
Official twitter account of Kadugodi Police Station (080-22943471). Dial Namma-112 in case of emergency. @BlrCityPolice
kadugodi bengaloru
Joined September 2014
- Tweets218
- Following39
- Followers1.4K
- Likes28
🕉️ ಗಣೇಶೋತ್ಸವ ಪೂರ್ವಭಾವಿ ಸಭೆ
ಇಂದು ಕಾಡುಗೋಡಿ ಪೊಲೀಸ್ ಠಾಣಾ ಸರಹದ್ದಿನಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡುವ ಪ್ರಮುಖರ ಸಭೆ ನಡೆಸಲಾಯಿತು.
ಈ ಸಂದರ್ಭದಲ್ಲಿ PI ರವರು ಗಣೇಶೋತ್ಸವವನ್ನು ಶಾಂತಿಯುತವಾಗಿ ಹಾಗೂ ಸುರಕ್ಷಿತವಾಗಿ ಆಚರಿಸುವ ಕುರಿತು ಅಗತ್ಯ ಸಲಹೆ–ಸೂಚನೆಗಳನ್ನು ನೀಡಿದರು.
ಕಾಡುಗೋಡಿ ಪೊಲೀಸ್ ಠಾಣೆ | ಬೆಂಗಳೂರು ನಗರ 🚔
🚨 ತುರ್ತು ಸಂದರ್ಭದಲ್ಲಿ 112 – ತಕ್ಷಣದ ಸ್ಪಂದನೆ, ಅಮೂಲ್ಯ ಜೀವ ರಕ್ಷಣೆ.
ಕಾಡುಗೋಡಿ ಠಾಣಾ ವ್ಯಾಪ್ತಿಯಲ್ಲಿ ತುರ್ತು ಕರೆ ಬಂದ ತಕ್ಷಣ ಹೊಯ್ಸಳ-232 ಗಸ್ತು ತಂಡ ಸ್ಥಳಕ್ಕೆ ಧಾವಿಸಿ, 108 ಆಂಬ್ಯುಲೆನ್ಸ್ ಮೂಲಕ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ, ಸೂಕ್ತ ಚಿಕಿತ್ಸೆ ದೊರಕುವಂತೆ ಮಾಡಿ ಜೀವ ರಕ್ಷಿಸಿದ್ದಾರೆ.
ಕಾಡುಗೋಡಿ ಪೊಲೀಸ್ ಠಾಣೆ.
1
1,150
ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಂಭ್ರಮ ಹಾಗೂ ಗೌರವದಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಧ್ವಜಾರೋಹಣ ನೆರವೇರಿಸಿ, ಸ್ವಾತಂತ್ರ್ಯ ದಿನಾಚರಣೆಯ ಮಹತ್ವ, ದೇಶದ ಏಕತೆ, ಶಾಂತಿ ಹಾಗೂ ಸಾರ್ವಜನಿಕರ ಸುರಕ್ಷತೆಯ ಕರ್ತವ್ಯಗಳ ಕುರಿತು ಸಂದೇಶ ನೀಡಲಾಯಿತು.
ಜೈ ಹಿಂದ್!
ವಂದೇ ಮಾತರಂ!
3
848
ನವಪೀಳಿಗೆಯ ಭವಿಷ್ಯಕ್ಕಾಗಿ, ಮಾದಕ ದ್ರವ್ಯ ಮುಕ್ತ ಸಮಾಜ!
ಪೊಲೀಸ್ ಇಲಾಖೆಯಿಂದ 'Operation RISE' & 'Beda Bro' ಅಭಿಯಾನಕ್ಕೆ ಚಾಲನೆ. ಡ್ರಗ್ಸ್ನಿಂದ ಜಿವನ ಹಾಳು ಮಾಡಿಕೊಳ್ಳಬೇಡಿ!
ಕುತೂಹಲವೇ ಇರಲಿ, ಒತ್ತಡವೇ ಇರಲಿ... ಧೈರ್ಯವಾಗಿ ಹೇಳಿ: "ಬೇಡ ಬ್ರೋ!"
ಡ್ರಗ್ಸ್ಗೆ 'ಬೇಡ ಬ್ರೋ', ಆರೋಗ್ಯಕರ ಜೀವನಕ್ಕೆ 'ಹೌದು' ಎನ್ನಿ!
