VSK Karnataka (@VSKKarnataka) header
VSK Karnataka (@VSKKarnataka) profile picture

ವಿಶ್ವ ಸಂವಾದ ಕೇಂದ್ರ, ಕರ್ನಾಟಕದ ಅಧಿಕೃತ ಟ್ವಿಟರ್ ಖಾತೆ OFFICIAL Twitter handle of Vishwa Samvada Kendra, Karnataka

ಬೆಂಗಳೂರು,ಭಾರತ Bengaluru, India
Joined April 2010
ಕಿಶೋರಿ ಸಂಗಮ – ಬೆಂಗಳೂರು
3
4
184
ಛತ್ರಪತಿ ಸಂಭಾಜಿನಗರ, ನ. 25: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರು ಲೇಖಕಿ ತಸ್ನೀಮ್ ಪಟೇಲ್ ಅವರ ಜೀವನಾಧಾರಿತ ಕೃತಿ ‘ಟಾರ್ಚರ್ಡ್ ಟ್ರುತ್’ (Tortured Truth) ಪುಸ್ತಕವನ್ನು ಬಿಡುಗಡೆ ಮಾಡಿದರು. ನಗರದ ಎಂಜಿಎಂ ಮಹಾವಿದ್ಯಾಲಯದ ರುಕ್ಮಿಣಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಡಾ. ಮೋಹನ್ ಭಾಗವತ್ ಅವರು, ಜೀವನದಲ್ಲಿ ಎಂತಹ ದೊಡ್ಡ ಸಂಘರ್ಷಗಳು ಎದುರಾದರೂ ಮಾನವೀಯತೆಯನ್ನು ಕಳೆದುಕೊಳ್ಳಬಾರದು. ಕಷ್ಟದ ಸಂದರ್ಭಗಳಲ್ಲಿಯೂ ಮನುಷ್ಯತ್ವವನ್ನು ಉಳಿಸಿಕೊಳ್ಳುವುದು ಅತ್ಯಂತ ಮುಖ್ಯ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಲೇಖಕಿ ತಸ್ನೀಮ್ ಪಟೇಲ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
2
3
174
ಕೊಡಗು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೊಡಗು ಜಿಲ್ಲಾ ಸಂಘಚಾಲಕರಾಗಿದ್ದ ಸ್ವ॥ ಚಕ್ಕೇರ ಮನು ಕಾವೇರಪ್ಪ ಅವರಿಗೆ ಮಡಿಕೇರಿಯಲ್ಲಿ ನುಡಿನಮನ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಕರ್ನಾಟಕ ದಕ್ಷಿಣ ಪ್ರಾಂತ ಸಹಕಾರ್ಯವಾಹ ಪಿ.ಎಸ್ ಪ್ರಕಾಶ್, ಪ್ರಾಂತ ಪ್ರಚಾರಕ ಗುರುಪ್ರಸಾದ್ ಸೇರಿದಂತೆ ಸಂಘದ ಹಿರಿಯ ಕಾರ್ಯಕರ್ತರು ಹಾಗೂ ವಿವಿಧ ಕ್ಷೇತ್ರದ ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.
3
9
376
ಕಾರ್ಕಳ: ಕಾರ್ಕಳದ ನೂತನ ಸಂಘಕಾರ್ಯಾಲಯ ‘ಮಧು ಮಾಧವ’ - ಇದರ ಪ್ರವೇಶೋತ್ಸವ ಕಾರ್ಯಕ್ರಮವು ನವೆಂಬರ್ 25, 2026ರಂದು ನೆರವೇರಿತು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹ ಸಿ.ಆರ್. ಮುಕುಂದ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕ್ಷೇತ್ರೀಯ ಸಂಘಚಾಲಕ ಡಾ. ಪಿ. ವಾಮನ ಶೆಣೈ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
4
10
344
ರಾಷ್ಟ್ರೋತ್ಥಾನ ಪರಿಷತ್ ವತಿಯಿಂದ ವಿಶೇಷ ಶೈಕ್ಷಣಿಕ ಅವಕಾಶ. ಆಸಕ್ತ ವಿದ್ಯಾರ್ಥಿಗಳು tapassaadhana.rashtrrotthana… ವೆಬ್‌ಸೈಟ್ ಮೂಲಕ ಹೆಚ್ಚಿನ ಮಾಹಿತಿ ಪಡೆದು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ 94812 01144, 98446 02529 ಹಾಗೂ 79759 13828 ಸಂಪರ್ಕಿಸಬಹುದು.
