
Official twitter account of Vijayanagar Police Station (080-22942514)/9480801726/Dail-112 in case of emergency. | Help us to serve you better | @BlrCityPolice
Vijayanagar, Bangalore
Joined November 2015
- Tweets978
- Following42
- Followers698
- Likes416
Vijayanagar PS | ವಿಜಯನಗರ ಪೊಲೀಸ್ ಠಾಣೆ retweeted
ಹಾಗೂ ಕರ್ತವ್ಯ ನಿರ್ವಹಣೆ ವೇಳೆ ಹುತಾತ್ಮರಾದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕುಟುಂಬಗಳ ಸದಸ್ಯರು ಉಪಸ್ಥಿತರಿದ್ದರು.3.3
Vijayanagar PS | ವಿಜಯನಗರ ಪೊಲೀಸ್ ಠಾಣೆ retweeted
ಸದರಿ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಸನ್ಮಾನ್ಯ @CMofKarnataka ಶ್ರೀ @DKShivakumar ರವರು, ಸನ್ಮಾನ್ಯ ಗೃಹಮಂತ್ರಿಗಳಾದ ಶ್ರೀ @PriyankKharge ರವರು,ಶ್ರೀ ರಾಜೇಂದ್ರ ಕುಮಾರ್ ಕಟಾರಿಯಾ ಐಎಎಸ್, ಮಾನ್ಯ ಅಪರ ಮುಖ್ಯ ಕಾರ್ಯದರ್ಶಿಗಳು ಗೃಹ ಇಲಾಖೆ & ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು.. 2/3
Vijayanagar PS | ವಿಜಯನಗರ ಪೊಲೀಸ್ ಠಾಣೆ retweeted
ಪೊಲೀಸ್ ಸಂಸ್ಮರಣಾ ದಿನದಂದು, ಬೆಂಗಳೂರು ನಗರದ ಸಿ.ಎ.ಆರ್. ಕೇಂದ್ರಸ್ಥಾನದ ಹುತಾತ್ಮರ ಉದ್ಯಾನವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಳೆದ ಒಂದು ವರ್ಷದಲ್ಲಿ ಕರ್ತವ್ಯ ನಿರ್ವಹಣೆಯಲ್ಲಿ ಹುತಾತ್ಮರಾದ ಎಲ್ಲಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಗೌರವ ವಂದನೆಯನ್ನು ಸಲ್ಲಿಸಲಾಯಿತು. 1/3
Vijayanagar PS | ವಿಜಯನಗರ ಪೊಲೀಸ್ ಠಾಣೆ retweeted
ಕೆಲವು ತ್ಯಾಗಗಳು ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತವೆ.
ಪೊಲೀಸ್ ಸಂಸ್ಮರಣಾ ದಿನದಂದು, ರಾಷ್ಟ್ರ ಸೇವೆಯಲ್ಲಿ ತಮ್ಮ ಪ್ರಾಣಾರ್ಪಣೆ ಮಾಡಿದ ವೀರ ಪೊಲೀಸ್ ಸಿಬ್ಬಂದಿಗೆ ಬೆಂಗಳೂರು ನಗರ ಪೊಲೀಸ್ ಗೌರವಪೂರ್ವಕ ಶ್ರದ್ಧಾಂಜಲಿ ಸಲ್ಲಿಸುತ್ತದೆ. ಅವರ ಅಪ್ರತಿಮ ಶೌರ್ಯ ಹಾಗೂ ನಿಸ್ವಾರ್ಥ ಕರ್ತವ್ಯ ನಿಷ್ಠೆಯು ಧೈರ್ಯ ಮತ್ತು ಗೌರವದ ಶಾಶ್ವತ ಸಂಕೇತವಾಗಿ ನೆಲೆನಿಂತಿರುತ್ತದೆ.
ನಮ್ಮ ಅಮರ ಯೋಧರಿಗೆ ಪ್ರಣಾಮಗಳು. ಅವರ ಅತ್ಯುನ್ನತ ತ್ಯಾಗವನ್ನು ಎಂದಿಗೂ ಮರೆಯಲಾಗುವುದಿಲ್ಲ.
