Prof. M. Nagaraja retweeted
Vetrivel Muruganukku Arogara!
வெற்றிவேல் முருகனுக்கு அரோகரா!
वेट्रिवेल मुरुगनुक्कु अरोगरा!
A moment of immense significance for devotees of Lord Murugan and followers of Sanatana Dharma!
The Hon’ble Supreme Court’s direction to light the traditional ceremonial lamp at the Thiruparankundram Deepathoon is a strong reaffirmation of our age-old religious traditions and the rights of devotees. The Court’s observations questioning the conduct of Tamil Nadu authorities send a clear message that constitutional responsibilities must never be compromised for political interests.
Our sacred traditions are deeply rooted in the civilisational heritage of Bharat. No political interference or narrow agenda can diminish the faith and devotion of millions.
May Lord Murugan’s divine blessings strengthen the spirit of Dharma and protect all devotees.
Vetri Vel! Veera Vel! 🙏🚩
53
ಪ್ರಧಾನಮಂತ್ರಿ ಶ್ರೀ @narendramodi ಅವರ ನೇತೃತ್ವದಲ್ಲಿ ಸ್ವಾವಲಂಬಿ ಭಾರತದ ಸಂಕಲ್ಪಕ್ಕೆ ಮತ್ತಷ್ಟು ವೇಗ.
ರಾಷ್ಟ್ರದ ನಿರ್ಮಾಣಕ್ಕೆ ಅಗತ್ಯವಿರುವ ಯಂತ್ರೋಪಕರಣಗಳ ಉತ್ಪಾದನೆಯಲ್ಲಿ ಭಾರತವನ್ನು ಬಲಪಡಿಸುವ ನಿಟ್ಟಿನಲ್ಲಿ ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ (CIE) ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ದೇಶೀಯ ಉತ್ಪಾದನೆಗೆ ಉತ್ತೇಜನ, ಉದ್ಯೋಗಾವಕಾಶಗಳ ಸೃಷ್ಟಿ, ಪೂರೈಕೆ ಸರಪಳಿಯ ಬಲವರ್ಧನೆ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಈ ಉಪಕ್ರಮವು 2047ರ ವಿಕಸಿತ ಭಾರತ ಸಂಕಲ್ಪದತ್ತ ಮಹತ್ವದ ಹೆಜ್ಜೆಯಾಗಿದೆ.
#CabinetDecisions #ViksitBharat
40
"ಸಂತ ಶ್ರೇಷ್ಠ ಶ್ರೀ ಭಕ್ತ ಕನಕದಾಸರ ಜಯಂತಿ ಆಚರಣೆ"
ಇಂದು ಹುಬ್ಬಳ್ಳಿ ನಮ್ಮ ಗೃಹ ಕಚೇರಿಯಲ್ಲಿ ಕುಟುಂಬದ ಸದಸ್ಯರು ಹಾಗೂ ಕಚೇರಿಯ ಸಿಬ್ಬಂದಿ ವರ್ಗದವರು ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಪೂಜೆ ನೆರವೇರಿಸುವ ಮೂಲಕ ಜಯಂತಿಯನ್ನು ಭಕ್ತಿಪೂರ್ವಕವಾಗಿ ಆಚರಿಸಿದರು.
ಸಮಾನತೆ, ಮಾನವೀಯತೆ ಹಾಗೂ ಭಕ್ತಿಯ ಸಂದೇಶವನ್ನು ಸಾರಿದ ಕನಕದಾಸರ ಆದರ್ಶಗಳು ನಮಗೆ ಸದಾ ದಾರಿದೀಪವಾಗಲಿ.
ನಾಡಿನ ಸಮಸ್ತ ಜನತೆಗೆ ಕನಕದಾಸ ಜಯಂತಿಯ ಹಾರ್ದಿಕ ಶುಭಾಶಯಗಳು.
#ಕನಕದಾಸಜಯಂತಿ #KanakadasaJayanti #MPNagaraja #MPOffice
72
ನವದೆಹಲಿಯಲ್ಲಿ ಸಂತ ಶ್ರೀ ಕನಕದಾಸರ 539ನೇ ಜಯಂತಿ ಆಚರಣೆ!
ಇಂದು ಬೆಳಿಗ್ಗೆ ನವದೆಹಲಿಯ ಕರ್ನಾಟಕ ಭವನ-1 (ಕಾವೇರಿ)ಯಲ್ಲಿ ಆಯೋಜಿಸಲಾಗಿದ್ದ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಹಾನ್ ಸಂತ, ದಾರ್ಶನಿಕ ಹಾಗೂ ಸಮಾಜ ಸುಧಾರಕರಾದ ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದೆನು.