1
660
ಕುಟುಂಬ ಕಲಹದಿಂದ ಮನನೊಂದು ರೈಲು ಹಳಿಯಲ್ಲಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವ್ಯಕ್ತಿಯನ್ನು ಹೊಯ್ಸಳ ಸಿಬ್ಬಂದಿ ASI ಶಿವರಾಜ್ ಮತ್ತು ಕಾನ್ಸ್ಟೇಬಲ್ ಪುಂಡಲಿಕ ಕಮಟೆ ಸ್ಥಳಕ್ಕೆ ಧಾವಿಸಿ ಆತನನ್ನು ರಕ್ಷಿಸಿದ್ದಾರೆ, ವ್ಯಕ್ತಿಯ ಹೆಂಡತಿಯನ್ನು ಠಾಣೆಗೆ ಕರೆಯಿಸಿ ಸಮಾಲೋಚನೆ ಮಾಡಿ ಕಳಿಸಲಾಗಿದೆ.
ಕಾಡುಗೋಡಿ ಪೊಲೀಸ್ ಠಾಣೆ KADUGODI POLICE STATION retweeted
ವೈಟ್ಫೀಲ್ಡ್ ವಿಭಾಗದ ವತಿಯಿಂದ *ದಿನಾಂಕ 25/07/2026 (ಶನಿವಾರ) ರಂದು ಬ್ರಿಗೇಡ್ ಟೆಕ್ ಗಾರ್ಡನ್, ಐಟಿಪಿಎಲ್ ಮುಖ್ಯ ರಸ್ತೆ, ಕುಂದಲಹಳ್ಳಿ, ವೈಟ್ಫೀಲ್ಡ್, ಬೆಂಗಳೂರು* ನಗರದಲ್ಲಿ ಮಾಸಿಕ ಜನ ಸಂಪರ್ಕ ಸಭೆಯನ್ನು ಆಯೋಜಿಸಲಾಗಿದೆ.
ಈ ಸಭೆಯಲ್ಲಿ ಮಾನ್ಯ ಶ್ರೀ ಸೀಮಂತ್ ಕುಮಾರ್ ಸಿಂಗ್, ಐಪಿಎಸ್, ಪೊಲೀಸ್ ಆಯುಕ್ತರು, ಬೆಂಗಳೂರು ನಗರ, ಶ್ರೀ ರಮೇಶ್ ಬಿ, ಐಪಿಎಸ್, ಜಂಟಿ ಪೊಲೀಸ್ ಆಯುಕ್ತರು, (ಪೂರ್ವ), ಬೆಂಗಳೂರು ನಗರ, ಹಾಗೂ ಶ್ರೀ ಸೈದುಲು ಅಡಾವತ್, ಐಪಿಎಸ್, ಉಪ ಪೊಲೀಸ್ ಆಯುಕ್ತರು, ವೈಟ್ಫೀಲ್ಡ್ ವಿಭಾಗ, ಬೆಂಗಳೂರು ನಗರ ಅವರು ಉಪಸ್ಥಿತರಿದ್ದು, ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ, ಸಂಬಂಧಿತ ಸಮಸ್ಯೆಗಳ ಕುರಿತು ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ.
ಸಾರ್ವಜನಿಕರು ಈ ಜನ ಸಂಪರ್ಕ ಸಭೆಯಲ್ಲಿ ಭಾಗವಹಿಸಿ ತಮ್ಮ ಅಹವಾಲುಗಳು ಹಾಗೂ ಸಮಸ್ಯೆಗಳನ್ನು ನೇರವಾಗಿ ಅಧಿಕಾರಿಗಳ ಗಮನಕ್ಕೆ ತರಬಹುದಾಗಿದೆ.
The Whitefield Division has organized a Monthly Public Grievance Meeting *on Saturday, 25 July 2026, at Brigade Tech Garden, ITPL Main Road, Kundalahalli, Whitefield, Bengaluru* .
