Mandya Zilla Panchayat (@ZP_Mandya) header
Mandya Zilla Panchayat (@ZP_Mandya) profile picture
Joined November 2020
ಜಿಲ್ಲಾ ಮಾನವ ಅಭಿವೃದ್ಧಿ ವರದಿ ಹಾಗೂ ಸುಸ್ಥಿರ ಅಭಿವೃದ್ಧಿ ಯೋಜನೆಯ ದತ್ತಾಂಶ ವೈಜ್ಞಾನಿಕವಾಗಿ ಪರಿಶೀಲಿಸಿ ಅಂತಿಮಗೊಳಿಸಲು ಸಿಇಒ ಸೂಚನೆ. ಕೆಸ್ವಾನ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸಿಇಒ ರವರು ವರದಿಗಳ ದತ್ತಾಂಶ ಮತ್ತು ಸೂಚ್ಯಂಕಗಳನ್ನು ಪರಿಶೀಲಿಸಿ ಜಿಲ್ಲೆಯ ನೈಜ ಅಭಿವೃದ್ಧಿ ಸ್ಥಿತಿಯನ್ನು ಪ್ರತಿಬಿಂಬಿಸುವಂತೆ ಅಂತಿಮಗೊಳಿಸಲು ಸೂಚಿಸಿದರು.
16
ಭೂ ಗ್ಯಾರಂಟಿ ಅಭಿಯಾನ ಯಶಸ್ವಿಗೊಳಿಸಿ: ಸಿಇಒ. ಮಂಡ್ಯ ತಾ.ಪಂ. ಸಭಾಂಗಣದಲ್ಲಿ ನಡೆದ ತರಬೇತಿ ಕಾರ್ಯಾಗಾರದಲ್ಲಿ ಅರ್ಹರಿಗೆ ಕಾಲಮಿತಿಯೊಳಗೆ ಇ-ಸ್ವತ್ತು ವಿತರಣೆ, ಗ್ರಾಮಮಟ್ಟದಲ್ಲಿ ಜಾಗೃತಿ ಹಾಗೂ ತಾಂತ್ರಿಕ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ರೋವರ್ ತಂತ್ರಜ್ಞಾನದ ಭೂಮಾಪನ ಪ್ರಾತ್ಯಕ್ಷಿಕೆಗೂ ಚಾಲನೆ ನೀಡಿದರು.
13
ಗ್ರಾಮಠಾಣಾ ಹಾಗೂ ಹಕ್ಕುಪತ್ರ ಆಸ್ತಿಗಳ ಇ-ಸ್ವತ್ತು ವಿತರಣೆಗೆ ವೇಗ ನೀಡಿ: ಜಿ.ಪಂ ಸಿಇಒ ಡಿಸೆಂಬರ್ 15ರೊಳಗೆ ಪ್ರತಿ ತಾ.ನಲ್ಲಿ 5,000 ಆಸ್ತಿಗಳಿಗೆ ಇ-ಸ್ವತ್ತು ವಿತರಿಸುವ ಗುರಿ ಸಾಧಿಸಬೇಕು. ವಾರಕ್ಕೆ 1,250 ಅರ್ಜಿಗಳ ಪರಿಶೀಲನೆ, ಬಾಕಿ ಅರ್ಜಿಗಳ ವಿಲೇವಾರಿ, ದಾಖಲೆ ಅಪ್‌ಲೋಡ್, ಡ್ಯಾಶ್‌ಬೋರ್ಡ್ ಮೂಲಕ ಮೇಲ್ವಿಚಾರಣೆಗೆ ಸೂಚನೆ ನೀಡಿದರು.