ತಮ್ಮ ಕೀರ್ತನೆಗಳು ಹಾಗೂ ತತ್ವಪದಗಳ ಮೂಲಕ ಭಕ್ತಿ, ಸಮಾನತೆ, ಮಾನವೀಯತೆ ಮತ್ತು ಸಾಮಾಜಿಕ ನ್ಯಾಯದ ಮೌಲ್ಯಗಳನ್ನು ಸಾರಿದ ಕನಕದಾಸರ ಜೀವನಾದರ್ಶಗಳು ಇಂದಿಗೂ ಸಮಾಜಕ್ಕೆ ಪ್ರೇರಣೆಯಾಗಿವೆ. ಜಾತಿ, ಭೇದಭಾವಗಳನ್ನು ಮೀರಿ ಸಮಾನತೆ ಮತ್ತು ಸೌಹಾರ್ದತೆಯ ಸಮಾಜ ನಿರ್ಮಾಣಕ್ಕೆ ಅವರು ನೀಡಿದ ಸಂದೇಶ ಸದಾ ಸ್ಮರಣೀಯ.
ಈ ಸಂದರ್ಭದಲ್ಲಿ ಕರ್ನಾಟಕ ಭವನದ ನಿವಾಸಿ ಆಯುಕ್ತರಾದ ಶ್ರೀ ಸಮೀರ್ ಶುಕ್ಲಾ, ಹೆಚ್ಚುವರಿ ನಿವಾಸಿ ಆಯುಕ್ತರಾದ ಶ್ರೀಮತಿ ಅನನ್ಯ ಶ್ರೀವಾಸ್ತವ ಹಾಗೂ ಕರ್ನಾಟಕ ಭವನದ ದೆಹಲಿ ಅಧಿಕಾರಿಗಳು ಉಪಸ್ಥಿತರಿದ್ದರು.
ಭಕ್ತ ಕನಕದಾಸರ ಆದರ್ಶಗಳು ಮತ್ತು ಮಾನವೀಯ ಮೌಲ್ಯಗಳು ನಮ್ಮೆಲ್ಲರ ಬದುಕಿಗೆ ಸದಾ ದಾರಿದೀಪವಾಗಲಿ.
#kanakajayanti #kanakadasa
ಕೇಂದ್ರ ಸಚಿವರು ಹಾಗೂ ಹಿರಿಯ ನಾಯಕರಾದ ಆತ್ಮೀಯ ಶ್ರೀ ಪ್ರಹ್ಲಾದ ಜೋಶಿ ಅವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು.
ದೇಶದ ಅಭಿವೃದ್ಧಿ ಹಾಗೂ ಜನಸೇವೆಯ ಕಾರ್ಯದಲ್ಲಿ ತಮ್ಮ ಅನುಭವ, ಬದ್ಧತೆ ಮತ್ತು ನಾಯಕತ್ವ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿ. ಭಗವಂತನು ತಮಗೆ ಉತ್ತಮ ಆರೋಗ್ಯ, ಆಯುರಾರೋಗ್ಯ ಹಾಗೂ ಜನಸೇವೆಗೆ ನಿರಂತರ ಶಕ್ತಿ ಮತ್ತು ಯಶಸ್ಸನ್ನು ನೀಡಲಿ ಎಂದು ಹಾರೈಸುತ್ತೇನೆ.
@JoshiPralhad
ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ ಮಹಾನ್ ದಾರ್ಶನಿಕರು, ಭಕ್ತಿಪಂಥದ ಶ್ರೇಷ್ಠ ಹರಿದಾಸರು ಹಾಗೂ ಸಾಮಾಜಿಕ ಸಮಾನತೆಯ ಪ್ರತಿಪಾದಕರಾದ ಶ್ರೀ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜಕ್ಕೆ ಜ್ಞಾನದ ಬೆಳಕನ್ನು ನೀಡಿದವರು.