The meeting will be attended by Shri Seemanth Kumar Singh, IPS, Commissioner of Police, Bengaluru City; Shri Ramesh B., IPS, Joint Commissioner of Police, (East), Bengaluru City; and Shri Saidulu Adavath, IPS, Deputy Commissioner of Police, Whitefield Division, Bengaluru City. During the meeting, members of the public will have the opportunity to present their grievances directly to the senior officers, who will hear their concerns and initiate necessary action on the issues raised.
Members of the public are requested to participate in the meeting and bring their grievances and concerns to the attention of the officers.
@BlrCityPolice
@CPBlr
@DgpKarnataka
@AddlCPEast
ಕಾಡುಗೋಡಿ ಪೊಲೀಸ್ ಠಾಣೆ KADUGODI POLICE STATION retweeted
*ಇಂದು ವೈಟ್ಫೀಲ್ಡ್ ವಿಭಾಗದ ವತಿಯಿಂದ ಮಾಸಿಕ ಜನ ಸಂಪರ್ಕ ಸಭೆಯನ್ನು ಆಯೋಜಿಸಲಾಗಿತ್ತು* .
ಸಭೆಯಲ್ಲಿ ಮಾನ್ಯ ಶ್ರೀ ಸೀಮಂತ್ ಕುಮಾರ್ ಸಿಂಗ್, ಐಪಿಎಸ್, ಪೊಲೀಸ್ ಆಯುಕ್ತರು, ಬೆಂಗಳೂರು ನಗರ, ಶ್ರೀ ಕಾರ್ತಿಕ್ ರೆಡ್ಡಿ, ಐಪಿಎಸ್, ಜಂಟಿ ಪೊಲೀಸ್ ಆಯುಕ್ತರು (ಸಂಚಾರ), ಬೆಂಗಳೂರು ನಗರ, ಶ್ರೀ ಸೈದುಲು ಅಡಾವತ್, ಐಪಿಎಸ್, ಉಪ ಪೊಲೀಸ್ ಆಯುಕ್ತರು, ವೈಟ್ಫೀಲ್ಡ್ ವಿಭಾಗ, ಹಾಗೂ ಶ್ರೀ ಸಾಹಿಲ್ ಬಾಗ್ಲ, ಐಪಿಎಸ್, ಉಪ ಪೊಲೀಸ್ ಆಯುಕ್ತರು, ಸಂಚಾರ ಪೂರ್ವ ವಿಭಾಗ, ಬೆಂಗಳೂರು ನಗರ ಉಪಸ್ಥಿತರಿದ್ದರು.
ಸಭೆಯಲ್ಲಿ ಸಾರ್ವಜನಿಕರೊಂದಿಗೆ ಮುಕ್ತ ಸಂವಾದ ನಡೆಸಿ, ಅವರ ಅಹವಾಲುಗಳು, ಸಮಸ್ಯೆಗಳು ಹಾಗೂ ಸಲಹೆಗಳನ್ನು ಆಲಿಸಲಾಯಿತು. ಸಾರ್ವಜನಿಕರು ಪ್ರಸ್ತಾಪಿಸಿದ ಸಂಚಾರ ಸಮಸ್ಯೆಗಳು, ಕಾನೂನು ಮತ್ತು ಸುವ್ಯವಸ್ಥೆ, ಅಪರಾಧ ತಡೆ ಹಾಗೂ ಸಾರ್ವಜನಿಕ ಸುರಕ್ಷತೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು.
ಸಾರ್ವಜನಿಕರಿಂದ ಸ್ವೀಕರಿಸಲಾದ ಅಹವಾಲುಗಳಿಗೆ ಆದ್ಯತೆಯ ಮೇರೆಗೆ ಸ್ಪಂದಿಸಿ, ಅಗತ್ಯ ಕ್ರಮ ಕೈಗೊಂಡು ಶೀಘ್ರ ಪರಿಹಾರ ಒದಗಿಸುವಂತೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಲಾಯಿತು.
ಇದೇ ಸಂದರ್ಭದಲ್ಲಿ, ಪೊಲೀಸ್ ಇಲಾಖೆಯ ಅಪರಾಧ ಪತ್ತೆ ಕಾರ್ಯಗಳಲ್ಲಿ ಸಹಕರಿಸಿ, ಅಪರಾಧ ಪ್ರಕರಣಗಳ ಪತ್ತೆಗೆ ನೆರವಾದ ಸಾರ್ವಜನಿಕರನ್ನು ಗುರುತಿಸಿ, ಅವರ ಸಹಕಾರವನ್ನು ಶ್ಲಾಘಿಸಿ ಪ್ರಶಂಸನಾ ಪತ್ರಗಳನ್ನು ನೀಡಿ ಗೌರವಿಸಲಾಯಿತು.