9
ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು! ಬೆಳಕಿನ ಹಬ್ಬವು ನಾಡಿನ ಜನರ ಬದುಕಿನಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ. ಮಣ್ಣಿನ ಹಣತೆಗಳಿಗೆ ಆದ್ಯತೆ ನೀಡಿ, ಮಾಲಿನ್ಯ ನಿಯಂತ್ರಿಸಿ, ಪರಿಸರ ಸ್ನೇಹಿ ದೀಪಾವಳಿ ಆಚರಿಸೋಣ. ಹಸಿರು ಪರಿಸರ ಸಂರಕ್ಷಣೆಗೆ ಸಂಕಲ್ಪ ಮಾಡೋಣ. #Deepavali2026 #EcoFriendlyDiwali #GreenDiwali #ZPMANDYA
19
ಕೌಶಲ್ಯ ಕರ್ನಾಟಕ ಪ್ರಶಸ್ತಿ: ಮಂಡ್ಯ ಜಿಲ್ಲೆಗೆ ಎರಡು ಪ್ರಶಸ್ತಿಗಳು ಅರಸಮ್ಮ ಮಹಿಳಾ ಸ್ವಸಹಾಯ ಸಂಘದ ‘ಮತ್ಸ್ಯ ವಾಹಿನಿ’ ಹಾಗೂ ಮಂಡ್ಯ RSETI ಸಂಸ್ಥೆಗೆ 2026ನೇ ಸಾಲಿನ ಕೌಶಲ್ಯ ಕರ್ನಾಟಕ ಪ್ರಶಸ್ತಿ ಲಭಿಸಿದೆ. ಸಿಇಒ ಕೆ.ಆರ್. ನಂದಿನಿ ಅವರ ನೇತೃತ್ವದಲ್ಲಿ ಪ್ರಶಸ್ತಿಗಳನ್ನು ಸ್ವೀಕರಿಸಲಾಯಿತು. #ZPMANDYA #SkillDevelopment #RSETI
1
24
ಜಿಲ್ಲಾ ವಲಯ ಕಾರ್ಯಕ್ರಮಗಳ ಆರ್ಥಿಕ ಪ್ರಗತಿ ಪರಿಶೀಲಿಸಿದ ಜಿ. ಪಂ.ಸಿಇಒ 2026-27ನೇ ಸಾಲಿನ ಜಿಲ್ಲಾ ವಲಯ ಕಾರ್ಯಕ್ರಮಗಳ ಲಿಂಕ್ ಡಾಕ್ಯುಮೆಂಟ್ ಅನುದಾನದಡಿ ಅಕ್ಟೋಬರ್ ಅಂತ್ಯದ ಆರ್ಥಿಕ ಪ್ರಗತಿ ಹಾಗೂ ಕಾಮಗಾರಿಗಳ ಅನುಷ್ಠಾನದಲ್ಲಿನ ಸಮಸ್ಯೆಗಳ ಕುರಿತು ಮಂಡ್ಯ ಜಿ.ಪಂ.ಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. #DevelopmentWorks
18
ನಗುವನಹಳ್ಳಿ ಗ್ರಾ.ಪಂ.ಗೆ ಸಿಇಒ ನಂದಿನಿ ಕೆ.ಆರ್. ಅನಿರೀಕ್ಷಿತ ಭೇಟಿ ವಿವಿಧ ಯೋಜನೆಗಳ ಪ್ರಗತಿ ಪರಿಶೀಲಿಸಿದ ಸಿಇಒ, ಇ-ಸ್ವತ್ತು ಅರ್ಜಿಗಳ ತ್ವರಿತ ವಿಲೇವಾರಿ, ಬಾಕಿ ಆಸ್ತಿ ತೆರಿಗೆ ವಸೂಲಾತಿ ಹಾಗೂ ವಿಬಿ-ಜಿ ರಾಮ್‌ ಜಿ ಯೋಜನೆಯಡಿ ಹೆಚ್ಚಿನ ಮಾನವ ದಿನಗಳ ಸೃಜನೆಗೆ ಸೂಚನೆ ನೀಡಿದರು. ಅಭಿಲೇಖಾಲಯ ನಿರ್ವಹಣೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
30