Some sacrifices can never be forgotten.
On Police Commemoration Day, Bengaluru City Police remembers the brave police personnel who laid down their lives in the service of the nation. Their valour and unwavering commitment to duty remain a lasting legacy of courage and honour.
We salute our fallen heroes. Their sacrifice will never be forgotten.
#PoliceCommemorationDay #BengaluruCityPolice
@CPBlr @seemantsingh96 @DgpKarnataka @KarnatakaCops @Jointcptraffic @CMofKarnataka @PriyankKharge
Vijayanagar PS | ವಿಜಯನಗರ ಪೊಲೀಸ್ ಠಾಣೆ retweeted
ವೀರ ಯೋಧರಿಗೆ ನಮನ. ಅವರ ಪರಮೋಚ್ಛ ತ್ಯಾಗದ ಸ್ಮರಣೆ.
ಪೊಲೀಸ್ ಸಂಸ್ಮರಣಾ ದಿನದ ಅಂಗವಾಗಿ, ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ. ಕೆ. ಶಿವಕುಮಾರ್ ಅವರು ಬೆಂಗಳೂರಿನ ಸಿ.ಎ.ಆರ್. (CAR) ಪ್ರಧಾನ ಕಚೇರಿಯಲ್ಲಿರುವ ಹುತಾತ್ಮರ ಉದ್ಯಾನವನದಲ್ಲಿ ಕರ್ತವ್ಯ ನಿರ್ವಹಣೆ ವೇಳೆ ಹುತಾತ್ಮರಾದ ಪೊಲೀಸ್ ಸಿಬ್ಬಂದಿಗೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು.
ಈ ಗಂಭೀರ ಸಮಾರಂಭದಲ್ಲಿ ಮಾನ್ಯ ಗೃಹ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ ಇಲಾಖೆ) ಶ್ರೀ ರಾಜೇಂದ್ರ ಕುಮಾರ್ ಕಟಾರಿಯಾ, ಐ.ಎ.ಎಸ್., ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕ ಹಾಗೂ ಮಹಾನಿರೀಕ್ಷಕರಾದ ಡಾ. ಎಂ. ಎ. ಸಲೀಂ, ಐ.ಪಿ.ಎಸ್., ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ ಸೀಮಾಂತ್ ಕುಮಾರ್ ಸಿಂಗ್, ಐ.ಪಿ.ಎಸ್., ಹಾಗೂ ಇಲಾಖೆಯ ಇತರ ಹಿರಿಯ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದು ಪುಷ್ಪನಮನ ಸಲ್ಲಿಸಿದರು.
ಪೊಲೀಸ್ ಹುತಾತ್ಮರ ಧೈರ್ಯ, ಅಚಲ ಸಮರ್ಪಣಾ ಭಾವ ಮತ್ತು ಪರಮೋಚ್ಛ ತ್ಯಾಗವನ್ನು ಸ್ಮರಿಸುವ ಸಲುವಾಗಿ ಈ ಸಮಾರಂಭದಲ್ಲಿ ಗೌರವ ವಂದನೆ (ಜನರಲ್ ಸೆಲ್ಯೂಟ್), ಪುಷ್ಪಗುಚ್ಛ ಸಮರ್ಪಣೆ ಹಾಗೂ ಹುತಾತ್ಮರ ಹೆಸರಿನ ಪಟ್ಟಿ (ರೋಲ್ ಆಫ್ ಆನರ್) ವಾಚನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಅವರ ಈ ತ್ಯಾಗವು ಸದಾಕಾಲ ನಮಗೆ ಕರ್ತವ್ಯ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಲು ಸ್ಫೂರ್ತಿಯಾಗಲಿದೆ.
Honouring the Brave. Remembering Their Supreme Sacrifice.