ಭಕ್ತಿ ಮಾರ್ಗದ ಜೊತೆಗೆ ಮಾನವೀಯತೆ, ನೈತಿಕತೆ, ಆತ್ಮಗೌರವ ಮತ್ತು ಸಮಾನತೆಯ ಮೌಲ್ಯಗಳನ್ನು ತಮ್ಮ ರಚನೆಗಳ ಮೂಲಕ ಸಾರಿದ ಅವರ ಸಂದೇಶಗಳು ಸದಾ ಅಮರ. ಸಮಾಜದಲ್ಲಿ ಉತ್ತಮ ಚಿಂತನೆ ಮತ್ತು ಸಕಾರಾತ್ಮಕ ಬದಲಾವಣೆಗೆ ಪ್ರೇರಣೆ ನೀಡಿದ ಅವರ ಆದರ್ಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳೋಣ.
ದಾಸಶ್ರೇಷ್ಠ ಶ್ರೀ ಕನಕದಾಸರ ಜಯಂತಿಯಂದು ಶತಶತ ನಮನಗಳು. ನಾಡಿನ ಸಮಸ್ತ ಜನತೆಗೆ ಹಾರ್ದಿಕ ಶುಭಾಶಯಗಳು.
#KanakaJayanthi
1
3
73
ನನ್ನ ರಾಜಕೀಯ ಜೀವನದ ಅತ್ಯಂತ ಹೆಮ್ಮೆಯ ಹಾಗೂ ಭಾವನಾತ್ಮಕ ಕ್ಷಣಗಳಲ್ಲಿ ಇದೂ ಒಂದು!
ಸಾಮಾನ್ಯ ಹಿಂದುಳಿದ ವರ್ಗದ ಕುಟುಂಬದಿಂದ ಬಂದ ನನ್ನಂತಹ ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ, ರಾಜ್ಯಸಭಾ ಸದಸ್ಯನನ್ನಾಗಿ ಆಯ್ಕೆ ಮಾಡಿ, ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಂತಹ ಮಹತ್ವದ ಜವಾಬ್ದಾರಿಯನ್ನು ನೀಡಿರುವುದು ಭಾರತೀಯ ಜನತಾ ಪಾರ್ಟಿಯ ಸಂಘಟನಾ ಶಕ್ತಿಗೆ ಹಾಗೂ ಕಾರ್ಯಕರ್ತರಿಗೆ ಪಕ್ಷ ನೀಡುವ ಗೌರವಕ್ಕೆ ಸಾಕ್ಷಿಯಾಗಿದೆ.
ಇಂದು ನವದೆಹಲಿಯಲ್ಲಿರುವ ನಮ್ಮ ಪಕ್ಷದ ಕೇಂದ್ರ ಕಚೇರಿಯಲ್ಲಿ ರಾಷ್ಟ್ರೀಯ ಉಪಾಧ್ಯಕ್ಷರಿಗಾಗಿ ಒಂದು ದಿನ ವಿಶೇಷವಾಗಿ ಮೀಸಲಿಟ್ಟ (Designated) ಕೊಠಡಿಯನ್ನು ಒದಗಿಸಿರುವುದು ಮತ್ತೊಂದು ಹೆಮ್ಮೆಯ ಸಂಗತಿ. ಈ ಸಂದರ್ಭದಲ್ಲಿ ಪಕ್ಷದ ವಿವಿಧ ಹಂತಗಳ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳನ್ನು ಭೇಟಿಯಾಗಿ, ಅವರೊಂದಿಗೆ ವಿಚಾರ ವಿನಿಮಯ ನಡೆಸಿದ್ದು ಅತ್ಯಂತ ಸಂತೋಷ ಮತ್ತು ತೃಪ್ತಿಯ ಕ್ಷಣಗಳು.
ಸಾಮಾನ್ಯ ಕಾರ್ಯಕರ್ತನಾಗಿ ಆರಂಭವಾದ ನನ್ನ ಪಯಣ ಇಂದು ಪಕ್ಷದ ರಾಷ್ಟ್ರೀಯ ಮಟ್ಟದ ಜವಾಬ್ದಾರಿಗಳವರೆಗೆ ತಲುಪಿರುವುದು ನನ್ನ ಪಾಲಿಗೆ ಕೇವಲ ವೈಯಕ್ತಿಕ ಸಾಧನೆಯಲ್ಲ. ಇದು ನನ್ನಂತಹ ಲಕ್ಷಾಂತರ ಸಾಮಾನ್ಯ ಕಾರ್ಯಕರ್ತರ ಪರಿಶ್ರಮ, ನಿಷ್ಠೆ ಮತ್ತು ಸಮರ್ಪಣೆಗೆ ಪಕ್ಷ ನೀಡಿದ ಗೌರವ ಎಂದು ಭಾವಿಸುತ್ತೇನೆ.