1
5
255
Wishing every Indian a Happy Constitution Day. #SamvidhanDiwas #ConstitutionDay
7
10
699
ಛತ್ರಪತಿ ಸಂಭಾಜಿನಗರ, ನವೆಂಬರ್ 25: ವಿಕಸಿತ ಭಾರತವನ್ನು ನಿರ್ಮಿಸಲು ಪ್ರತಿಯೊಬ್ಬ ನಾಗರಿಕನ ಸಾಮೂಹಿಕ ಪ್ರಯತ್ನ ಮತ್ತು ರಾಷ್ಟ್ರಹಿತದ ಬದ್ಧತೆ ಅತ್ಯಗತ್ಯ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಹೇಳಿದರು. ಛತ್ರಪತಿ ಸಂಭಾಜಿನಗರದಲ್ಲಿ ಆಯೋಜಿಸಲಾಗಿದ್ದ ಐದನೇ ‘ಪದ್ಮ ಫೆಸ್ಟಿವಲ್’ನಲ್ಲಿ ಮಾತನಾಡಿದ ಅವರು, ದೇಶದಲ್ಲಿ ರಾಷ್ಟ್ರಹಿತಕ್ಕಾಗಿ ಯಾವುದೇ ಸ್ವಾರ್ಥವಿಲ್ಲದೆ ಕಾರ್ಯನಿರ್ವಹಿಸುತ್ತಿರುವ ಅಸಂಖ್ಯಾತ ಜನರಿದ್ದಾರೆ. ಇಂತಹವರ ನಿರಂತರ ಕೊಡುಗೆಯಿಂದಾಗಿ ಭಾರತ ವೇಗವಾಗಿ ಪ್ರಗತಿಯತ್ತ ಸಾಗುತ್ತಿದೆ ಎಂದರು. 2047ರ ವೇಳೆಗೆ ಬಲಿಷ್ಠ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವುದು ನಮ್ಮ ಗುರಿಯಾಗಬೇಕು. ಅಂತಹ ಭಾರತವು ಜಗತ್ತಿಗೆ ಮಾರ್ಗದರ್ಶನ ನೀಡುವ ಸಾಮರ್ಥ್ಯ ಹೊಂದಿರಲಿದೆ. ಭಾರತದ ಶಕ್ತಿ ದುರ್ಬಲರನ್ನು ತನ್ನ ಅಧೀನದಲ್ಲಿಟ್ಟುಕೊಳ್ಳುವುದಕ್ಕಲ್ಲ; ಬದಲಾಗಿ ದುರ್ಬಲರನ್ನು ರಕ್ಷಿಸಿ, ಅವರ ಬೆಂಬಲಕ್ಕೆ ನಿಲ್ಲುವುದಕ್ಕಾಗಿರಬೇಕು ಎಂದು ಅಭಿಪ್ರಾಯಪಟ್ಟರು. ನಿವೃತ್ತ ಜನರಲ್ ಅನಿಲ್ ಚೌಹಾಣ್ ಅವರು ಮಾತನಾಡಿ, ‘ಭಾರತ’ ಎಂಬುದು ಕೇವಲ ಒಂದು ಹೆಸರಲ್ಲ; ಅದು ನಮ್ಮ ಗುರುತು ಮತ್ತು ರಾಷ್ಟ್ರೀಯ ಅಸ್ಮಿತೆಯ ಪ್ರತೀಕ ಎಂದು ಹೇಳಿದರು.
