ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ. Official handle of the Social Welfare Department, GoK | Call us at: 9482300400.

t.me/SocialWelfareDept
Joined March 2022
ಸಮಾಜ ಕಲ್ಯಾಣ ಇಲಾಖೆ - Social Welfare Department retweeted
ರಾಜ್ಯದ ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಹಾಗೂ ಅವರ ಭವಿಷ್ಯವನ್ನು ಭದ್ರಪಡಿಸುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಸಿವಿಲ್ ಸೇವೆಗಳ ಎಲ್ಲಾ ನೇರ ನೇಮಕಾತಿಗಳಲ್ಲಿ ಕ್ರೀಡಾ ಸಾಧಕರಿಗೆ ಶೇ. 2ರಷ್ಟು ಮೀಸಲಾತಿ ಕಲ್ಪಿಸಿ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಕ್ರೀಡಾಪಟುಗಳ ಸಾಧನೆಗೆ ಬೆನ್ನೆಲುಬಾಗಿ ನಿಲ್ಲಲು ಮತ್ತು ಅವರ ಭವ್ಯ ಭವಿಷ್ಯವನ್ನು ರೂಪಿಸಲು ಸರ್ಕಾರ ಸದಾ ಬದ್ಧವಾಗಿದೆ.
7
12
1
115
10,816
ಸಮಾಜ ಕಲ್ಯಾಣ ಇಲಾಖೆ - Social Welfare Department retweeted
A golden moment for Karnataka and India🇮🇳 Heartiest congratulations to M.R. Poovamma on her outstanding performance at the Asian Games 2026 - winning Gold in the Women’s 4×400m Relay and Silver in the 4×400m Mixed Relay. Congratulations, Poovamma! Your determination continues to inspire and make us proud!
26
106
6
1,006
20,736
ಸಮಾಜ ಕಲ್ಯಾಣ ಇಲಾಖೆ - Social Welfare Department retweeted
ಮಾದಾರ ಮಹಾಸಭಾದ ಶೈಕ್ಷಣಿಕ ಹಾಗೂ ಸಾಮಾಜಿಕ ಏಳಿಗೆಗಾಗಿ ಬೆಂಗಳೂರು ಗ್ರಾಮಾಂತರದಲ್ಲಿ 11 ಎಕರೆ ಜಮೀನು ಮಂಜೂರು ಮಾಡಿ ಐತಿಹಾಸಿಕ ಕೊಡುಗೆ ನೀಡಿದ ಮಾನ್ಯ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ಧನ್ಯವಾದಗಳು @DKShivakumar @SWDGoK ​#DKShivakumar #SocialJustice #KarnatakaGovt #Empowerment
1
4
15
543
ಸಮಾಜ ಕಲ್ಯಾಣ ಇಲಾಖೆ - Social Welfare Department retweeted
ರೈತರು, ಬಡವರು ಹಾಗೂ ಎಲ್ಲಾ ಶೋಷಿತ ವರ್ಗಗಳ ಸರ್ವತೋಮುಖ ಅಭಿವೃದ್ಧಿಯೊಂದಿಗೆ ಕರ್ನಾಟಕವನ್ನು ದೇಶದಲ್ಲೇ ಉನ್ನತ ಸ್ಥಾನದಲ್ಲಿ ನಿಲ್ಲಿಸುವುದು ನಮ್ಮ ಸರ್ಕಾರದ ದೃಢ ಸಂಕಲ್ಪ. ​#EducationForAll #Karnataka #SocialJustice #KHMuniyappa #DKShivakumar