ಈ ಎಲ್ಲಾ ಗೌರವ ಮತ್ತು ಜವಾಬ್ದಾರಿಗಳಿಗೆ ಕಾರಣರಾದ ನಮ್ಮ ಪಕ್ಷದ ಹಿರಿಯ ನಾಯಕರು, ಮಾರ್ಗದರ್ಶಕರು ಹಾಗೂ ಸಂಘಟನೆಯ ಪ್ರತಿಯೊಬ್ಬರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳು.
ಪಕ್ಷ ನನಗೆ ನೀಡಿರುವ ಈ ಗೌರವ ನನ್ನಲ್ಲಿ ಹೆಮ್ಮೆಯನ್ನು ಮಾತ್ರವಲ್ಲ, ಇನ್ನಷ್ಟು ವಿನಯ, ಜವಾಬ್ದಾರಿ ಮತ್ತು ಸಮರ್ಪಣಾ ಭಾವದಿಂದ ಕೆಲಸ ಮಾಡುವ ಸಂಕಲ್ಪವನ್ನೂ ಹೆಚ್ಚಿಸಿದೆ.
ನನ್ನ ಜೀವನದ ಈ ಸ್ಮರಣೀಯ ಕ್ಷಣ ಸದಾ ನನ್ನ ಹೃದಯದಲ್ಲಿ ಅಚ್ಚಳಿಯದೆ ಉಳಿಯಲಿದೆ.
ಕಾರ್ಯಕರ್ತನೇ ಪಕ್ಷದ ಶಕ್ತಿ, ಕಾರ್ಯಕರ್ತನಿಗೆ ಗೌರವವೇ ಪಕ್ಷದ ಸಂಸ್ಕೃತಿ!
One of the proudest and most emotional moments of my political journey!
Coming from a humble Backward Class family, I began my journey as an ordinary party worker. To be recognised by the Bharatiya Janata Party and entrusted with the responsibility of becoming a Member of the Rajya Sabha and subsequently the National Vice President of the party is a matter of immense pride and gratitude. It reflects the BJP's unique organisational culture, where dedication, commitment and hard work of ordinary karyakartas are recognised and rewarded.
Today, at our party's Central Office in New Delhi, being provided with a dedicated office room for the National Vice President is yet another special and proud moment for me. Meeting party karyakartas and office bearers from different levels of the organisation and interacting with them made the occasion even more memorable and fulfilling.
My journey from being an ordinary karyakarta to taking up responsibilities at the national level is not merely a personal achievement. I consider it a recognition of the hard work, dedication and unwavering commitment of countless ordinary party workers like me.
I extend my heartfelt gratitude to the senior leadership, our guides and every member of the organisation who have placed their trust in me and given me these opportunities.
This honour has not only filled me with pride but has also strengthened my resolve to work with greater humility, responsibility and dedication in the service of the party and the nation.
This memorable day will forever remain etched in my heart.
Karyakarta is the strength of the party, and respect for every karyakarta is the true culture of the BJP!
@BJP4India @blsanthosh @blsanthosh
@BJP4Karnataka @BJP4Keralam
24
1,569
Congress shouts “Save the Constitution,” but who needs saving it from?
The party behind the Emergency, the 42nd Amendment, curbs on judicial power and attacks on democratic institutions now lectures India on constitutional values.
Dr. Babasaheb Ambedkar was denied his due recognition for decades, yet Congress today claims his legacy.
The Constitution is India's pride, not Congress's political shield!
Save the Constitution. Hold Congress accountable!
#SamvidhanGauravDiwas #SaveTheConstitution
1
73
Babasaheb Ambedkar envisioned a nation where equality, dignity, justice and opportunity were the rights of every citizen.
PM Shri @narendramodi ji, translating this vision into action, empowering the marginalised and ensuring development, dignity and opportunity for all.
#SamvidhanGauravDiwas
44
ಭಯೋತ್ಪಾದನೆಗೆ ಎಂದಿಗೂ ಕ್ಷಮೆಯಿಲ್ಲ, ದೇಶದ್ರೋಹಿಗಳಿಗೆ ಎಂದಿಗೂ ಕರುಣೆಯಿಲ್ಲ!