5
14
399
ರೇವಾ ಮಧ್ಯ ಪ್ರದೇಶ : ಸಂತ ಶಿರೋಮಣಿ ಗುರು ರವಿದಾಸ್ ಅವರ 650ನೇ ಜಯಂತಿ ಹಾಗೂ ರಾಷ್ಟ್ರಗೀತೆ ‘ವಂದೇ ಮಾತರಂ’ 150 ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ವಿಶ್ವ ಸಂವಾದ ಕೇಂದ್ರ, ಮಹಾಕೌಶಲ ಪ್ರಾಂತ ವತಿಯಿಂದ ಪ್ರಕಟಿಸಲಾದ ಎರಡು ವಿಶೇಷಾಂಕಗಳನ್ನು ಬಿಡುಗಡೆ ಮಾಡಲಾಯಿತು. ರೇವಾದ ಮಖನ್‌ಲಾಲ್ ಚತುರ್ವೇದಿ ರಾಷ್ಟ್ರೀಯ ಪತ್ರಿಕೋದ್ಯಮ ಮತ್ತು ಸಂವಹನ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಶ್ರೀ ಸುನಿಲ್ ಅಂಬೇಕರ ಹಾಗೂ ಮಧ್ಯಪ್ರದೇಶ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶ್ರೀ ದಿನೇಶ್ ಕುಮಾರ್ ಪಾಲಿವಾಲ್ ಅವರು ವಿಶೇಷಾಂಕಗಳನ್ನು ಬಿಡುಗಡೆಗೊಳಿಸಿದರು. ‘ಶಾಶ್ವತ ಹಿಂದೂ ಗರ್ಜನಾ’ ಪತ್ರಿಕೆಯ ‘ಸಮರಸತೆಯ ಹರಿಕಾರ: ಸಂತ ರವಿದಾಸ್’ ಮತ್ತು ‘ಮಹಾಕೌಶಲ ಸಂದೇಶ’ ಪತ್ರಿಕೆಯ ‘ಭಾರತದ ಆತ್ಮದ ಘೋಷಣೆ: ವಂದೇ ಮಾತರಂ’ ಎಂಬ ಎರಡು ವಿಶೇಷಾಂಕಗಳು ಬಿಡುಗಡೆಯಾದವು. ಈ ಸಂದರ್ಭದಲ್ಲಿ ಮಾತನಾಡಿದ ಸುನಿಲ್ ಅಂಬೇಕರ ಅವರು, ಸಂತ ರವಿದಾಸ್ ಅವರ ಸಂಪೂರ್ಣ ಜೀವನವೇ ಪ್ರೇರಣಾದಾಯಕವಾಗಿದ್ದು, ಇಂದಿನ ಪರಿಸ್ಥಿತಿಗಳಲ್ಲಿಯೂ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತದೆ ಎಂದರು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ವಂದೇ ಮಾತರಂ ಗೀತೆಯ ಪ್ರೇರಣೆಯಿಂದ ಅನೇಕರು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಿದರು ಎಂದು ಸ್ಮರಿಸಿದರು. ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್‌ನ ಪ್ರಾಂತ ಪ್ರಚಾರಕ್ ಶ್ರೀ ಬ್ರಜಕಾಂತ್, ಸಹ ಪ್ರಾಂತ ಪ್ರಚಾರಕ್ ಶ್ರೀ ಶ್ರವಣ್, ವಿಶ್ವ ಸಂವಾದ ಕೇಂದ್ರದ ಕಾರ್ಯದರ್ಶಿ ಶ್ರೀ ಶ್ರೀನಿವಾಸ ರಾವ್, ಸಹ ಪ್ರಾಂತ ಪ್ರಚಾರ ಪ್ರಮುಖ್ ಶ್ರೀ ಶಿವನಾರಾಯಣ ಪಟೇಲ್, ಎರಡೂ ವಿಶೇಷಾಂಕಗಳ ಸಂಪಾದಕ ಮಂಡಳಿಯ ಸದಸ್ಯರು ಹಾಗೂ ನಗರದ ಹಲವು ಗಣ್ಯರು ಉಪಸ್ಥಿತರಿದ್ದರು.
2
7
354
ಹನುಮಗಿರಿ ಬೆಟ್ಟದಲ್ಲಿ ಭಕ್ತಿಭಾವದಿಂದ ಮೂರನೇ ವರ್ಷದ ಕಾರ್ತಿಕ ಮಹಾದೀಪೋತ್ಸವ vskkarnataka.org/karthika-de…
4
13
510
ಜಗತ್ತಿಗೆ ಧರ್ಮದ ಅಮೃತವನ್ನು ನೀಡಬೇಕಾದ ಹೊಣೆ ಭಾರತದ್ದು: ಡಾ. ಮೋಹನ್ ಭಾಗವತ್ ಉತ್ತರ ಪ್ರದೇಶದ ಮುಜಫ್ಫರ್‌ನಗರ, ನವೆಂಬರ್ 23: ಭಾರತವು ಜಗತ್ತಿಗೆ ಧರ್ಮದ ಅಮೃತವನ್ನು ನೀಡಬೇಕಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಹೇಳಿದರು. ಉತ್ತರ ಪ್ರದೇಶದ ಮುಜಫ್ಫರ್‌ನಗರ ಜಿಲ್ಲೆಯ ಪವಿತ್ರ ಶುಕತೀರ್ಥದಲ್ಲಿ ನಡೆದ 'ಶುಕತೀರ್ಥ ಪ್ರವಾಸ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಾರತದ ಆಧ್ಯಾತ್ಮಿಕ ಪರಂಪರೆ, ಧಾರ್ಮಿಕ ಮೌಲ್ಯಗಳು ಮತ್ತು ಸಾಂಸ್ಕೃತಿಕ ಚಿಂತನೆಗಳು ವಿಶ್ವಕ್ಕೆ ಮಾರ್ಗದರ್ಶನ ನೀಡುವ ಸಾಮರ್ಥ್ಯ ಹೊಂದಿವೆ ಎಂಬ ಆಶಯವನ್ನು ವ್ಯಕ್ತಪಡಿಸಿದರು.