1
8
312
ಸಮಾಜ ಕಲ್ಯಾಣ ಇಲಾಖೆ - Social Welfare Department retweeted
ಪೌರಕಾರ್ಮಿಕರ ಮಕ್ಕಳಿಗೂ ನಗರಗಳಲ್ಲಿ ವಿಶೇಷ ವಸತಿ ಶಾಲೆಗಳನ್ನು ಸ್ಥಾಪಿಸುವ ಮೂಲಕ ಉತ್ತಮ ಗುಣಮಟ್ಟದ ಶಿಕ್ಷಣದ ಅವಕಾಶ ಕಲ್ಪಿಸಬೇಕು. ಅವರ ಮಕ್ಕಳು ಕೂಡ ಡಾಕ್ಟರ್, ಇಂಜಿನಿಯರ್, KAS, IPS, IAS ಅಧಿಕಾರಿಗಳಾಗಿ ಉನ್ನತ ಸಾಧನೆ ಮಾಡುವಂತಾಗಬೇಕು. #SocialJustice #EducationForAll #KarnatakaGovernment #KHMuniyappa #DKShivakumar
2
9
288
ಸಮಾಜ ಕಲ್ಯಾಣ ಇಲಾಖೆ - Social Welfare Department retweeted
ಕೋಲಾರ ಜಿಲ್ಲೆಯ ಬೇತಮಂಗಲದಲ್ಲಿರುವ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಇಂದು ಭೇಟಿ ನೀಡಿ, ವಿದ್ಯಾರ್ಥಿನಿಯರಿಗೆ ನೀಡಲಾಗುತ್ತಿರುವ ಆಹಾರದ ಗುಣಮಟ್ಟ, ಸ್ವಚ್ಛತೆ ಹಾಗೂ ಅವರ ಕಲಿಕೆಯ ಕುರಿತು ಪರಿಶೀಲನೆ ನಡೆಸಲಾಯಿತು. #SocialWelfare #StudentHostel #KHMuniyappa
2
6
317
ಸಮಾಜ ಕಲ್ಯಾಣ ಇಲಾಖೆ - Social Welfare Department retweeted
ಅಕ್ಷರವೇ ಅಸ್ತ್ರ, ಜ್ಞಾನವೇ ಶಕ್ತಿ, ಇವರೇ ನಾಳಿನ ಕರ್ನಾಟಕದ ಆಸ್ತಿ! ​ಪ್ರತಿಯೊಬ್ಬ ಮಗುವಿಗೂ ಗುಣಮಟ್ಟದ ಶಿಕ್ಷಣ ನೀಡುವುದೇ ನಮ್ಮ ಸಂಕಲ್ಪ. ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದಂದು ನಾಳಿನ ಸತ್ಪ್ರಜೆಗಳಾದ ಮಕ್ಕಳೊಂದಿಗೆ. ​ #KHMuniyappa #DemocracyDay #VidhanaSoudha #EducationMatters #FutureLeaders #KarnatakaGovt
2
9
342
ಸಮಾಜ ಕಲ್ಯಾಣ ಇಲಾಖೆ - Social Welfare Department retweeted
ಹಿರಿಯೂರು ತಾಲ್ಲೂಕಿನ ಐಮಂಗಲ ಸಮೀಪದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಶೈಕ್ಷಣಿಕ ಹಾಗೂ ಮೂಲಸೌಕರ್ಯ ವ್ಯವಸ್ಥೆಗಳನ್ನು ಪರಿಶೀಲಿಸಿದೆ. @karnatakavarthe @dkshivakumar_official @inckarnataka #KHMuniyappa #SocialWelfare #KitturRaniChennamma
2
2
222
ಸಮಾಜ ಕಲ್ಯಾಣ ಇಲಾಖೆ - Social Welfare Department retweeted
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ, ಸ್ಥಳದಲ್ಲೇ ಅರ್ಜಿಗಳನ್ನು ಸ್ವೀಕರಿಸಿ, ನೂತನ 'ಪ್ರಜಾಸೇವೆ' ಇಲಾಖೆಗೆ ಚಾಲನೆ ನೀಡಿದೆನು. ಅರ್ಜಿಗಳ ತ್ವರಿತ ವಿಲೇವಾರಿಗೆ ನೆರವಾಗುವ ಐಜಿಪಿಆರ್‌ಎಸ್ ತಂತ್ರಾಂಶದ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿದೆನು. #PrajaSeve