On the occasion of Police Commemoration Day, Hon’ble Chief Minister Sri D. K. Shivakumar paid floral tributes to fallen police personnel at Martyrs’ Garden, CAR Headquarters, Bengaluru.
Hon’ble Home Minister Sri Priyank Kharge, Sri Rajendra Kumar Kataria, IAS, Additional Chief Secretary (Home), Dr. M. A. Saleem, IPS, DG & IGP, Karnataka, Sri Seemant Kumar Singh, IPS, Commissioner of Police, Bengaluru City, along with other senior officers and police personnel, joined in paying homage.
The solemn ceremony included a General Salute, wreath-laying and the reading of the Roll of Honour, remembering the courage, dedication and supreme sacrifice of police martyrs.
Their sacrifice will forever inspire us to serve and protect with honour and dedication.
#PoliceCommemorationDay #BengaluruCityPolice #KarnatakaPolice
@CPBlr @seemantsingh96 @DgpKarnataka @KarnatakaCops @Jointcptraffic @CMofKarnataka @PriyankKharge
Vijayanagar PS | ವಿಜಯನಗರ ಪೊಲೀಸ್ ಠಾಣೆ retweeted
ಅಧರ್ಮದ ಮೇಲೆ ಧರ್ಮದ ವಿಜಯವು ನಮ್ಮ ದೈನಂದಿನ ಜೀವನದಲ್ಲಿ ಸತ್ಯ, ಧೈರ್ಯ ಹಾಗೂ ನ್ಯಾಯಪ್ರಜ್ಞೆಯನ್ನು ಎತ್ತಿಹಿಡಿಯಲು ಪ್ರೇರಣೆಯಾಗಲಿ.
ಬೆಂಗಳೂರು ನಗರ ಪೊಲೀಸ್ ಇಲಾಖೆಯ ವತಿಯಿಂದ ಸಮಸ್ತ ನಾಗರಿಕರಿಗೆ ಸುರಕ್ಷಿತ ಹಾಗೂ ಮಂಗಳಕರ ವಿಜಯದಶಮಿಯ ಶುಭಾಶಯಗಳು.
May the victory of good over evil inspire us to uphold truth, courage and righteousness in our everyday lives.
Bengaluru City Police wishes everyone a happy and safe Vijayadashami!
#Vijayadashami #BengaluruCityPolice
Vijayanagar PS | ವಿಜಯನಗರ ಪೊಲೀಸ್ ಠಾಣೆ retweeted
#BedaBro #Sanmitra #RISE
ಸನ್ಮಿತ್ರ - ಮಾದಕದ ವ್ಯಸನವನ್ನು ನಿಯಂತ್ರಿಸಲು” ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಪ್ರಾರಂಭಿಸಿರುವ ವಿಶೇಷ ಸಾಮಾಜಿಕ ಕಾರ್ಯಕ್ರಮವಾಗಿದೆ. ಮಾದಕ ವ್ಯಸನದಿ೦ದ ತೊಂದರೆಗೆ ಒಳಗಾದವರನ್ನು ವ್ಯಸನ ಮುಕ್ತರನ್ನಾಗಿ ಮಾಡಿ, ಅವರನ್ನು ಸನ್ಮಾರ್ಗಕ್ಕೆ ಉಪಕ್ರಮವಾಗಿದೆ.
@BlrCityPolice.
