ ಹೇಗೆ?
ನಾನು ಮತ್ತೊಮ್ಮೆ ಮಗದೊಮ್ಮೆ ಹೇಳುತ್ತೇನೆ. ಬೆಂಗಳೂರಿಗೆ ಉದ್ಯೋಗ ಅರಸಿ ಬಂದು, ಇಲ್ಲಿ ಕೆಲವು ವರ್ಷ ನೆಲೆಸುವ ಹೊರನಾಡಿನ ಕೆಲವರು ಕನ್ನಡ ಕಲಿಯಬೇಕು, ಕನ್ನಡವನ್ನು ಅಪ್ಪಿಕೊಳ್ಳಬೇಕು ಎಂದು ನಿರೀಕ್ಷಿಸುವುದರಿಂದಷ್ಟೇ ಕನ್ನಡ ಉಳಿಯುವುದೂ ಇಲ್ಲ, ಬೆಳೆಯುವುದೂ ಇಲ್ಲ. ಕನ್ನಡದ ಭವಿಷ್ಯವನ್ನು ಕೇವಲ ಆ ನಿರೀಕ್ಷೆಯ ಮೇಲೆ ಕಟ್ಟಲಾಗದು.
ಕನ್ನಡದ ಮಕ್ಕಳು ಕನ್ನಡವನ್ನು ತಮ್ಮದೆಂದು ಹೆಮ್ಮೆಯಿಂದ ಅಪ್ಪಿಕೊಂಡು, ಅದರ ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಪರಂಪರೆಗಳನ್ನು ಅರಿತು, ಅವುಗಳನ್ನು ತಮ್ಮ ನಿತ್ಯದ ಬದುಕಿನ ಭಾಗವಾಗಿಸಿಕೊಂಡಾಗ ಮಾತ್ರ ಕನ್ನಡ ಮುಂದಿನ ಅನೇಕಾನೇಕ ತಲೆಮಾರುಗಳವರೆಗೆ ಉಳಿದು, ಬೆಳೆದು, ಬೆಳಗಲು ಸಾಧ್ಯ.
ತಾಯಿ ಭುವನೇಶ್ವರಿಯನ್ನೇ ಕನ್ನಡನಾಡಿನ ಅಧಿದೇವತೆಯಾಗಿ ಆರಾಧಿಸುವ ಈ ನೆಲದಲ್ಲಿ, ದರೋಜಿ ಈರಮ್ಮನವರಂತಹ ಮಹಾನ್ ಸಾಧಕಿಯರನ್ನು ಮರೆತಿರುವುದು ವಿಪರ್ಯಾಸ!
ಕನ್ನಡವನ್ನು ತಾಯಿಯೆಂದು ಪೂಜಿಸುವ ನಾಡು, ಆ ತಾಯಿಯ ನುಡಿಗೆ ಜೀವತುಂಬಿದ ಹೆಣ್ಣುಮಗಳೊಬ್ಬಳನ್ನು ಮರೆಯಬಾರದು!
ಎಲ್ಲರಿಗೂ ದುರ್ಗಾಷ್ಟಮೀ/ನವಮೀ ಶುಭಕಾಮನೆಗಳು. 🙏
ಹರಿಹರನ ಬಸವರಾಜದೇವರ ರಗಳೆ 'ಬಸವರಾಜಂ ದಂಡನಾಥ',' ಬಸವ ದಂಡನಾಥ' ಉಲ್ಲೇಖ ಅನೇಕ ಕಡೆಗಳಲ್ಲಿ ಇವೆ.."ಹರಿಹರ ವಿರಚಿತ ಕನ್ನಡ ಶರಣರ ಕಥೆಗಳು " , ಕನ್ನಡ ಪುಸ್ತಕ ಪ್ರಾಧಿಕಾರ. ಗೌರವ ಸಂಪಾದಕ: ಎಂ.ಎಂ.ಕಲಬುರ್ಗಿ.. 'ಸಿದ್ಧಅಲ್ಲಮ' ಪದವೂ ಅಷ್ಟೇ ಪ್ರಭುದೇವರ ರಗಳೆಯಲ್ಲಿ ಅನೇಕ ಕಡೆ ಇದೆ. ... ಅಂದಮಾತ್ರಕ್ಕೆ ಅವರು ನಾಥರೋ,ಸಿದ್ಧರೋ ಅಲ್ಲ..