9
32
229
7,770
ಸಮಾಜ ಕಲ್ಯಾಣ ಇಲಾಖೆ - Social Welfare Department retweeted
A teacher builds every person who goes on to build the nation. India’s more than one crore teachers, including nearly 4.5 lakh teachers in Karnataka, are shaping the minds, character and future of our children every single day. Every doctor who heals, engineer who builds, farmer who feeds us, officer who serves, entrepreneur who creates and leader who guides us has a teacher behind them - someone who first recognised their potential and showed them what was possible. On this Teachers’ Day, the Government of Karnataka has decided to honour this invaluable contribution with a distinct mark of respect. From today, teachers of Karnataka can proudly use the prefix “Tr.” before their names. It may be only two letters, but it represents a lifetime of service. “Tr.” is more than a title - it is society’s recognition of those who have dedicated their lives to shaping the lives of others. A society that honours its teachers honours its own future. To every teacher who has guided us, corrected us, encouraged our dreams and believed in us before we believed in ourselves , Karnataka salutes you. Thank you for building our children. Thank you for building Karnataka. Thank you for building India. “Tr.” is an honour you have truly earned. #TeachersDay
8
38
4
156
8,955
ಸಮಾಜ ಕಲ್ಯಾಣ ಇಲಾಖೆ - Social Welfare Department retweeted