*Today, the Whitefield Division organized its Monthly Public Interaction Meeting.*
The meeting was attended by Shri Seemant Kumar Singh, IPS, Commissioner of Police, Bengaluru City; Shri Karthik Reddy, IPS, Joint Commissioner of Police (Traffic), Bengaluru City; Shri Saidulu Adavath, IPS, Deputy Commissioner of Police, Whitefield Division; and Shri Sahil Bagla, IPS, Deputy Commissioner of Police, Traffic East Division, Bengaluru City.
During the meeting, an open interaction was held with members of the public, and their grievances, concerns, and suggestions were heard. Various issues raised by the public, including traffic-related concerns, law and order, crime prevention, and public safety, were discussed.
The concerned police officers were instructed to give priority to the grievances received from the public, take necessary action, and ensure their prompt resolution.
On this occasion, members of the public who extended valuable cooperation to the Police Department and assisted in the detection of criminal cases were recognized and honoured with Certificates of Appreciation in acknowledgment of their contribution.
@BlrCityPolice
@CPBlr
@DgpKarnataka
@AddlCPEast
@seemantsingh96
ಕಾಡುಗೋಡಿ ಪೊಲೀಸ್ ಠಾಣೆ KADUGODI POLICE STATION retweeted
"The Whitefield Police of Whitefield Division have successfully arrested one accused who was attempting to illegally transport prohibited ganja within the limits of Whitefield Police Station. Approximately 12 kg of prohibited ganja, valued at around ₹20,00,000/-, has been seized from the accused
"ವೈಟ್ಫೀಲ್ಡ್ ವಿಭಾಗದ ವೈಟ್ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಿಷೇಧಿತ ಗಾಂಜಾ ಸಾಗಾಟ ಮಾಡಲು ಪ್ರಯತ್ನಿಸುತ್ತಿದ್ದ ಒಬ್ಬ ಆರೋಪಿಯನ್ನು ಬಂಧಿಸಲಾಗಿದ್ದು, ಆರೋಪಿಯಿಂದ ಸುಮಾರು ₹20,00,000/- ಮೌಲ್ಯದ 12 ಕೆ.ಜಿ. ನಿಷೇಧಿತ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ವೈಟ್ಫೀಲ್ಡ್ ಪೊಲೀಸ್ ಠಾಣೆಯ ಪೊಲೀಸರು ಯಶಸ್ವಿಯಾಗಿರುತ್ತಾರೆ."
#WhitefieldPolice #BengaluruCityPolice #DrugFreeKarnataka #SayNoToDrugs #CrimePrevention #ZeroTolerance #PublicSafety
@BlrCityPolice
@CPBlr
@AddlCPEast
@DgpKarnataka
ಕಾಡುಗೋಡಿ ಪೊಲೀಸ್ ಠಾಣೆ KADUGODI POLICE STATION retweeted
🚨 *Whitefield Division Night Enforcement Drive* 🚨
As part of its continued commitment to public safety and crime prevention, Whitefield Division conducted a special night enforcement drive against active rowdy sheeters from 12:00 AM to 3:00 AM.
👮♂️ 28 police teams, comprising over 140 officers and staff, participated in the operation.
✔️ More than 150 active rowdy sheeters were checked.
✔️ 13 vehicles were seized for not carrying valid documents.
✔️ Necessary instructions were issued to all officers and staff to further strengthen preventive policing and ensure strict enforcement of the law.
Whitefield Division remains committed to maintaining law and order and ensuring the safety and security of all citizens.