Vijayanagar PS | ವಿಜಯನಗರ ಪೊಲೀಸ್ ಠಾಣೆ retweeted
ಆಟೋದಲ್ಲಿ ಕೃಷ್ಣಮೂರ್ತಿಯವರು ಕಳೆದುಕೊಂಡ ಲಗೇಜ್ ಅನ್ನು ಮರಳಿ ಪಡೆಯಲು ತಕ್ಷಣ ಸ್ಪಂದಿಸಿದ ವಿಜಯನಗರ ಪೊಲೀಸ್ ಠಾಣೆಯ ಪೊಲೀಸರು ಹಾಗೂ ಆಟೋ ಚಾಲಕನ ಸೋಮೇಂದ್ರ ರವರ ಪ್ರಾಮಾಣಿಕತೆಯ ನಡೆ ನಿಜಕ್ಕೂ ಶ್ಲಾಘನೀಯ. ಇಂತಹ ಪ್ರಾಮಾಣಿಕತೆ ಮತ್ತು ತ್ವರಿತ ಪೊಲೀಸ್ ಸೇವೆ ಸಮಾಜಕ್ಕೆ ಮಾದರಿ. 👏🇮🇳
#Bengaluru city Police #Honesty #VNPS.#112
ಆಟೋದಲ್ಲಿ ಕೃಷ್ಣಮೂರ್ತಿಯವರು ಕಳೆದುಕೊಂಡ ಲಗೇಜ್ ಅನ್ನು ಮರಳಿ ಪಡೆಯಲು ತಕ್ಷಣ ಸ್ಪಂದಿಸಿದ ವಿಜಯನಗರ ಪೊಲೀಸ್ ಠಾಣೆಯ ಪೊಲೀಸರು ಹಾಗೂ ಆಟೋ ಚಾಲಕನ ಸೋಮೇಂದ್ರ ರವರ ಪ್ರಾಮಾಣಿಕತೆಯ ನಡೆ ನಿಜಕ್ಕೂ ಶ್ಲಾಘನೀಯ. ಇಂತಹ ಪ್ರಾಮಾಣಿಕತೆ ಮತ್ತು ತ್ವರಿತ ಪೊಲೀಸ್ ಸೇವೆ ಸಮಾಜಕ್ಕೆ ಮಾದರಿ. 👏🇮🇳
#Bengaluru city Police #Honesty #VNPS.#112
Vijayanagar PS | ವಿಜಯನಗರ ಪೊಲೀಸ್ ಠಾಣೆ retweeted
"ಒಂದು ಕ್ಷಣ-ಒಂದು ಕರೆ-112 ಗೆ – ಒಂದು ಜೀವದ ರಕ್ಷಣೆ.”
ಸಾರ್ವಜನಿಕರ ಜಾಗೃತಿ ಹಾಗೂ ವಿಜಯನಗರ ಪೊಲೀಸರ ತ್ವರಿತ ಕಾರ್ಯಾಚರಣೆಯಿಂದ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯನ್ನು ASI ಜಗದೀಶ್ ಹಾಗೂ ಸಿಬ್ಬಂದಿ ತಕ್ಷಣ ಸ್ಪಂದಿಸಿ ಸಮಯೋಚಿತವಾಗಿ ಆಸ್ಪತ್ರೆಗೆ ಸೇರಿಸಿ ಜೀವ ಉಳಿಸಿದ್ದಾರೆ.#Vijayanagarps #BCP
Vijayanagar PS | ವಿಜಯನಗರ ಪೊಲೀಸ್ ಠಾಣೆ retweeted
#CyberAwareness
App ಇನ್ಸ್ಟಾಲ್ ಮಾಡುವಾಗ ಪ್ರತಿಯೊಂದು ಅನುಮತಿಯನ್ನು ಪರಿಶೀಲಿಸಿ. ಕ್ಯಾಮೆರಾ, ಮೈಕ್ರೋಫೋನ್, ಸಂಪರ್ಕಗಳು, SMS, ಸ್ಥಳ ಮಾಹಿತಿ & ಫೈಲ್ ಗಳಿಗೆ ಅನಗತ್ಯ ಅನುಮತಿ ನೀಡಬೇಡಿ. ಅನುಮತಿಗಳು ವಂಚನೆಗೆ ಕಾರಣವಾಗಬಹುದು @BlrCityPolice.
ಸೈಬರ್ ವಂಚನೆಗೊಳಗಾದರೆ 1930 / cybercrime.gov.in ನಲ್ಲಿ ದೂರು ಸಲ್ಲಿಸಿ.
"ಒಂದು ಕ್ಷಣ-ಒಂದು ಕರೆ-112 ಗೆ – ಒಂದು ಜೀವದ ರಕ್ಷಣೆ.”