‘ನನ್ನನ್ನು ನಾಡಿನ ದೊರೆ ಎನ್ನಬೇಡಿ, ಪ್ರಜಾಸೇವಕ ಎನ್ನಿ’ ನಮ್ಮ ದೇಶದಲ್ಲಿ ಪ್ರಭುಗಳ ಕಾಲ ಮುಗಿದು ಪ್ರಜಾಪ್ರಭುತ್ವ ಬಂದಿದೆ, ನನ್ನನ್ನು ‘ನಾಡಿನ ದೊರೆ’ ಎಂದು ಕರೆಯುವ ಬದಲು ‘ಪ್ರಜಾಸೇವಕ’ ಎಂದು ಕರೆದರೆ ನನಗೆ ಅತೀವ ಸಂತೋಷವಾಗುತ್ತದೆ. ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ಸರ್ಕಾರಿ ಕಚೇರಿಗಳು ಹಾಗೂ ಅಧಿಕಾರಿಗಳ ಬಳಿ ಅಲೆಯುವ ಕಾಲ ಈಗ ಮುಗಿದಿದೆ. ಸರ್ಕಾರದ ಆಡಳಿತವೇ ನೇರವಾಗಿ ಜನರ ಮನೆಬಾಗಿಲಿಗೆ ತಲುಪಬೇಕು ಎನ್ನುವ ಪವಿತ್ರ ಉದ್ದೇಶದಿಂದ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ. ವಿಧಾನಸೌಧ, ಡಿಸಿ ಕಚೇರಿ ಅಥವಾ ತಾಲೂಕು ಕಚೇರಿಗಳಲ್ಲಿ ಕುಳಿತು ಜನರಿಂದ ದೂರವಿದ್ದು ಆಡಳಿತ ನಡೆಸುವುದು ಸರಿಯಲ್ಲ. ಪ್ರತಿಯೊಬ್ಬ ನಾಗರಿಕನಿಗೂ ಸಚಿವರು, ಶಾಸಕರು ಅಥವಾ ಅಧಿಕಾರಿಗಳನ್ನು ನೇರವಾಗಿ ಭೇಟಿ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಜನರ ಸಮಸ್ಯೆಗಳನ್ನು ಆಲಿಸಿ, ಸ್ಥಳದಲ್ಲೇ ನೇರ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪ್ರಜಾಸೇವಾ ಇಲಾಖೆ ಕಾರ್ಯನಿರ್ವಹಿಸಲಿದೆ. ಇದು ಕೇವಲ ಒಂದು ಸರ್ಕಾರಿ ಇಲಾಖೆಯಾಗದೆ, ಜನರ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತರುವ ಜನಪರ ವ್ಯವಸ್ಥೆಯಾಗಿ ಹೊರಹೊಮ್ಮಲಿದೆ. ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ: ಜನಸಾಮಾನ್ಯರು ಶಾಸಕರು, ಮಂತ್ರಿಗಳು ಅಥವಾ ತಾಲೂಕು ಅಧಿಕಾರಿಗಳನ್ನು ಹುಡುಕಿಕೊಂಡು ಬರುವುದು ತಪ್ಪಬೇಕು. ಅಧಿಕಾರಿಗಳೇ ನೇರವಾಗಿ ಜನರ ಬಳಿಗೆ ತೆರಳಿ ಅವರ ಕುಂದುಕೊರತೆಗಳನ್ನು ಆಲಿಸಿ ಬಗೆಹರಿಸಬೇಕು ಎಂಬ ಉದ್ದೇಶದಿಂದ ಪ್ರಜಾಸೇವಾ ಇಲಾಖೆಯನ್ನು ಸೃಜಿಸಲಾಗಿದ್ದು, 'ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ' ಎಂಬುದು ಈ ಅಭಿಯಾನದ ಆಶಯವಾಗಿದೆ. ಯಾವುದೇ ರಾಜಕೀಯ, ಧರ್ಮ-ಜಾತಿ ಇಲ್ಲದೆ ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲಿಯೂ ಈ ಪ್ರಜಾಸೇವಾ ವ್ಯವಸ್ಥೆ ಅನುಷ್ಠಾನಗೊಳ್ಳಲಿದೆ. ಪ್ರತಿ ತಿಂಗಳ ಮೊದಲನೇ ಮತ್ತು ಮೂರನೇ ಶನಿವಾರದಂದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜನರ ಮಧ್ಯದಲ್ಲಿದ್ದು ಕೆಲಸ ಮಾಡಬೇಕು ಎಂದು ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಸಚಿವರು ತಾಲೂಕು, ಹೋಬಳಿ ಮಟ್ಟದಲ್ಲಿ ಹಾಗೂ ಶಾಸಕರು ಪಂಚಾಯಿತಿ ಮಟ್ಟದಲ್ಲಿ ಈ ಕಾರ್ಯಕ್ರಮವನ್ನು ಮುನ್ನಡೆಸಲಿದ್ದಾರೆ. ಶಾಸಕರು ಉಪಸ್ಥಿತರಿಲ್ಲದಿದ್ದರೆ ಅಧಿಕಾರಿಗಳೇ ಖುದ್ದಾಗಿ ಪಂಚಾಯಿತಿ ಕೇಂದ್ರಗಳಿಗೆ ತೆರಳಿ, ಸಣ್ಣ ಸಭೆಗಳನ್ನು