5
13
392
ಪರೋಪಕಾರ, ಮಾನವೀಯ ಸಂವೇದನೆ ಮತ್ತು ಸಮಾಜದ ಬಗೆಗಿನ ಕರುಣೆ ನಮ್ಮ ಋಷಿಮುನಿಗಳು ನೀಡಿದ ಜ್ಞಾನ: ಡಾ. ಮೋಹನ್ ಭಾಗವತ್ vskkarnataka.org/dr-mohan-bh…
4
9
292
ಪುದುಚೇರಿಯ ಶ್ರೀ ಅರವಿಂದ ಆಶ್ರಮವು ಇಂದು ತನ್ನ ಶತಮಾನೋತ್ಸವ ವರ್ಷವನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತಿದೆ. ಈ ಸಂದರ್ಭದಲ್ಲಿ ನಾನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರವಾಗಿ, ಶ್ರೀ ಅರವಿಂದ ಆಶ್ರಮದೊಂದಿಗೆ ಸಂಬಂಧ ಹೊಂದಿರುವ ಎಲ್ಲರನ್ನೂ ಅಭಿನಂದಿಸುತ್ತೇನೆ. ಆಶ್ರಮವು, ವಿಶೇಷವಾಗಿ ಶ್ರೀ ಮಾತೆಯವರ ದಿವ್ಯ ನೇತೃತ್ವದಲ್ಲಿ, ಪೂರ್ಣಯೋಗದ ಸಂದೇಶವನ್ನು ಜಗತ್ತಿನಾದ್ಯಂತ ಹರಡುವಲ್ಲಿ ಮತ್ತು ಆಧ್ಯಾತ್ಮಿಕ ಪ್ರಜ್ಞೆಯನ್ನು ಜಾಗೃತಗೊಳಿಸುವುದರತ್ತ ಗಮನ ಕೇಂದ್ರೀಕರಿಸುವಲ್ಲಿ ಅಪಾರ ಕೊಡುಗೆ ನೀಡಿದೆ. ಭಾರತದ ಆಧುನಿಕ ಆಧ್ಯಾತ್ಮಿಕ ಆಂದೋಲನದ ಸಾಂಸ್ಥಿಕ ಕೇಂದ್ರವಾಗಿರುವ ಆಶ್ರಮವು, ಶಿಕ್ಷಣ, ಸಾಹಿತ್ಯ ಪ್ರಕಟಣೆ ಮುಂತಾದ ವಿವಿಧ ಚಟುವಟಿಕೆಗಳ ಮೂಲಕ ಅಖಂಡ ಭಾರತದ ಸಾಂಸ್ಕೃತಿಕ ಪುನರುಜ್ಜೀವನಕ್ಕೆ ಮಹತ್ತರ ಪ್ರೋತ್ಸಾಹ ನೀಡಿದೆ. ಈ ಶುಭ ಸಂದರ್ಭದಲ್ಲಿ ಶ್ರೀ ಅರವಿಂದರು ಮತ್ತು ಶ್ರೀ ಮಾತೆಯವರಿಗೆ ನಮ್ಮ ಗೌರವಪೂರ್ವಕ ಶ್ರದ್ಧಾಂಜಲಿಯನ್ನು ಅರ್ಪಿಸುತ್ತಾ, ಆಶ್ರಮವು ಭಾರತದ ನಾಗರಿಕತೆಯ ಪರಂಪರೆಯಲ್ಲಿ ಬೇರೂರಿರುವ ಆಧ್ಯಾತ್ಮಿಕ ಆಂದೋಲನಕ್ಕೆ ದಾರಿದೀಪವಾಗಿ ಮುಂದುವರಿಯಲಿ ಮತ್ತು ತನ್ನ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಪ್ರಯತ್ನಗಳಲ್ಲಿ ಎಲ್ಲ ಯಶಸ್ಸನ್ನೂ ಸಾಧಿಸಲಿ ಎಂದು ಹಾರೈಸುತ್ತೇವೆ. ದತ್ತಾತ್ರೇಯ ಹೊಸಬಾಳೆ ಸರಕಾರ್ಯವಾಹ, ಆರ್‌ಎಸ್‌ಎಸ್ 24.11.2026
2
12
475
Sri Aurobindo Ashram of Puducherry successfully completes its Centenary year today. On this occasion, I, on behalf of Rashtriya Swayamsevak Sangh, congratulate everyone associated with Sri Aurobindo Ashram. The Ashram, particularly under the divine leadership of Sri Ma, immensely contributed in spreading the message of integral yoga and focusing on awakening spiritual consciousness world over. Being an institutional centre for modern spiritual movement of India – Ashram has greatly encouraged the cultural rejuvenation of Akhand Bharat through various activities such as education, publishing literature, etc. While offering our respectful homage to Sri Aurobindo and Sri Ma on this auspicious occasion, we wish the Ashram continues to be the beacon light of a spiritual movement rooted in Bharat’s civilisational Heritage and achieves every success in its cultural and spiritual pursuits. Dattatreya Hosabale Sarkaryavah, RSS
4
13
428
Noted Actor, PadmaBhushan Mohanlal inaugurated Matangi Multimedia Recording Studio by KESARI Malayalam Weekly at Kozhikode, Keralam. Prajna Pravah National Coordinator J Nandakumar, Kesari Weekly Editor Dr NR Madhu, others were present.