ಅಪ್ರತಿಮ ಸಂಶೋಧಕ ಡಾ. ಎಂ ಎಂ ಕಲಬುರ್ಗಿ ಆಗಸ್ಟ್ 30, 2015ರಂದು ಹಂತಕರ ಗುಂಡಿಗೆ ಬಲಿಯಾದರು. ಈ ತಿಂಗಳು ಪೂರ್ತಿ ಬಸವ ಮೀಡಿಯಾ ಕಲಬುರ್ಗಿ ಅವರ ಸಂಶೋಧನೆ ಹಾಗೂ ಚಿಂತನೆಯನ್ನು ಸರಳ ಕನ್ನಡದಲ್ಲಿ ಪರಿಚಯ ಮಾಡಿಕೊಡಲಿದೆ.
#ಕಲಬುರ್ಗಿಮಾಸ #MMKalburgi
6. ಬಸವಣ್ಣ, ಸಿದ್ಧರಾಮ, ಪಂಡಿತಾರಾಧ್ಯ
12ನೇ ಶತಮಾನದಲ್ಲಿ ಬಸವಣ್ಣ, ಸಿದ್ಧರಾಮ, ಪಂಡಿತಾರಾಧ್ಯ ಪ್ರಭಾವಿ ಧಾರ್ಮಿಕ ಗುರುಗಳಾಗಿದ್ದರು.
ಸಿದ್ಧರಾಮ ಹಾಗೂ ಪಂಡಿತಾರಾಧ್ಯ ಬಸವಭಕ್ತರಾದ ಮೇಲೆ ಅವರ ಅನುಯಾಯಿಗಳೂ ಶರಣ ಚಳುವಳಿಯೊಳಗೆ ಸೇರಿಕೊಂಡರು.
ಸಿದ್ಧರಾಮರ ಅನುಯಾಯಿಗಳು ಶರಣರಲ್ಲಿ ಸಂಪೂರ್ಣವಾಗಿ ಲೀನವಾದರೆ, ಪಂಡಿತಾರಾಧ್ಯರ ಅನುಯಾಯಿಗಳು ಒಳ ಬಂದರೂ ಭಿನ್ನವಾಗಿಯೇ ಉಳಿದರು. ಇದು ಮುಂದೆ ಶರಣ ಚಳುವಳಿಯ ಮೇಲೆ ಗಾಢವಾದ ಪ್ರಭಾವ ಬೀರಿತು.
ನಾಥ ಪಂಥದ ಪ್ರಸಿದ್ಧ ಗುರು ಸಿದ್ಧರಾಮರು
ಮಹಾರಾಷ್ಟ್ರದಲ್ಲಿ ಸಿದ್ಧರಾಮರು, ಆಂಧ್ರ ಪ್ರದೇಶದಲ್ಲಿ ಪಂಡಿತಾರಾಧ್ಯರು ೧೨ನೇ ಶತಮಾನದ ಪ್ರಸಿದ್ಧ ಗುರುಗಳು. ಇವರಿಬ್ಬರೂ ತಮ್ಮ ಸಮಕಾಲೀನರಾಗಿದ್ದ ಬಸವಣ್ಣನವರ ಭಕ್ತರಾದರು.
ಸಿದ್ಧರಾಮರ ನಾಥ-ಸಿದ್ದ ಪಂಥ ಶರಣ ಧರ್ಮದಲ್ಲಿ ಲೀನವಾಯಿತು. ಪಂಡಿತಾರಾಧ್ಯರ ಭಕ್ತರಾಗಿದ್ದ ಆರಾಧ್ಯರು ಒಳ ಬಂದರೂ ಪ್ರತ್ಯೇಕವಾಗಿ ಉಳಿದುಕೊಂಡು ಕಾಲಕ್ರಮೇಣ ವೀರಶೈವರಾಗಿ ಬೆಳೆದರು.