ನಡೆಸಿ, ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ಪರಿಹರಿಸಬೇಕು. ಜನರ ಮುಖದಲ್ಲಿ ನಗು ಕಾಣುವುದೇ ಸರ್ಕಾರದ ಯಶಸ್ಸು: ಸಾರ್ವಜನಿಕರ ಅರ್ಜಿಗಳಿಗೆ ಕೇವಲ ಸ್ವೀಕೃತಿ ನೀಡುವುದು ಮುಖ್ಯವಲ್ಲ; ಅವರಿಗೆ ಸೂಕ್ತ ಪರಿಹಾರ ತಲುಪಿದಾಗ ಮಾತ್ರ ಯೋಜನೆಯ ನೈಜ ಯಶಸ್ಸು ಸಾಧ್ಯ. ವಿಜಯನಗರದ ಪವಿತ್ರ ಭೂಮಿಯಲ್ಲಿ ಈ ಜನಪರ ಯೋಜನೆಗೆ ಚಾಲನೆ ನೀಡಲಾಗಿದೆ. ಸರ್ಕಾರದ ಯೋಜನೆಗಳು ಹಾಗೂ ಸೌಲಭ್ಯಗಳು ಪ್ರತಿಯೊಬ್ಬರಿಗೂ ತಲುಪಬೇಕು ಎಂಬುದು ನಮ್ಮ ಮುಖ್ಯ ಉದ್ದೇಶವಾಗಿದೆ. ತಿಂಗಳಿಗೆ ಎರಡು ದಿನ ಅಧಿಕಾರಿಗಳು ಸ್ಥಳಕ್ಕೇ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಲಿದ್ದಾರೆ. ಪಿಂಚಣಿ, ಭೂಮಿ ವ್ಯಾಜ್ಯ, ಸರ್ಕಾರದ ಸೌಲಭ್ಯಗಳು, ಖಾತೆ ಬದಲಾವಣೆ, ಗ್ಯಾರಂಟಿ ಯೋಜನೆಗಳು ಹಾಗೂ ಮನೆ-ನಿವೇಶನಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಪರಿಹಾರ ಒದಗಿಸಲಾಗುವುದು. ಬಡವರು ಹಾಗೂ ಶೋಷಿತರಿಗೆ ತಹಶೀಲ್ದಾರ್, ಎಸಿ ಅಥವಾ ಡಿಸಿ ಮಟ್ಟದ ವ್ಯಾಜ್ಯಗಳಲ್ಲಿ ಹೋರಾಡಲು ಉಚಿತವಾಗಿ ವಕೀಲರ ಸೇವೆ ಒದಗಿಸಿ ಕಾನೂನು ನೆರವು ನೀಡಲಾಗುವುದು. ಅರ್ಜಿ ತಿರಸ್ಕೃತಗೊಂಡರೆ ಅದಕ್ಕೆ ಕಾರಣವನ್ನು ಸ್ಪಷ್ಟಪಡಿಸಲಾಗುವುದು. ಅರ್ಜಿದಾರರಿಗೆ ಸಂಪೂರ್ಣ ಪರಿಹಾರ ಸಿಗುವವರೆಗೂ ಸರ್ಕಾರ ಅವರ ಬೆನ್ನಿಗೆ ನಿಲ್ಲಲಿದೆ. ಸಮಾಜದ ಪ್ರತಿಯೊಂದು ವರ್ಗಕ್ಕೂ ಅಂಬೇಡ್ಕರ್ ಅವರ ಚಿಂತನೆಯಂತೆ ಸಮಾನ ಗೌರವ ಸಿಗಬೇಕು ಎಂಬುದು ಸರ್ಕಾರದ ಆಶಯ. ಸರ್ಕಾರ ನೀಡಿದ ಐದು ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದ್ದ ವಿರೋಧ ಪಕ್ಷಗಳಿಗೆ ಅದನ್ನು ಕಾರ್ಯರೂಪಕ್ಕೆ ತಂದು ತೋರಿಸಿದ್ದೇವೆ. ಪ್ರಜಾಸೇವಾ ಯೋಜನೆಯೂ ಇಡೀ ದೇಶಕ್ಕೆ ಮಾದರಿಯಾಗಲಿದೆ. - ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ ಇಂದು ಆಯೋಜಿಸಲಾಗಿದ್ದ ನೂತನ 'ಪ್ರಜಾಸೇವಾ ಇಲಾಖೆ'ಯ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದೆನು.
17
51
5
451
11,621
ಸಮಾಜ ಕಲ್ಯಾಣ ಇಲಾಖೆ - Social Welfare Department retweeted
ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ ಇಂದು ಆಯೋಜಿಸಲಾಗಿದ್ದ ನೂತನ 'ಪ್ರಜಾಸೇವಾ ಇಲಾಖೆ'ಯ ಅಭಿಯಾನಕ್ಕೆ ಚಾಲನೆ ನೀಡಿ, ಕಾರ್ಯಕ್ರಮದಲ್ಲಿ ವಿವಿಧ ಯೋಜನೆಗಳಡಿ ಆಯ್ಕೆಯಾಗಿರುವ ತಾಲ್ಲೂಕಿನ ಫಲಾನುಭವಿಗಳಿಗೆ ಚೆಕ್ ಹಾಗೂ ದಿವ್ಯಾಂಗರಿಗೆ ವಾಹನಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ವಿಧಾನಸಭೆಯ ಉಪಸಭಾಧ್ಯಕ್ಷರಾದ ಶ್ರೀ ಮಾಂಕಾಳ್ ವೈದ್ಯ, ಸಚಿವರಾದ ಶ್ರೀ ಬಸವಂತಪ್ಪ, ಸಂಸದರಾದ ಶ್ರೀ ತುಕಾರಾಮ್, ಡಾ. ಪ್ರಭಾ ಮಲ್ಲಿಕಾರ್ಜುನ, ಶ್ರೀ ಜಿ.ಸಿ. ಚಂದ್ರಶೇಖರ್ ಸೇರಿದಂತೆ ಹಲವು ಶಾಸಕರು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
5
25
244
9,815
ಸಮಾಜ ಕಲ್ಯಾಣ ಇಲಾಖೆ - Social Welfare Department retweeted
ದೇವನಹಳ್ಳಿಯಲ್ಲಿ ‘ತಾಲ್ಲೂಕು ಮಟ್ಟದ ಪ್ರಜಾಸೇವಾ ಆಂದೋಲನ’ ಸಭೆ ಸೆ. 05, 2026 | ಶನಿವಾರ ಮಧ್ಯಾಹ್ನ 12:00 📍 ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪ, ವಿಜಯಪುರ, ದೇವನಹಳ್ಳಿ #PrajaSevaAndolana #KHMuniyappa #Devanahalli #BengaluruRural #Janaspandana #Karnataka
1
12
358
ಸಮಾಜ ಕಲ್ಯಾಣ ಇಲಾಖೆ - Social Welfare Department retweeted
ಇಂದು ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ಹೊಕ್ರಾಣಿ ಗ್ರಾಮದಲ್ಲಿ ದೌರ್ಜನ್ಯಕ್ಕೊಳಗಾಗಿ ಮೃತಪಟ್ಟ ಯುವತಿಯ ಕುಟುಂಬವನ್ನು ಭೇಟಿ ಮಾಡಿ, ಕುಟುಂಬದ ಸದಸ್ಯರಿಗೆ ಸಾಂತ್ವನ ತಿಳಿಸಿದೆ. #Raichur #KHMuniyappa #SocialWelfare
1
5
256
ಸಮಾಜ ಕಲ್ಯಾಣ ಇಲಾಖೆ - Social Welfare Department retweeted
ಭೂಮಾನಂದ ಅವರ ಕುಟುಂಬಕ್ಕೆ ಸಾಂತ್ವನ, ನ್ಯಾಯದ ಭರವಸೆ ದೇವದುರ್ಗ ತಾಲೂಕಿನ ಹದಿನಾಳ ಗ್ರಾಮದಲ್ಲಿ ಹತ್ಯೆಗೀಡಾದ ದಲಿತ ಮುಖಂಡ ಶ್ರೀ ಭೂಮಾನಂದ ಅವರ ನಿವಾಸಕ್ಕೆ ಇಂದು ಭೇಟಿ ನೀಡಿ, ಅವರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದೆ. #Raichur #KHMuniyappa #SocialWelfare
3
7
271
ಸಮಾಜ ಕಲ್ಯಾಣ ಇಲಾಖೆ - Social Welfare Department retweeted
ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ, ರಾಜ್ಯಾದ್ಯಂತ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡುವ ಐತಿಹಾಸಿಕ ‘ಪ್ರಜಾಸೇವೆ ಅಭಿಯಾನ’ಕ್ಕೆ ಇಂದು (05.09.2026) ಚಾಲನೆ ಸಿಗುತ್ತಿದೆ. #PrajaSeve #NimmondigeNaavu #DKShivakumar #KHMuniyappa
1
1
6
282
ಸಮಾಜ ಕಲ್ಯಾಣ ಇಲಾಖೆ - Social Welfare Department retweeted