3
9
426
World Hindu Congress 2026 to Chart Pathways for the Future of Hindu Society; World’s Biggest Gathering of Hindu Thought Leaders in Mumbai on 18–20 December, 2026 Swami Vigyananand Ji in Bengaluru vskkarnataka.org/world-hindu…
4
7
291
ಚಳ್ಳಕೆರೆ ತಾಲೂಕು: ಆರೆಸ್ಸೆಸ್ ಸ್ವಯಂಸೇವಕರಿಂದ ಪಥಸಂಚಲನ. #RSS
1
11
51
835
‘ಸಾಮಾಜಿಕ ಸಾಮರಸ್ಯಕ್ಕೆ ಸಂತ ರವಿದಾಸರ ಕೊಡುಗೆ’ ವಿಷಯದ ಕುರಿತು ಹಿರಿಯ ಪ್ರಚಾರಕ ಶ್ರೀ ಜಿ. ಆರ್. ಜಗದೀಶ್ ಅವರಿಂದ ರಾಷ್ಟ್ರೋತ್ಥಾನ ಸಾಹಿತ್ಯದ “ಕನ್ನಡ ಪುಸ್ತಕ ಹಬ್ಬ”ದಲ್ಲಿ ವಿಶೇಷ ಉಪನ್ಯಾಸ.
2
9
449
ಹಿಂದೂ ಸಮಾಜದ ಭವಿಷ್ಯಕ್ಕೆ ಹೊಸ ದಿಕ್ಕು: ಡಿ.18ರಿಂದ ಮುಂಬೈನಲ್ಲಿ ವಿಶ್ವ ಹಿಂದೂ ಕಾಂಗ್ರೆಸ್ 2026 ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಶ್ವ ಹಿಂದೂ ಕಾಂಗ್ರೆಸ್‌ನ ಪೂಜ್ಯ ಸ್ವಾಮಿ ವಿಜ್ಞಾನಾನಂದಜೀ, ಸಮಾವೇಶದ ಉದ್ದೇಶ ಮತ್ತು ಸಿದ್ಧತೆಗಳ ಕುರಿತು ಮಾಹಿತಿ ನೀಡಿದರು. vskkarnataka.org/world-hindu…
2
15
596
ರಾಷ್ಟ್ರೋತ್ಥಾನ ಪರಿಷತ್ತಿನ ಉಚಿತ ಶೈಕ್ಷಣಿಕ ಯೋಜನೆ - ‘ತಪಸ್ (ಬಾಲಕರಿಗೆ) ಮತ್ತು ಸಾಧನಾ (ಬಾಲಕಿಯರಿಗೆ)’. ಸಾಮಾಜಿಕ, ಆರ್ಥಿಕ ಅಶಕ್ತ ಕುಟುಂಬಗಳ ಪ್ರತಿಭಾವಂತ ಮಕ್ಕಳ IIT ಎಂಜಿನಿಯರ್, MBBS ಡಾಕ್ಟರ್ ಆಗುವ ಕನಸು ನನಸಾಗಿಸಬಲ್ಲ ಯೋಜನೆ. ಮುಂದಿನ ಶೈಕ್ಷಣಿಕ ವರ್ಷಕ್ಕೆ ನೋಂದಣಿಗಾಗಿ ಡಿಸೆಂಬರ್ 25, 2026 ರಂದು ನಡೆಯಲಿರುವ ಪ್ರವೇಶ ಪರೀಕ್ಷೆಗೆ Online ಅರ್ಜಿಗಳನ್ನು ಆಹ್ವಾನಿಸಲಾಗಿದೆ. ವಿವರಗಳಿಗಾಗಿ: tapassaadhana.rashtrotthana.…
2
7
389