ಸಿದ್ದರಾಮರ ಮೂಲ ಹೆಸರು ರಾಮಯ್ಯ. ಸಿದ್ಧರಾಗಿದ್ದರಿಂದ ಅವರ ಹೆಸರು ‘ಸಿದ್ದರಾಮಯ್ಯ’ ಎಂದಾಯಿತು. ಸಿದ್ದರಾಮರು ಪ್ರಸಿದ್ಧ ನಾಥ-ಸಿದ್ದ ಗುರು ರೇವಣಸಿದ್ದರ ಕಿರಿಯ ಸಮಕಾಲೀನರು.
ಸಿದ್ದರಲ್ಲಿ ವಾಮಾಚಾರದತ್ತ ತಿರುಗುತ್ತಿದ್ದ ಕಾಪಾಲಿಕ ಸಿದ್ದ ಮತ್ತು ಶಿವಪರವಾಗಿದ್ದ ನಾಥ-ಸಿದ್ದ ಪಂಥಗಳಿದ್ದವು. ಸಿದ್ಧರಾಮರು ಕಾಪಾಲಿಕ ಸಿದ್ದರನ್ನು ತಿರಸ್ಕರಿಸಿ ನಾಥ-ಸಿದ್ದ ಪಂಥದ ಗುರುಗಳಾದರು.
ಸಿದ್ದರಾಮರ ಪಭಾವ ಮಹಾರಾಷ್ಟ್ರ, ಕರ್ನಾಟಕಗಳಲ್ಲಿ ವ್ಯಾಪಕವಾಗಿ ಹರಡಿತ್ತು. ಅನೇಕ ಅರಸರು ಇವರಿಗೆ ದತ್ತಿ ನೀಡಿರುವ ಶಾಸನಗಳು ಎರಡೂ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ದೊರೆಯುತ್ತವೆ.
ಕುರುಬರಾಗಿ ಹುಟ್ಟಿದ್ದ ಸಿದ್ಧರಾಮರು ಜಾತಿ ನಿಂದನೆ ಎದುರಿಸಿದರು. ಇವರು ಕಟ್ಟಿದ ಕೆರೆಯನ್ನು ಮೊರಬ ಬ್ರಾಹ್ಮಣರು ‘ಶೂದ್ರ’ ಕಟ್ಟಿಸಿದ ಕೆರೆಯೆಂದು ತೆಗಳಿದ್ದು ‘ಸಿದ್ದರಾಮ ಚರಿತ್ರೆ’ಯಲ್ಲಿ ದಾಖಲಾಗಿದೆ.
(‘ಸಿದ್ದರಾಮ ಮತ್ತು ನಾಥ ಸಂಪ್ರದಾಯ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೪)
ಬಸವ ಭಕ್ತರಾದ ಸಿದ್ಧರಾಮರು
ಸಿದ್ಧರಾಮರು ಶ್ರೀಶೈಲದ ಕಪಿಲ ಮಲ್ಲಿಕಾರ್ಜುನನ ಭಕ್ತರು. ತಮ್ಮ ನೆಲೆ ಸೊಲ್ಲಾಪುರವನ್ನು ‘ಅಭಿನವ ಶ್ರೀಶೈಲ’ವಾಗಿ ಬೆಳೆಸಲು ಹಲವಾರು ಕ್ಷೇತ್ರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಪ್ರಸಿದ್ಧರಾದರು.
ಲೋಕಕಲ್ಯಾಣಕ್ಕಾಗಿ ಅವರು ಅನೇಕ ದೇವಸ್ಥಾನ, ಕೆರೆ, ಉದ್ಯಾನಗಳನ್ನು ನಿರ್ಮಿಸಿದರು. ಯೋಗರಮಣೀಯ ಕ್ಷೇತ್ರ ಮತ್ತು ಅಷ್ಟಷಷ್ಠಿ ತೀರ್ಥ ಕ್ಷೇತ್ರ ಅವರ ಮುಖ್ಯ ಸಾಧನೆಗಳು.