ಬಹುಗ್ರಾಮ ಕುಡಿಯುವ ನೀರು ಯೋಜನೆಗಳ ಪ್ರಗತಿ ಪರಿಶೀಲಿಸಿದ ಸಿಇಒ ನಂದಿನಿ ಕೆ.ಆರ್. ಶ್ರೀರಂಗಪಟ್ಟಣ, ಮಂಡ್ಯ, ಮದ್ದೂರು ತಾಲ್ಲೂಕುಗಳ ಬಹುಗ್ರಾಮ ಕುಡಿಯುವ ನೀರು ಯೋಜನೆಗಳ ಕಾಮಗಾರಿಗಳನ್ನು ಪರಿಶೀಲಿಸಿದ ಜಿ.ಪಂ.ಸಿಇಒ ರವರು ವಿಳಂಬ ಕಾಮಗಾರಿಗಳನ್ನು ಚುರುಕುಗೊಳಿಸಿ ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು. #JJM
17
ಮಂಡ್ಯ ಜಿ.ಪಂ.ಸಿಇಒ ರವರು ಬಹುಗ್ರಾಮ ಕುಡಿಯುವ ನೀರು ಯೋಜನೆಗಳ ಕಾಮಗಾರಿ ವಿಳಂಬ, ಅರಣ್ಯ ಭೂಮಿ ಮಂಜೂರಾತಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅನುಮೋದನೆ ಹಾಗೂ ಭೂಮಿ ಹಸ್ತಾಂತರದ ಬಾಕಿ ಪ್ರಕರಣಗಳ ಕುರಿತು ಅರಣ್ಯ, ಕಂದಾಯ ಇಲಾಖೆ ಅಧಿಕಾರಿಗಳು, ಎಂಜಿನಿಯರ್‌ಗಳು ಹಾಗೂ ಗುತ್ತಿಗೆದಾರರೊಂದಿಗೆ ಸಭೆ ನಡೆಸಿ, ಕಾಮಗಾರಿ ತ್ವರಿತಗೊಳಿಸಲು ಸೂಚಿಸಿದರು.
22
ನೀರು ನಿರ್ವಹಣೆಯಲ್ಲಿ ನೀರುಗಂಟಿಗಳ ಪಾತ್ರ ಮಹತ್ವದ್ದು: ಸಿಇಒ ನಂದಿನಿ ಕೆ.ಆರ್. ಕೆ.ಆರ್.ಪೇಟೆ ತಾಲ್ಲೂಕಿನ 34 ಗ್ರಾಮ ಪಂಚಾಯಿತಿಗಳ ಆಯ್ದ ನೀರುಗಂಟಿಗಳಿಗೆ ಜಲ ಜೀವನ್ ಮಿಷನ್ ಅಡಿಯಲ್ಲಿ ನೀರು ನಿರ್ವಹಣೆ ಹಾಗೂ ಪೈಪ್‌ಲೈನ್ ದುರಸ್ತಿ ಕುರಿತು ತರಬೇತಿ ಕಾರ್ಯಾಗಾರವನ್ನು ಸಿಇಒ ನಂದಿನಿ ಕೆ.ಆರ್. ಉದ್ಘಾಟಿಸಿದರು. #ZPMANDYA #JJM
27
ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು! ನಾಡಿನ ಶ್ರೀಮಂತ ಇತಿಹಾಸ, ಭಾಷಾ ವೈಭವ, ಸಾಹಿತ್ಯ ಪರಂಪರೆ ಹಾಗೂ ಸಾಂಸ್ಕೃತಿಕ ಹಿರಿಮೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆಗಾರಿಕೆ. ಕನ್ನಡ ಭಾಷೆಯ ಬಳಕೆ ಮತ್ತು ಬೆಳವಣಿಗೆಗೆ ಸಂಕಲ್ಪ ತೊಟ್ಟು, ಕನ್ನಡ ನಾಡಿನ ಏಕತೆ ಹಾಗೂ ಸಮೃದ್ಧಿಗೆ ಕೈಜೋಡಿಸೋಣ. #KannadaRajyotsava2026 #ZPMANDYA
19
ದಿನಾಂಕ-28 ರಂದು ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರಾದ ಈಶ್ವರ್ ಬಿ. ಖಂಡ್ರೆ ರವರು ಮಂಡ್ಯ ವಿಶ್ವ ವಿದ್ಯಾಲಯಕ್ಕೆ ಬೇಟಿ ನೀಡಿ, ಮೈಸೂರು ದಸರಾ ಜಂಬೂಸವಾರಿಯಲ್ಲಿ ಜನಮೆಚ್ಚುಗೆ ಪಡೆದ ಮಂಡ್ಯ ಜಿಲ್ಲಾ ಪಂಚಾಯತ್ ನ ಸ್ತಬ್ಧಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. #RDPRMinister #EshwarBKhandre