ಸಾರ್ವಜನಿಕರ ಜಾಗೃತಿ ಹಾಗೂ ವಿಜಯನಗರ ಪೊಲೀಸರ ತ್ವರಿತ ಕಾರ್ಯಾಚರಣೆಯಿಂದ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯನ್ನು ASI ಜಗದೀಶ್ ಹಾಗೂ ಸಿಬ್ಬಂದಿ ತಕ್ಷಣ ಸ್ಪಂದಿಸಿ ಸಮಯೋಚಿತವಾಗಿ ಆಸ್ಪತ್ರೆಗೆ ಸೇರಿಸಿ ಜೀವ ಉಳಿಸಿದ್ದಾರೆ.#Vijayanagarps #BCP
ವಿಜಯನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಗಣೇಶೋತ್ಸವ ಹಾಗೂ ಶೋಭಾ ಯಾತ್ರೆಯ ಪ್ರಯುಕ್ತ ಸಾರ್ವಜನಿಕರಲ್ಲಿ ಸುರಕ್ಷತೆ ಭಾವನೆ ಮೂಡಿಸಿ,ಅಪರಾಧ ಚಟುವಟಿಕೆಗಳನ್ನು ತಡೆಗಟ್ಟಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದಠಾಣಾ ಸರಹದ್ದಿನ ಸೂಕ್ಷ್ಮ ಸ್ಥಳಗಳಲ್ಲಿ ರಕ್ಷಣೆಯ ಚಾಪನ್ನು ಮೂಡಿಸುವ ಸಲುವಾಗಿ ಕಾಲ್ನಡಿಗೆಯಲ್ಲಿಗಸ್ತು ನಡೆಸಲಾಗಿರುತ್ತದೆ
ಮೊಬೈಲ್ ಫೋನ್ ಗಳನ್ನು CEIR (Central Equipment Identity Register) ಪೋರ್ಟಲ್ ಮೂಲಕ ಪತ್ತೆಹಚ್ಚಿ ವಾರಸುದಾರರಿಗೆ ಹಸ್ತಾಂತರಿಸಿದ @vijayanagaraps ಪೊಲೀಸರು! 📱👮
ನಿಮ್ಮ ಮೊಬೈಲ್ ಕಳೆದುಹೋದರೆ, ತಕ್ಷಣ ಈ ಕ್ರಮಗಳನ್ನು ಅನುಸರಿಸಿ:
1️⃣KSP ಆಪ್ ಮೂಲಕ ದೂರು ನೀಡಿ.
2️⃣ceir.gov.in ನಲ್ಲಿ ವಿವರಗಳನ್ನು ದಾಖಲಿಸಿ.
Vijayanagar PS | ವಿಜಯನಗರ ಪೊಲೀಸ್ ಠಾಣೆ retweeted
#CrimeAwareness #CounterfeitCurrencyNote
ನೋಟು ಸ್ವೀಕರಿಸುವ ಮೊದಲು ಪರಿಶೀಲಿಸಿ. ನೋಟಿನ ಕಾಗದದ ಗುಣಮಟ್ಟ, ವಾಟರ್ಮಾರ್ಕ್, ಸೆಕ್ಯುರಿಟಿ ಥ್ರೆಡ್, ಬಣ್ಣ ಬದಲಾವಣೆಯ ಭದ್ರತಾ ವೈಶಿಷ್ಟ್ಯಗಳು & ಸೀರಿಯಲ್ ನಂಬರ್ ಪರಿಶೀಲಿಸಿ.
ಶಂಕಿತ ನೋಟನ್ನು ಮತ್ತೊಬ್ಬರಿಗೆ ನೀಡದೆ, ಬ್ಯಾಂಕ್ನಲ್ಲಿ ಪರಿಶೀಲನೆ ಮಾಡಿಸಿ, ಪೊಲೀಸರಿಗೆ ಮಾಹಿತಿ ನೀಡಿ.