ಸಿದ್ಧರಾಮರು ಅನೇಕ ಸ್ಥಾವರ ಲಿಂಗದ ದೇವಸ್ಥಾನಗಳನ್ನು ಸ್ಥಾಪಿಸಿದ್ದರು. ಬಹು ದೇವತಾ ಆರಾಧಕರಾಗಿದ್ದ ಅವರು ಅಭಿಷೇಕ, ಹೋಮಗಳಂತಹ ವೈದಿಕ ಆಚರಣೆಗಳಲ್ಲಿ ಮುಳುಗಿದ್ದರು.
ಲೋಕ ಕಲ್ಯಾಣಕ್ಕಾಗಿ ದುಡಿದರೂ, ಅವರ ಸಾಧನೆಯಲ್ಲಿ ಬಾಹ್ಯ ಆಡಂಬರವೇ ಪ್ರಬಲವಾಗಿತ್ತು. ಅಲ್ಲಮ ಪ್ರಭುಗಳ ಪ್ರಭಾವದಿಂದ ಅಂತರಂಗದ ಸಾಧನೆಯ ಮಹತ್ವದ ಅರಿವಾಗಿ ಕಲ್ಯಾಣಕ್ಕೆ ಬಂದರು.
ಅಲ್ಲಿ ಬಸವಣ್ಣನವರ ಪ್ರಭಾವದಿಂದ ಇಷ್ಟಲಿಂಗ ದೀಕ್ಷೆ ಪಡೆದು ಶರಣರಾದರು. ಹಲವಾರು ವಚನಗಳನ್ನು ರಚಿಸಿದ್ದು ಮಾತ್ರವಲ್ಲದೆ, ಬಸವ ಸ್ತೋತ್ರ ತ್ರಿವಿಧಿಯಂತಹ ಕೃತಿಗಳನ್ನೂ ರಚಿಸಿದರು.
ಸಿದ್ಧರಾಮರ ಜೊತೆ ಅಪಾರ ಸಂಖ್ಯೆಯಲ್ಲಿದ್ದ ಅವರ ಭಕ್ತರೂ ಶರಣರನ್ನು ಸೇರಿಕೊಂಡರು. ಕೆಲವೇ ವರ್ಷಗಳಲ್ಲಿ ಶರಣ ಚಳುವಳಿ ಪ್ರವಾಹದಂತೆ ಹೊಮ್ಮಲು ಇದೂ ಒಂದು ಮುಖ್ಯ ಕಾರಣವಾಯಿತು.
(‘ಸಿದ್ದರಾಮ-ಬಸವಣ್ಣ-ಪಂಡಿತಾರಾಧ್ಯ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೪)
ಬಸವ ಭಕ್ತರಾದ ಆರಾಧ್ಯರ ಗುರು ಪಂಡಿತಾರಾಧ್ಯರು
೧೨ನೇ ಶತಮಾನದ ಮಲ್ಲಿಕಾರ್ಜುನ ಪಂಡಿತಾರಾಧ್ಯರು ಆಂಧ್ರದ ಆರಾಧ್ಯರ ಗುರುಗಳು. ವೀರಶೈವ ಪರಂಪರೆಗೆ ಅಡಿಗಲ್ಲು ಹಾಕಿದ ಇವರು ಪಂಚಾಚಾರ್ಯರಲ್ಲಿ ಪ್ರಮುಖರಾಗಿ ರೂಪುಗೊಂಡರು.
‘ಬಸವ ಪುರಾಣಮು’ ಬರೆದ ಪಾಲ್ಕುರಿಕೆ ಸೋಮನಾಥ ‘ಪಂಡಿತಾರಾಧ್ಯ ಚರಿತಮು’ ಕೃತಿಯನ್ನೂ ರಚಿಸಿದ. ತೆಲುಗು, ಕನ್ನಡ, ಸಂಸ್ಕೃತದ ಹಲವಾರು ಕೃತಿಗಳಲ್ಲಿ ಇವರ ಜೀವನ, ಸಾಧನೆ ದಾಖಲಾಗಿದೆ.
ಶರಣ ಚಳುವಳಿ ಪಂಡಿತಾರಾಧ್ಯರ ಮೇಲೆ ಪ್ರಬಲವಾದ ಪ್ರಭಾವ ಬೀರಿತ್ತು. ಬಸವಣ್ಣನವರ ಕಾರ್ಯಕ್ಕೆ ಪೂರಕವಾಗಿ ಶ್ರಮಿಸಲು ಅವರು ಹುಟ್ಟಿದರೆಂದು ಸೋಮನಾಥ ಹೇಳುತ್ತಾನೆ.