2008ರ ನವೆಂಬರ್ 26ರಂದು ಮುಂಬೈ ಮೇಲೆ ನಡೆದ ಭೀಕರ 26/11 ಉಗ್ರರ ದಾಳಿ ಭಾರತದ ಆತ್ಮಸಾಕ್ಷಿಯನ್ನು ಕದಡಿದ ಕರಾಳ ಅಧ್ಯಾಯ. ನಮ್ಮ ಅಮೂಲ್ಯ ಜೀವಗಳನ್ನು ಬಲಿಪಡೆದ ಆ ದುಷ್ಟರನ್ನು ನಾವೆಂದಿಗೂ ಕ್ಷಮಿಸಲಾರೆವು, ದೇಶದ ರಕ್ಷಣೆಗಾಗಿ ಪ್ರಾಣಾರ್ಪಣೆ ಮಾಡಿದ ವೀರ ಯೋಧರು ಹಾಗೂ ಅಮಾಯಕ ನಾಗರಿಕರ ತ್ಯಾಗವನ್ನು ಎಂದಿಗೂ ಮರೆಯಲಾರೆವು.
ಭಯೋತ್ಪಾದನೆಯ ವಿರುದ್ಧ ಭಾರತದ ಸಂಕಲ್ಪ ಅಚಲ. ದೇಶದ ಭದ್ರತೆ, ಏಕತೆ ಮತ್ತು ಸಾರ್ವಭೌಮತ್ವದ ರಕ್ಷಣೆಯಲ್ಲಿ ನಾವು ಸದಾ ಒಂದಾಗಿರೋಣ.
ವೀರ ಹುತಾತ್ಮರಿಗೆ ಶತಕೋಟಿ ನಮನಗಳು. ಅವರ ತ್ಯಾಗವೇ ನಮ್ಮ ದೇಶಭಕ್ತಿಯ ಶಕ್ತಿ! 🇮🇳
#MumbaiTerrorAttack #NeverForget26/11
52
ಭಾರತ ಸಂವಿಧಾನ ಗೌರವ ದಿನದ ಹಾರ್ದಿಕ ಶುಭಾಶಯಗಳು!
ಭಾರತದ ಸಂವಿಧಾನವು ನಮ್ಮ ಪ್ರಜಾಪ್ರಭುತ್ವದ ಆತ್ಮ, ರಾಷ್ಟ್ರದ ಏಕತೆ ಮತ್ತು ಅಖಂಡತೆಯ ಪ್ರತೀಕ. ಪ್ರತಿಯೊಬ್ಬ ಭಾರತೀಯನ ಹಕ್ಕು, ಸ್ವಾತಂತ್ರ್ಯ, ಸಮಾನತೆ ಹಾಗೂ ನ್ಯಾಯದ ಭದ್ರ ಬುನಾದಿಯಾಗಿದೆ.
ಪ್ರಧಾನಮಂತ್ರಿ ಶ್ರೀ @narendramodi ಜೀ ಅವರ ನೇತೃತ್ವದಲ್ಲಿ ಸಂವಿಧಾನದ ಆಶಯಗಳು, ಮೌಲ್ಯಗಳು ಮತ್ತು ಕರ್ತವ್ಯ ಪ್ರಜ್ಞೆಯನ್ನು ಜನಸಾಮಾನ್ಯರಲ್ಲಿ ಬಲಪಡಿಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನಗಳು ನಡೆಯುತ್ತಿವೆ. ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ವಿಕಸಿತ ಭಾರತದ ನಿರ್ಮಾಣಕ್ಕೆ ನಾವೆಲ್ಲರೂ ಕೈಜೋಡಿಸೋಣ.
ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಸೇರಿದಂತೆ ಸಂವಿಧಾನ ರಚನೆಯಲ್ಲಿ ಕೊಡುಗೆ ನೀಡಿದ ಮಹನೀಯರಿಗೆ ಗೌರವಪೂರ್ವಕ ನಮನಗಳು.
ಸಂವಿಧಾನದ ಗೌರವವೇ ಪ್ರಜಾಪ್ರಭುತ್ವದ ಗೌರವ! ಸಂವಿಧಾನದ ಆಶಯವೇ ವಿಕಸಿತ ಭಾರತದ ಸಂಕಲ್ಪ!
#SamvidhanGauravDiwas #ConstitutionOfIndia
51
ನವ ದೆಹಲಿ ಪ್ರವಾಸ
ದಿನಾಂಕ: 26 ನವೆಂಬರ್ 2026, ಗುರುವಾರ
ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ಭೇಟಿಗೆ ಲಭ್ಯವಿರುತ್ತೇನೆ.