ಇಂದು ದೇವನಹಳ್ಳಿ ಡಾ.ಬಿ.ಆರ್. ಅಂಬೇಡ್ಕರ್ ಭವನ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ದೇವನಹಳ್ಳಿ ತಾಲ್ಲೂಕು ರವರ ವತಿಯಿಂದ ಭಾರತ ರತ್ನ ಡಾ||ಸರ್ವೆಪಲ್ಲಿ ರಾಧಕೃಷ್ಣನ್‌ರವರ ಜನ್ಮ ದಿನಾಚರಣೆ ಅಂಗವಾಗಿ“ಶಿಕ್ಷಕರ ದಿನಾಚರಣೆ” ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭ. #TeachersDay #KHMuniyappa #Devanahalli
2
4
313
ಸಮಾಜ ಕಲ್ಯಾಣ ಇಲಾಖೆ - Social Welfare Department retweeted
ಇಂದು ವಿಧಾನ ಪರಿಷತ್ತಿನಲ್ಲಿ ಮಾನ್ಯ ಸದಸ್ಯರಾದ ಶ್ರೀ ಶಿವಕುಮಾರ್ ಅವರು ಕೇಳಿದ ಪ್ರಶ್ನೆ ಸಂಖ್ಯೆ 925ಕ್ಕೆ ಸಂಬಂಧಿಸಿದಂತೆ, ವಿಷಯದ ಕುರಿತು ಸದನದಲ್ಲಿ ವಿವರವಾಗಿ ಉತ್ತರ ನೀಡಲಾಯಿತು. #Karnataka #VidhanParishad #SocialWelfare #KarnatakaGovernment #KHMuniyappa #DKShivakumar
2
3
1
8
3,004
ಸಮಾಜ ಕಲ್ಯಾಣ ಇಲಾಖೆ - Social Welfare Department retweeted
ನಿಮಗೊಂದು ಪ್ರಶ್ನೆ? ಈ ಕೆಳಗೆ ನೀಡಲಾದ ಪ್ರಶ್ನೆಗೆ ನಿಮ್ಮ ಉತ್ತರವನ್ನು ಕಮೆಂಟ್ ಮೂಲಕ ತಿಳಿಸಿ! @CMofKarnataka @DKShivakumar @CMahadevappa @SWDCommissioner @airnewsalerts @DDChandanaNews #Socialwelfare_karnataka
26
10
1
30
3,329
ಸಮಾಜ ಕಲ್ಯಾಣ ಇಲಾಖೆ - Social Welfare Department retweeted
ಅಂಬೇಡ್ಕರ್‌ ಆಶಯ ನಮಗೆ ದಾರಿದೀಪ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಸದಾ ಬದ್ಧವಾಗಿದೆ. - 75 ಲಕ್ಷ ವಿದ್ಯಾರ್ಥಿಗಳಿಗೆ ₹2,676 ಕೋಟಿ ವಿದ್ಯಾರ್ಥಿವೇತನ, 2,231 ವಿದ್ಯಾರ್ಥಿಗಳಿಗೆ ₹389 ಕೋಟಿ ಶೈಕ್ಷಣಿಕ ಸಾಲ, 18 ಲಕ್ಷ ವಿದ್ಯಾರ್ಥಿಗಳಿಗೆ ₹1,273 ಕೋಟಿ ಗಳಷ್ಟು ಶುಲ್ಕ ಮರುಪಾವತಿ - 5,306 ವಿದ್ಯಾರ್ಥಿನಿಲಯ, 1,258 ವಸತಿ ಶಾಲೆ, 300 ಮೌಲಾನಾ ಆಜಾದ್‌ ಶಾಲೆಗಳ 13.30 ಲಕ್ಷ ಮಕ್ಕಳ ಶಿಕ್ಷಣಕ್ಕಾಗಿ ₹15,081 ಕೋಟಿ ವ್ಯಯ ರಾಜಕೀಯ ಪ್ರಭುತ್ವದ ಜೊತೆ ಸಾಮಾಜಿಕ ಪ್ರಜಾಪ್ರಭುತ್ವ ಸ್ಥಾಪನೆಯಾಗಬೇಕೆಂದು ಪ್ರತಿಪಾದಿಸಿದ್ದ ಬಾಬಾಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳು, ಆಶಯಗಳು ನಮ್ಮ ಸರ್ಕಾರದ ಯೋಚನೆ ಮತ್ತು ಯೋಜನೆಗಳಿಗೆ ದಾರಿದೀಪ. ಅವರು ರಚಿಸಿದ ಸಂವಿಧಾನದ ಪ್ರತಿ ಅಕ್ಷರಕ್ಕೂ ನಾವು ಬದ್ಧರಾಗಿದ್ದು, ಅದನ್ನು ಅನುಷ್ಠಾನಗೊಳಿಸಲು ಅನುದಿನವೂ ಶ್ರಮಿಸುತ್ತಿದ್ದೇವೆ. #AmbedkarJayanti
3
12
59
2,559