ಅವರು ಕೂಡ ಹುಟ್ಟಿದ್ಧ ವೈದಿಕ ಕುಟುಂಬವನ್ನು ದಿಕ್ಕರಿಸಿ ಹೊರನಡೆದರು. ಆಗ ನಡೆದ ವಾಗ್ವಾದದಲ್ಲಿ ಅವರು ಬಸವಣ್ಣ, ಚನ್ನಯ್ಯ, ಕಕ್ಕಯ್ಯನಂತಹ ಶರಣರ ಸಾಧನೆಗಳನ್ನು ಬಳಸಿಕೊಂಡರು.
ಕಲ್ಯಾಣಕ್ಕೆ ಬರುತ್ತಿದ್ದ ಪಂಡಿತಾರಾಧ್ಯರಿಗೆ ಎಂಟು ದಿನದ ಹಿಂದೆ ಬಸವಣ್ಣನವರು ಲಿಂಗೈಕ್ಯವಾದ ಸುದ್ದಿ ತಿಳಿಯಿತು. ದುಃಖದಿಂದ ‘ಬಸವ ಬಸವ…’ ಎಂದು ಸ್ತುತಿಸುತ್ತಾ ಅರ್ಧ ದಾರಿಯಿಂದಲೇ ಹಿಂದಿರುಗಿದರು.
ಶ್ರೀಶೈಲಕ್ಕೆ ಹೋಗಿ ಮಲ್ಲಿಕಾರ್ಜುನನ ಹತ್ತಿರ ತಮ್ಮನ್ನೂ ಬಸವಣ್ಣನವರಂತೆ ಐಕ್ಯ ಮಾಡಿಕೋ ಎಂದು ಬೇಡಿಕೊಂಡರು. ಅವರ ನಿಧನದ ನಂತರ ಅವರ ಮಗ ಕೇದಾರಯ್ಯ ಪಟ್ಟಕ್ಕೆ ಬಂದರು.
(‘ಸಿದ್ದರಾಮ-ಬಸವಣ್ಣ-ಪಂಡಿತಾರಾಧ್ಯ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೪)
ಶರಣರಲ್ಲಿ ಸಂಪೂರ್ಣವಾಗಿ ಲೀನವಾಗದ ಆರಾಧ್ಯರು
ವೈದಿಕ ಮೂಲದವರಾಗಿದ್ದರೂ ಮಲ್ಲಿಕಾರ್ಜುನ ಪಂಡಿತಾರಾಧ್ಯರು ಬಸವಣ್ಣನವರ ಪ್ರಭಾವದಿಂದ ಇಷ್ಟಲಿಂಗ ಹಿಡಿದರು. ಅವರ ಆರಾಧ್ಯ ಭಕ್ತರೂ ಕೂಡ ಶರಣ ಚಳುವಳಿಯನ್ನು ಸೇರಿಕೊಂಡರು.
ಪಂಡಿತಾರಾಧ್ಯರು ರಚಿಸಿದ ‘ಶಿವತತ್ವ ಸಾರಮು’ ಗ್ರಂಥದಲ್ಲಿ ಶರಣ, ವೈದಿಕ ತತ್ವಗಳ ಮಿಶ್ರಣ ಕಾಣುತ್ತದೆ. ಅವರು ಇಷ್ಟಲಿಂಗ ಸ್ತೋತ್ರ, ಬಸವ ಗೀತ ಮುಂತಾದ ಶರಣ ಕೃತಿಗಳನ್ನೂ ರಚಿಸಿದರು.
ಕಲ್ಯಾಣಕ್ಕೆ ಬರುತ್ತಿದ್ದ ಪಂಡಿತಾರಾಧ್ಯರು ಬಸವಣ್ಣ ಲೈಂಗೈಕ್ಯರಾದ ಸುದ್ದಿ ಕೇಳಿ ಹಿಂದಿರುಗಿದರು. ಅವರ ಪರಂಪರೆ ಸಂಪೂರ್ಣವಾಗಿ ಶರಣರಲ್ಲಿ ಲೀನವಾಗುವ ಅವಕಾಶ ತಪ್ಪಿಹೋಯಿತು.