🚨 *ವೈಟ್ಫೀಲ್ಡ್ ವಿಭಾಗದ ವಿಶೇಷ ರಾತ್ರಿ ತಪಾಸಣಾ ಕಾರ್ಯಾಚರಣೆ* 🚨
ಸಾರ್ವಜನಿಕರ ಸುರಕ್ಷತೆ ಹಾಗೂ ಅಪರಾಧ ತಡೆಗಟ್ಟುವ ಉದ್ದೇಶದಿಂದ, ವೈಟ್ಫೀಲ್ಡ್ ವಿಭಾಗವು ರಾತ್ರಿ 12:00 ಗಂಟೆಯಿಂದ ಬೆಳಗಿನ 3:00 ಗಂಟೆಯವರೆಗೆ ಸಕ್ರಿಯ ರೌಡಿ ಶೀಟರ್ಗಳ ವಿರುದ್ಧ ವಿಶೇಷ ತಪಾಸಣಾ ಕಾರ್ಯಾಚರಣೆ ನಡೆಸಿತು.
👮♂️ 28 ಪೊಲೀಸ್ ತಂಡಗಳಲ್ಲಿ 140ಕ್ಕೂ ಹೆಚ್ಚು ಅಧಿಕಾರಿಗಳು ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.
✔️ 150ಕ್ಕೂ ಹೆಚ್ಚು ಸಕ್ರಿಯ ರೌಡಿ ಶೀಟರ್ಗಳನ್ನು ಪರಿಶೀಲಿಸಲಾಯಿತು.
✔️ ಸೂಕ್ತ ದಾಖಲೆಗಳಿಲ್ಲದ 13 ವಾಹನಗಳನ್ನು ವಶಪಡಿಸಿಕೊಳ್ಳಲಾಯಿತು.
✔️ ತಡೆಗಟ್ಟುವ ಪೊಲೀಸ್ ಕ್ರಮಗಳನ್ನು ಮತ್ತಷ್ಟು ಬಲಪಡಿಸುವ ಹಾಗೂ ಕಾನೂನು ಪಾಲನೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಅಗತ್ಯ ಸೂಚನೆಗಳನ್ನು ನೀಡಲಾಯಿತು.
ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ಸಾರ್ವಜನಿಕರ ಸುರಕ್ಷತೆಯನ್ನು ಖಚಿತಪಡಿಸುವಲ್ಲಿ ವೈಟ್ಫೀಲ್ಡ್ ವಿಭಾಗ ಸದಾ ಬದ್ಧವಾಗಿದೆ.
#WhitefieldDivision #BengaluruCityPolice #CrimePrevention #PublicSafety #LawAndOrder #SafeBengaluru
@BlrCityPolice
@CPBlr
@DgpKarnataka
@AddlCPEast
ಕಾಡುಗೋಡಿ ಪೊಲೀಸ್ ಠಾಣೆ KADUGODI POLICE STATION retweeted
ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮಹಿಳಾ ಪಿಜಿಗಳಲ್ಲಿ ಮಾದಕ ವಸ್ತುಗಳ ವಿರುದ್ಧ ಜಾಗೃತಿ, ಮಹಿಳಾ ಸುರಕ್ಷತೆ ಹಾಗೂ ಸೈಬರ್ ಅಪರಾಧ ತಡೆ ಕುರಿತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ನಿವಾಸಿಗಳಿಗೆ ಮಾದಕ ವ್ಯಸನದ ದುಷ್ಪರಿಣಾಮಗಳು, ಮಹಿಳಾ ಸುರಕ್ಷತೆ ಹಾಗೂ ಸೈಬರ್ ವಂಚನೆಗಳಿಂದ ಸುರಕ್ಷಿತವಾಗಿರುವ ಕುರಿತು ಅರಿವು ಮೂಡಿಸಿ, ಯಾವುದೇ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣವೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ ತಿಳಿಸಲಾಯಿತು.
ಸುರಕ್ಷಿತ ಹಾಗೂ ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿ.
An awareness programme on anti-drug initiatives, women's safety, and cybercrime prevention was conducted at women's PG accommodations under the jurisdiction of Mahadevapura Police Station.
Residents were sensitized about the harmful effects of drug abuse, personal safety measures for women, and ways to stay protected from cyber fraud. They were also advised to immediately report any suspicious activities to the police.
Join hands with the Police Department in building a safe, aware, and drug-free society.