ಪಕ್ಷದ ಕಾರ್ಯಕರ್ತರು, ಮುಖಂಡರು, ಹಾಗೂ ಭೇಟಿಯಾಗಲು ಇಚ್ಛಿಸುವ ಎಲ್ಲರೂ ಈ ಸಂದರ್ಭದಲ್ಲಿ ಆಗಮಿಸಬಹುದು.
📍 ಸ್ಥಳ: ಬಿಜೆಪಿ ಕೇಂದ್ರ ಕಚೇರಿ,
6-A, ದೀನದಯಾಳ್ ಉಪಾಧ್ಯಾಯ ಮಾರ್ಗ,
ನವದೆಹಲಿ - 110002.
ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸುತ್ತೇನೆ.
I will be available at the BJP Central Office, New Delhi, on Thursday, 26th November 2026, from 10:00 AM to 5:00 PM.
Party karyakartas, Padadhikaris, well wishers and those wishing to meet me are welcome to visit.
📍 Venue: BJP Central Office, 6-A, Deendayal Upadhyay Marg, New Delhi – 110002.
Looking forward to meeting you all.
@BJP4India @BJP4Karnataka @NitinNabin @blsanthosh
58
Participated in the Seva Doot Abhiyan Training Programme at Sri Ramakrishna Engineering College, Perambalur, Tamil Nadu, in the presence of @BJP4TamilNadu President Shri Nainar Nagenthran Avgl.
The programme witnessed the participation of over 400 Seva Doots and Assembly Coordinators representing different districts across Tamil Nadu.
BJP Tamil Nadu Sah-Prabhari Shri @BlrNirmal Ji addressed the gathering and shared his insights on the initiative.
The programme brings together 4 Zones and 36 Organisational Districts of Tamil Nadu, strengthening coordination and preparing dedicated volunteers for the Seva Doot Abhiyan.
#TamilNaduPravas #SevaDootAbhiyan #BJP4TamilNadu #BJP4India #25YearsOfSeva @BJP4India @BJP4Karnataka @blsanthosh
51
ಭಾರತದ ಬಡತನ ಕಡಿತದಲ್ಲಿ ಮಹತ್ವದ ಬದಲಾವಣೆ! 🌍
ವಿಶ್ವಬ್ಯಾಂಕ್ ವರದಿಯ ಪ್ರಕಾರ 2011–12ರಿಂದ 2023–24ರವರೆಗೆ 49.6 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. ತೀವ್ರ ಬಡತನದ ಪ್ರಮಾಣ 27.1%ರಿಂದ 2.6%ಕ್ಕೆ ಇಳಿದಿದೆ.
ಅಂತ್ಯೋದಯದ ಆಶಯದೊಂದಿಗೆ ಪ್ರಧಾನಿ ಶ್ರೀ @narendramodi ಅವರ ನೇತೃತ್ವದಲ್ಲಿ ಸಮಗ್ರ ಅಭಿವೃದ್ಧಿಯತ್ತ ಭಾರತ! 🇮🇳
#GaribKalyan #NewIndia
33
ಭಾರತೀಯ ಸಶಸ್ತ್ರ ಪಡೆಗಳ ಸಾಮರ್ಥ್ಯಕ್ಕೆ ಮತ್ತೊಂದು ಸ್ವದೇಶಿ ಬಲ! 🚀🇮🇳
ಪ್ರಧಾನಮಂತ್ರಿ ಶ್ರೀ @narendramodi ಜೀ ಅವರ ಆತ್ಮನಿರ್ಭರ ಭಾರತದ ಸಂಕಲ್ಪಕ್ಕೆ ಮತ್ತೊಂದು ಹೆಮ್ಮೆಯ ಮೈಲಿಗಲ್ಲು!
DRDO ನಡೆಸಿದ ಅಂತಿಮ ಹಂತದ ಬಳಕೆದಾರರ ಪರೀಕ್ಷೆಯಲ್ಲಿ ಸ್ವದೇಶಿ ನಿರ್ಮಿತ ಕ್ವಾಸಿ-ಬ್ಯಾಲಿಸ್ಟಿಕ್ ಕ್ಷಿಪಣಿ 'ಪ್ರಳಯ್' ಯಶಸ್ವಿಯಾಗಿದ್ದು, ಶೀಘ್ರದಲ್ಲೇ ಭೂಸೇನೆ ಮತ್ತು ವಾಯುಪಡೆಗೆ ಸೇರ್ಪಡೆಯಾಗಲಿದೆ.
ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆಯತ್ತ ಸಾಗುತ್ತಿರುವ ಭಾರತ, ಸ್ವದೇಶಿ ತಂತ್ರಜ್ಞಾನ ಮತ್ತು ರಕ್ಷಣಾ ಉತ್ಪಾದನೆಯಲ್ಲಿ ಹೊಸ ಸಾಧನೆಗಳನ್ನು ದಾಖಲಿಸುತ್ತಿದೆ.
ಆತ್ಮನಿರ್ಭರ ಭಾರತ – ಸಶಕ್ತ ಭಾರತ – ಸುರಕ್ಷಿತ ಭಾರತ!
#PralayMissile #AtmanirbharBharat
37
ವಿಶ್ವ ಮಹಿಳಾ ದೌರ್ಜನ್ಯ ವಿರೋಧಿ ದಿನ!
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ ಅವರ ನೇತೃತ್ವದ ಕೇಂದ್ರ ಸರ್ಕಾರವು ಮಿಷನ್ ಶಕ್ತಿ, ಬೇಟಿ ಬಚಾವೋ–ಬೇಟಿ ಪಢಾವೋ, ಒನ್ ಸ್ಟಾಪ್ ಸೆಂಟರ್, ಮಹಿಳಾ ಸಹಾಯವಾಣಿ 181 ಹಾಗೂ ನಿರ್ಭಯಾ ನಿಧಿ ಸೇರಿದಂತೆ ಹಲವು ಯೋಜನೆಗಳ ಮೂಲಕ ಮಹಿಳೆಯರ ರಕ್ಷಣೆ ಮತ್ತು ಸಬಲೀಕರಣಕ್ಕೆ ವಿಶೇಷ ಆದ್ಯತೆ ನೀಡುತ್ತಿದೆ.
ಮಹಿಳೆಯರಿಗೆ ಕೇವಲ ಗೌರವವಲ್ಲ, ಸುರಕ್ಷತೆ, ಸಮಾನ ಅವಕಾಶ ಮತ್ತು ನ್ಯಾಯಯುತ ಬದುಕಿನ ಭರವಸೆ ನೀಡುವುದು ನಮ್ಮೆಲ್ಲರ ಜವಾಬ್ದಾರಿ. ಮಹಿಳೆಯರ ಮೇಲಿನ ಪ್ರತಿಯೊಂದು ದೌರ್ಜನ್ಯದ ವಿರುದ್ಧ ಧ್ವನಿ ಎತ್ತೋಣ; ಸುರಕ್ಷಿತ, ಸಮಾನತೆಯ ಮತ್ತು ಸಶಕ್ತ ಸಮಾಜ ನಿರ್ಮಾಣಕ್ಕೆ ಸಂಕಲ್ಪ ಮಾಡೋಣ.
ಮಹಿಳಾ ಸುರಕ್ಷತೆ ನಮ್ಮ ಸಂಕಲ್ಪ, ಮಹಿಳಾ ಸಬಲೀಕರಣ ನಮ್ಮ ಗುರಿ!
#InternationalDayForTheEliminationOfViolenceAgainstWomen #NariShakti
56
ರಾಜ್ಯಸಭಾ ಸದಸ್ಯರು, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು ಹಾಗೂ ಪದ್ಮವಿಭೂಷಣ ಪುರಸ್ಕೃತರಾದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಸಮಾಜದ ಸರ್ವತೋಮುಖ ಅಭಿವೃದ್ಧಿಯನ್ನು ಧ್ಯೇಯವಾಗಿಸಿಕೊಂಡು ಸೇವೆ, ಸಂಸ್ಕಾರ ಮತ್ತು ಸಮರ್ಪಣೆಯ ಮೌಲ್ಯಗಳನ್ನು ಎತ್ತಿಹಿಡಿದಿರುವ ತಮಗೆ ಭಗವಂತನು ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ಇನ್ನಷ್ಟು ಜನಸೇವೆಯ ಶಕ್ತಿಯನ್ನು ಕರುಣಿಸಲಿ ಎಂದು ಹಾರೈಸುತ್ತೇನೆ.
@HeggadeD
#DVeerendraHeggade
54








