ಸಿದ್ಧರಾಮರಿಗೆ ಉತ್ತರಾಧಿಕಾರಿ ಇಲ್ಲದ್ದರಿಂದ ನಾಥರು ಶರಣರಲ್ಲಿ ಲೀನರಾದರು. ಆದರೆ ಪಂಡಿತಾರಾಧ್ಯರ ನಂತರ ಅವರ ಮಗ ಪಟ್ಟಕ್ಕೆ ಬಂದಿದ್ದರಿಂದ ಆರಾಧ್ಯರು ಪ್ರತ್ಯೇಕವಾಗಿಯೇ ಉಳಿದರು.
ಆರಾಧ್ಯರು ಇಷ್ಟಲಿಂಗ ಧರಿಸಿದರೂ ಜನಿವಾರ ಬಿಡಲಿಲ್ಲ. ಶರಣ ಚಳುವಳಿಯಲ್ಲಿ ಸೇರಿಕೊಂಡರೂ ಪ್ರತ್ಯೇಕ ಜಾತಿ ಜಂಗಮರಾಗಿ, ವೈದಿಕತೆ ತುಂಬಿದ್ದ ಭಿನ್ನ ಪರಂಪರೆಯನ್ನು ಬೆಳೆಸಿದರು.
ಪಂಡಿತಾರಾಧ್ಯರೂ ಸೇರಿದಂತೆ ಆರಾಧ್ಯರು ಮೊದಮೊದಲು ಬಸವ ನಿಷ್ಠೆಯಿಂದಿದ್ದರು. ಆದರೆ ಮುಂದಿನ ಶತಮಾನಗಳಲ್ಲಿ ಪಂಚಾಚಾರ್ಯ ಪರಂಪರೆ ಬೆಳೆದಂತೆ ಅವರ ಬಸವ ನಿಷ್ಠೆ ಕ್ಷೀಣಿಸಿತು.
(‘ಸಿದ್ದರಾಮ-ಬಸವಣ್ಣ-ಪಂಡಿತಾರಾಧ್ಯ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೪)
1
5
351
ಗಣಧುರಂಧರ retweeted
Kitturu Rani Chennamma on Yakshagana ranga. Her valour survives the retelling! Beautiful adaptation by Yaksha Kala Academy, Bengaluru.
ಗಣಧುರಂಧರ retweeted
Built between 1124-1126 CE by Ajjama Nayaka under the patronage of Rani Lakshmi Devi - Pattamahishi of Vikramaditya VI of the Kalyani Chalukyas, this devasthana was originally named Ajjameshvara Gudi. Today, it is known as Dodda Basappana Gudi, named after the colossal Nandi that graces its mukha-mantapa.
2/n
ತಲೆಕಟ್ಟು,ತಲೆಕಟ್ಟಿನ/ಗೆ ಇಳಿ/ಸು, ಗುಣಿಸುತ್ತು, ಗುಣಿಸುತ್ತಿನ ದೀರ್ಘ,ಕೊಂಬು,ಕೊಂಬಿನ/ಗೆ ಇಳಿ/ಸು,ಹೊಟ್ಟೆಸುಳಿ, ಎತ್ವ,ಎತ್ವನ ದೀರ್ಘ,ಐತ್ವ,ಒತ್ವ,ಓತ್ವನ ದೀರ್ಘ,ಜೌತ್ವ.
@ncert ಇಳಿ, ದೀರ್ಘ ಎರಡೂ ಬೇರೆ. ಅಪಭ್ರಂಶ ಬ್ರಹ್ಮರನ್ನು ಸರಸ್ವತಿ ಪೀಠದಲ್ಲಿ ಕುಳ್ಳಿರಿಸಿದಾಗ ಹೀಗೇ ಆಗುತ್ತೆ. 'ಕೃಷ್ಣಾ' ,'ಕೃಷ್ಣ' ಆದಹಾಗೆ.
155


