#DrugFreeKarnataka #WomenSafety #CyberSafety #MahadevapuraPolice #WhitefieldDivision #BengaluruCityPolice #SayNoToDrugs
@CPBlr
@BlrCityPolice
@DgpKarnataka
ಕಾಡುಗೋಡಿ ಪೊಲೀಸ್ ಠಾಣೆ KADUGODI POLICE STATION retweeted
Today a meeting was conducted with the PSI's and crime staff of Whitefield Sub-Division. They were instructed to intensify the detection of criminal cases and maintain close surveillance on the movements and activities of rowdy elements.
ಅಂತರಾಷ್ಟ್ರೀಯ ಮಾದಕ ವ್ಯಸನ ಮತ್ತು ಕಳ್ಳಸಾಗಾಣಿಕೆ ವಿರೋಧಿ ದಿನ ಅಂಗವಾಗಿ, ಕಾಡುಗೋಡಿ ಪೊಲೀಸ್ ಠಾಣೆ ವತಿಯಿಂದ ಠಾಣಾ ವ್ಯಾಪ್ತಿಯ ಶಾಲಾ ಹಾಗೂ ಕಾಲೇಜುಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಮಾದಕ ವ್ಯಸನದ ದುಷ್ಪರಿಣಾಮಗಳು, ಕಾನೂನು ಅರಿವು ಹಾಗೂ ಮಾದಕ ವಸ್ತುಗಳಿಂದ ದೂರವಿರುವ ಕುರಿತು ಜಾಗೃತಿ ಮೂಡಿಸಲಾಯಿತು.
ಈ ದಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಡುಗೋಡಿ ಗೆ ಬೇಟಿ ನೀಡಿ ಶಾಲಾ ಮಕ್ಕಳಿಗೆ ಮಾದಕ ದ್ರವ್ಯ ಪದಾರ್ಥಗಳ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸಲಾಯಿತು. ಹಾಗೂ ಮಕ್ಕಳ ದೌರ್ಜನ್ಯ/ಮಕ್ಕಳ ಕಾನೂನು ಬಗ್ಗೆ ಅರಿವು ಮೂಡಿಸಲಾಯಿತು.
ಆಸ್ಟರ್ ಡಿ,ಎಮ್ ಆಸ್ಪತ್ರೆಯ ಸಿಬ್ಬಂದಿಯ ಮೊಬೈಲ್ ಪೋನ್ IPHONE 16 ನ್ನು ಕಳೆದುಕೊಂಡ ಎರಡು ಗಂಟೆಯಲ್ಲಿ ಮೊಬೈಲ್ ಫೋನ್ ನನ್ನು ಪತ್ತೆ ಮಾಡಿ ವಾರಸುದಾರರಿಗೆ ನೀಡಲಾಯಿತು.
ಕಾಡುಗೋಡಿ ಪೊಲೀಸ್ ಠಾಣೆ KADUGODI POLICE STATION retweeted
Today, the Hon'ble Commissioner of Police, Bengaluru City, Shri Seemanth Kumar Singh, IPS, and the Additional Commissioner of Police, East Zone, Shri Ramesh Banoth, IPS, held a meeting with all ACPs and PI's of the Whitefield Division.
During the meeting, detailed discussions were held on maintaining law and order, prevention of crime, ensuring quality investigation of cases, expeditious disposal of public grievances, and further strengthening a citizen-friendly policing system. Necessary guidelines and instructions were issued in this regard.
ಇಂದು ಬೆಂಗಳೂರು ನಗರದ ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಸೀಮಾಂತ್ ಕುಮಾರ್ ಸಿಂಗ್, ಐಪಿಎಸ್ ಹಾಗೂ ಪೂರ್ವ ವಲಯದ ಅಪರ ಪೊಲೀಸ್ ಆಯುಕ್ತರಾದ ಶ್ರೀ ರಮೇಶ್ ಬಣೋತ್, ಐಪಿಎಸ್ ರವರು ವೈಟ್ಫೀಲ್ಡ್ ವಿಭಾಗದ ಎಲ್ಲಾ ಎಸಿಪಿ ಹಾಗೂ ಪಿಐ ರವರೊಂದಿಗೆ ಸಭೆ ನಡೆಸಿದರು.
ಸಭೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು, ಅಪರಾಧ ತಡೆಗಟ್ಟುವಿಕೆ, ಪ್ರಕರಣಗಳ ಗುಣಮಟ್ಟದ ತನಿಖೆ, ಸಾರ್ವಜನಿಕರ ದೂರುಗಳ ತ್ವರಿತ ವಿಲೇವಾರಿ ಹಾಗೂ ಸಾರ್ವಜನಿಕ ಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಕುರಿತು ಸವಿಸ್ತಾರವಾಗಿ ಚರ್ಚಿಸಿ, ಅಗತ್ಯ ಮಾರ್ಗಸೂಚಿ ಹಾಗೂ ಸೂಚನೆಗಳನ್ನು ನೀಡಿದರು.
@BlrCityPolice
@CPBlr
@AddlCPEast
ಕಾಡುಗೋಡಿ ಪೊಲೀಸ್ ಠಾಣೆ KADUGODI POLICE STATION retweeted
A meeting of all ACP, PI, and PSI rank officers of the Whitefield Division was held today. Discussions were conducted on maintaining law and order, crime prevention, investigation of cases, and the prompt disposal of public grievances, and necessary instructions were issued.
ಇಂದು ವೈಟ್ಫೀಲ್ಡ್ ವಿಭಾಗದ ಎಲ್ಲಾ ಎಸಿಪಿ, ಪಿಐ ಹಾಗೂ ಪಿಎಸ್ಐ ದರ್ಜೆಯ ಅಧಿಕಾರಿಗಳ ಸಭೆ ನಡೆಸಿ, ಕಾನೂನು ಸುವ್ಯವಸ್ಥೆ, ಅಪರಾಧ ತಡೆ, ಪ್ರಕರಣಗಳ ತನಿಖೆ ಹಾಗೂ ಸಾರ್ವಜನಿಕರ ದೂರುಗಳ ತ್ವರಿತ ವಿಲೇವಾರಿ ಕುರಿತು ಚರ್ಚಿಸಿ ಅಗತ್ಯ ಸೂಚನೆಗಳನ್ನು ನೀಡಲಾಯಿತು
@BlrCityPolice
@CPBlr
@AddlCPEast
ಕಾಡುಗೋಡಿ ಪೊಲೀಸ್ ಠಾಣಾ
ಸರಹದ್ದಿನಲ್ಲಿರು ಪ್ರಗತಿ ಕಾಲೇಜ್ ನಲ್ಲಿ ದಿನಾಂಕ 29-05-2026 ರಂದು ಕಾಲೇಜ್ ವಿದ್ಯಾರ್ಥಿ ಗಳಿಗೆ Cyber crime, competative exams, ರಸ್ತೆ ನಿಯಮಗಳು ಇನ್ನಿತರ ವಿಷಯಗಳ ಬಗ್ಗೆ ಜಾಗೃತಿಯನ್ನು ಮೂಡಿಸಲಾಯಿತು.
ಬಕ್ರೀದ್ ಹಬ್ಬದ ಸಂಬಂಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಮುಸ್ಲಿಂ ಮುಖಂಡರೊಂದಿಗೆ ಶಾಂತಿಪಾಲನಾ ಸಭೆಗಳನ್ನು ನಡೆಸಿ, ಸೂಕ್ತ ಸಲಹೆ ಹಾಗೂ ಸೂಚನೆಗಳನ್ನು ನೀಡಿರುತ್ತದೆ
ಇಂದು ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಚನ್ನಸಂದ್ರ ಸರ್ಕಾರಿ ಶಾಲೆ ಆವರಣದಲ್ಲಿ ಜನ ಸಂಪರ್ಕ ಸಭೆಯನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು ಈ ಸಂದರ್ಭದಲ್ಲಿ ಸಾರ್ವಜನಿಕರೊಂದಿಗೆ ಮುಕ್ತ ಸಂವಾದ ನಡೆಸಿ ಅವರ ಅಹವಾಲುಗಳನ್ನು ಆಲಿಸಲಾಯಿತು, ಸಂಬಂಧಿತ ಸಮಸ್ಯೆಗಳ ಪರಿಹಾರ ಬಗ್ಗೆ ಚರ್ಚಿಸಲಾಯಿತು.
1
3
245





















