Vijayanagar PS | ವಿಜಯನಗರ ಪೊಲೀಸ್ ಠಾಣೆ retweeted
ರಕ್ಷೆಯಿರುವುದು ಕೇವಲ ಒಂದು ದಾರದಲ್ಲಲ್ಲ, ಅದರ ಹಿಂದಿನ ಆಳವಾದ ಅರ್ಥದಲ್ಲಿ.
ಕೆಲವು ಬಂಧಗಳು ಜೊತೆಗೆ ನಿಲ್ಲುವ ಭರವಸೆಯಾದರೆ, ಇನ್ನು ಕೆಲವು ಕಾವಲಾಗಿ ನಿಲ್ಲುವ ಅಭಯ.
ಈ ರಕ್ಷಾ ಬಂಧನದಂದು, ಬೆಂಗಳೂರು ನಗರ ಪೊಲೀಸ್ ಪಡೆ ಕಾಳಜಿ, ಧೈರ್ಯ ಮತ್ತು ರಕ್ಷಣೆಯ ಸಂಕಲ್ಪವನ್ನು ಸಂಭ್ರಮಿಸುತ್ತದೆ.
ಎಲ್ಲರಿಗೂ ರಕ್ಷಾ ಬಂಧನದ ಹಾರ್ದಿಕ ಶುಭಾಶಯಗಳು!
A rakhi is tied with a thread, but its meaning runs much deeper.
Some bonds promise to stand by you. Some promise to stand guard.
This Raksha Bandhan, Bengaluru City Police celebrates the spirit of care, courage and protection.
Happy Raksha Bandhan!
#RakshaBandhan #BondOfProtection #WeServeWeProtect
@CPBlr @seemantsingh96 @DgpKarnataka @KarnatakaCops
Vijayanagar PS | ವಿಜಯನಗರ ಪೊಲೀಸ್ ಠಾಣೆ retweeted
#CrimeAwareness, ATM ಬಳಕೆ ವೇಳೆ ಎಚ್ಚರ
ATM ನಲ್ಲಿ ಅಪರಿಚಿತರು ಮಾತನಾಡಿಸಿ ಅಥವಾ ಬೇರೆ ರೀತಿಯಲ್ಲಿ ನಿಮ್ಮ ಗಮನವನ್ನು ಬೇರೆಡೆ ಸೆಳೆಯುವ ಮೂಲಕ PIN, ATM ಕಾರ್ಡ್ ಅಥವಾ ಹಣವನ್ನು ಕದಿಯುವ ವಂಚನೆಗಳಿಗೆ ಬಲಿಯಾಗಬೇಡಿ.
PIN ಯಾರಿಗೂ ತಿಳಿಸಬೇಡಿ & ನಮೂದಿಸುವಾಗ keypad ಮುಚ್ಚಿ
ಅಪರಿಚಿತರ ಸಹಾಯ ಪಡೆಯಬೇಡಿ, SMS alerts ಸಕ್ರಿಯವಾಗಿರಲಿ.
Vijayanagar PS | ವಿಜಯನಗರ ಪೊಲೀಸ್ ಠಾಣೆ retweeted
#CyberCrimeAwareness
#FakeApps #APKScam #CyberSafety
ಸೈಬರ್ ವಂಚಕರು ನಕಲಿ Apps/Apk ಗಳನ್ನು ಬಳಸಿ ನಿಮ್ಮ ವೈಯಕ್ತಿಕ ಮಾಹಿತಿ, ಬ್ಯಾಂಕ್ ವಿವರಗಳು, ಪಾಸ್ವರ್ಡ್ಗಳು, ಫೋಟೋಗಳು, Contacts ಹಾಗೂ OTP ಗಳನ್ನು ಕದಿಯಬಹುದು.
ಜಾಗೃತರಾಗಿರಿ, ಸುರಕ್ಷತಾ ಕ್ರಮಗಳನ್ನು ತಪ್ಪದೇ ಅನುಸರಿಸಿ @BlrCityPolice.





