1
24
ಮೈಸೂರು ದಸರಾ ಜಂಬೂಸವಾರಿಯಲ್ಲಿ ಜನಮೆಚ್ಚುಗೆ ಪಡೆದ ಮಂಡ್ಯ ಜಿಲ್ಲಾ ಪಂಚಾಯಿತಿಯ “ಅಸ್ಮಿತೆ – ಶ್ರೀಶಕ್ತಿಯ ಅನಾವರಣ” ಸ್ತಬ್ಧಚಿತ್ರವನ್ನು ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳ ವೀಕ್ಷಣೆಗೆ ಅನಾವರಣಗೊಳಿಸಲಾಯಿತು. ವಿದ್ಯಾರ್ಥಿಗಳು ಸ್ತಬ್ಧಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. #Asmithe
33
ಮೈಸೂರು ದಸರಾ ಜಂಬೂಸವಾರಿಯಲ್ಲಿ ಭಾಗವಹಿಸಿದ ಮಂಡ್ಯ ಜಿಲ್ಲೆಯ “ಅಸ್ಮಿತೆ – ಶ್ರೀಶಕ್ತಿಯ ಅನಾವರಣ” ಸ್ತಬ್ಧಚಿತ್ರಕ್ಕೆ ಮೈಸೂರು ವಿಭಾಗ ಮಟ್ಟದಲ್ಲಿ ಪ್ರಥಮ ಸ್ಥಾನ ಲಭಿಸಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿ. ಈ ಸಾಧನೆಗೆ ಸಹಕರಿಸಿದ ಜನಪ್ರತಿನಿಧಿಗಳು, ಜಿಲ್ಲಾಡಳಿತ, ಅಧಿಕಾರಿಗಳು, ಸಿಬ್ಬಂದಿ ಹಾಗೂ ಜಿಲ್ಲೆಯ ಜನತೆಗೆ ಹೃತ್ಪೂರ್ವಕ ಧನ್ಯವಾದಗಳು.
1
21
ಮಹಿಳಾ ಸಬಲೀಕರಣ, ಲಿಂಗ ಸಮಾನತೆ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಸಿಇಒ ರವರು ಕೆಸ್ವಾನ್ ಸಭಾಂಗಣದಲ್ಲಿ ಸಭೆ ನಡೆಸಿ. ಅ.30ರಂದು ಪ್ರಬಂಧ, ಚಿತ್ರಕಲೆ, ರಸಪ್ರಶ್ನೆ ಸ್ಪರ್ಧೆಗಳ ಆಯೋಜನೆ, "ಅಸ್ಮಿತೆ ಸ್ತ್ರೀ ಶಕ್ತಿಯ ಅನಾವರಣ" ಸ್ತಬ್ಧಚಿತ್ರವನ್ನು ವಿದ್ಯಾರ್ಥಿಗಳು ವೀಕ್ಷಿಸಲು ಅಗತ್ಯ ವ್ಯವಸ್ಥೆ ಕೈಗೊಳ್ಳುವಂತೆ ಸೂಚಿಸಲಾಯಿತು.
23
ಕುಡಿಯುವ ನೀರಿನ ಸಮಸ್ಯೆ ಪರಿಹಾರ, ಕಾಮಗಾರಿಗಳ ಗುಣಮಟ್ಟಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಜಿ.ಪಂ. ಸಿಇಒ ರವರು ಕೆ.ಆರ್.ಪೇಟೆ ತಾ|| ಊಚನಹಳ್ಳಿ, ಕಾಗೇಪುರ, ಅಟ್ಟುಪ್ಪೆ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಜೊತೆಗೆ, ವಿಬಿ-ಜಿ ರಾಮ್‌ ಜಿ ಯೋಜನೆಯಡಿ ಕೈಗೊಳ್ಳಲಿರುವ ಕಾಮಗಾರಿಗಳ ಕ್ರಿಯಾಯೋಜನೆ ಮತ್ತು ಪ್ರಗತಿಯ ಕುರಿತು ಮಾಹಿತಿ ಪಡೆದರು.
15
ಪಾಂಡವಪುರ ತಾ.ಪಂ. ಸಭಾಂಗಣದಲ್ಲಿ ವಿವಿಧ ಯೋಜನೆಗಳ ಪ್ರಗತಿ ಪರಿಶೀಲಿಸಿದ ಸಿಇಒ ನಂದಿನಿ ಕೆ.ಆರ್., ವಿಬಿ-ಜಿ ರಾಮ್‌ ಜಿ ಅಡಿ ಅರ್ಜಿ ಸಲ್ಲಿಸಿದ ಕಾರ್ಮಿಕರಿಗೆ ಉದ್ಯೋಗ ಒದಗಿಸಲು, ಕುಡಿಯುವ ನೀರಿನ ಸಮಸ್ಯೆ ತಡೆಯಲು ಹಾಗೂ SHGsಗಳ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸಲು ಸೂಚಿಸಿದರು. ಅಕ್ಕ ಕೆಫೆಯ ವಹಿವಾಟನ್ನೂ ಪರಿಶೀಲಿಸಿದರು. #ReviewMeeting
16
ಪೊಲೀಸ್ ಸಂಸ್ಮರಣಾ ದಿನ – ಅಕ್ಟೋಬರ್ 21 ದೇಶದ ಭದ್ರತೆ, ಸಾರ್ವಜನಿಕರ ಸುರಕ್ಷತೆಗಾಗಿ ಕರ್ತವ್ಯ ನಿರ್ವಹಿಸುತ್ತಾ ಪ್ರಾಣಾರ್ಪಣೆ ಮಾಡಿದ ವೀರ ಪೊಲೀಸ್‌ ಸಿಬ್ಬಂದಿಯ ಧೈರ್ಯ, ತ್ಯಾಗ, ಸೇವೆಯನ್ನು ಗೌರವಪೂರ್ವಕವಾಗಿ ಸ್ಮರಿಸೋಣ. ಅವರ ಬಲಿದಾನ ಸದಾ ನಮ್ಮೆಲ್ಲರಿಗೂ ಸ್ಫೂರ್ತಿ. ವೀರ ಪೊಲೀಸ್‌ ಸಿಬ್ಬಂದಿಗೆ ನಮನಗಳು. #PoliceCommemorationDay
27
ನಾಡಿನ ಸಮಸ್ತ ಜನತೆಗೆ ವಿಜಯದಶಮಿಯ ಹಾರ್ದಿಕ ಶುಭಾಶಯಗಳು. ಮೈಸೂರು ದಸರಾ ನಮ್ಮ ನಾಡಿನ ಸಾಂಸ್ಕೃತಿಕ ವೈಭವ ಮತ್ತು ಪರಂಪರೆಯ ಪ್ರತೀಕ. ವಿಜಯದಶಮಿಯು ಎಲ್ಲರ ಬದುಕಿನಲ್ಲಿ ಸುಖ, ಶಾಂತಿ, ಸಮೃದ್ಧಿ ಹಾಗೂ ಸೌಹಾರ್ದತೆಯನ್ನು ತರಲಿ. ನಾಡಿನ ಪ್ರಗತಿ ಮತ್ತು ಏಳಿಗೆಗಾಗಿ ನಾವೆಲ್ಲರೂ ಕೈಜೋಡಿಸೋಣ. #Vijayadashami2026 #MysuruDasara26 #ZPMANDYA
17
ಮೈಸೂರು ದಸರಾ–2026ರ ಅಂಗವಾಗಿ ಮಂಡ್ಯ ಜಿ.ಪಂ.ಯಿಂದ ಸಿದ್ಧಪಡಿಸಲಾದ ಸ್ತಬ್ಧಚಿತ್ರವು ಗ್ರಾಮೀಣಾಭಿವೃದ್ಧಿ, ಮಹಿಳಾ ಸಬಲೀಕರಣ, ಸ್ವಸಹಾಯ ಗುಂಪುಗಳ ಸ್ವಾವಲಂಬನೆ ಹಾಗೂ ಸ್ಥಳೀಯ ಉತ್ಪನ್ನಗಳ ಉತ್ತೇಜನದ ಆಶಯಗಳನ್ನು ಪ್ರತಿಬಿಂಬಿಸಲಿದ್ದು, ದಸರಾ ಮಹೋತ್ಸವದಲ್ಲಿ ಮಂಡ್ಯ ಜಿಲ್ಲೆಯ ಅಭಿವೃದ್ಧಿಯ ಪರಿಕಲ್ಪನೆಯನ್ನು ಪರಿಚಯಿಸಲಿದೆ. #MysuruDasara2026
23