Pinned Tweet
#ಹಂಪಿ ಪಟ್ಟಣ ಮತ್ತು ಅದರ ನೀರುಪೂರೈಕೆ, ಒಳಚರಂಡಿಗಳ ಶಿಸ್ತುಬದ್ಧ ಏರ್ಪಾಟುಗಳನ್ನು ನೋಡಿ ಇಂತಹ ಬೆರಗಿನ ದೊಡ್ಡ ಪಟ್ಟಣವನ್ನು ತಾನೆಲ್ಲೂ ಕಂಡಿಲ್ಲವೆಂದು ಪರ್ಶಿಯಾದ ಪ್ರವಾಸಿಗ ಅಬ್ದುಲ್ ರಜಾಕ್ (1443 C.E) ಹೇಳುತ್ತಾನೆ.
ಆಡಳಿತ: ಇಮ್ಮಡಿ ದೇವರಾಯ [1424-1446 C.E]
#ಕರ್ಣಾಟಸಾಮ್ರಾಜ್ಯ #VijayanagarEmpire #KarnataEmpire
ಚಾಲುಕ್ಯ ವಿಕ್ರಮ
ಚಾಲುಕ್ಯ ಸಾಮ್ರಾಜ್ಯದ ವೈಭವ, ರಾಜಕೀಯ ಒಳಸಂಚುಗಳು ಮತ್ತು ಪ್ರತಾಪಿ ಅರಸರ ಸಾಹಸಗಾಥೆಯ ರೋಚಕ ಕಥೆಯನ್ನು ಒಳಗೊಂಡಿರುವ ಅದ್ಭುತ ಕಾದಂಬರಿ 'ಚಾಲುಕ್ಯ ವಿಕ್ರಮ'.
harivubooks.com/products/cha…
ಕಳ್ಳತನಕ್ಕೆ 'ಶಾಪದ ಶಿಕ್ಷೆ': ಬಳ್ಳಾರಿಯಲ್ಲಿ ಅಪರೂಪದ ಶಾಸನ ಪತ್ತೆ..!
ಈ ಶಾಸನವು ಕಳ್ಳತನದ ವಿರುದ್ಧ ಕಠಿಣ ಸಾಂಪ್ರದಾಯಿಕ ಶಾಪವನ್ನು ಹೊಂದಿರುವುದು ಇತಿಹಾಸ ತಜ್ಞರಲ್ಲಿ ಕುತೂಹಲ ಕೆರಳಿಸಿದೆ.
kannadaprabha.com/karnataka/…
ದೊಡ್ಡ ಅಂತಾಪುರದ ಹೊಲದ ಬದುವಿನಲ್ಲಿ ಸಿಕ್ಕ ಅಪರೂಪದ ಶಾಸನ
“ಕಡಬನ ಗದ್ದೆಯ ಸೆದೆಯನ್ನು ಕದ್ದವನು ಕತ್ತೆಯ ಶಾಪಕ್ಕೆ ಗುರಿಯಾಗುತ್ತಾನೆ”
ಇದೊಂದು ಹೊಲದ ಬೆಳೆಯ ರಕ್ಷಣೆಗಾಗಿ ಹಾಕಿರುವ ಶಾಸನ. ಈ ಹಿಂದೆ ತೋಟದ ಅಥವಾ ಹೊಲದ ಮುಖ್ಯದ್ವಾರದಲಿ ಹಳೆಯ ಪಾದರಕ್ಷೆ ಕಟ್ಟುವ ರೂಢಿಯಿತ್ತು.
"ಕನ್ನಡ ತಾಯಿ ನುಡಿ,ಮನ್ನಿಸಿ ಮಾತನಾಡು
ಅನ್ಯಕ್ಕೆ ಮರುಳಾಗದಿರು, ಮರುಳೇ ನೀ
ಕನ್ನಡಿಗನೆಂಬುದು ಮರೀಬೇಡ"!
ಹೀಗೆಂದು ಕನ್ನಡಿಗರಿಗೆ ಬುದ್ದಿ ಹೇಳಿದ್ದು ಸೊಲ್ಲಾಪುರದ ಜಯದೇವಿತಾಯಿ ಲಿಗಾಡೆಯವರು. ಸೊಲ್ಲಾಪುರದಂತಹ ಗಡಿನಾಡ ಪ್ರದೇಶದಲ್ಲಿ ಕರ್ನಾಟಕದ ಏಕೀಕರಣ ಹೋರಾಟ, ಕನ್ನಡದ ಉಳಿವು, ಕನ್ನಡಿಗರ ಏಳಿಗೆಗಾಗಿ ಡುಡಿದವರು ಜಯದೇವಿತಾಯಿ ಲಿಗಾಡೆಯವರು
ಚಾಲುಕ್ಯ ಚಕ್ರವರ್ತಿ ಇಮ್ಮಡಿ ಪುಲಿಕೇಶಿ
ಇದೊಂದು ಇಮ್ಮಡಿ ಪುಲಕೇಶಿ ಕುರಿತ ಐತಿಹಾಸಿಕ ಕಾದಂಬರಿ. ಚಾಲುಕ್ಯ ವಂಶದ ಪ್ರಸಿದ್ಧ ದೊರೆ (ಕ್ರಿ.ಶ ೬೧೦-೬೪೨) ಇವನ ಕಾಲದಲ್ಲಿ ಬಾದಾಮಿ ಚಾಲುಕ್ಯರ ಸಾಮ್ರಾಜ್ಯವು ದಖನ್ ಪ್ರಸ್ಥಭೂಮಿಯ ಹೆಚ್ಚಿನ ಪ್ರದೇಶವನ್ನು ಆವರಿಸಿತು.
harivubooks.com/products/cha…
ಹಡಗುಪಡೆಯ ಬೆಳವಣಿಗೆ ಶತಮಾನಗಳ ಇತಿಹಾಸವನ್ನು ಹೊಂದಿದೆ. ನಮ್ಮ ಹಿರೀಕರಾದ ಅರಸರು ಹೊಂದಿದ್ದ ಹಡಗುಪಡೆಯ ಅಳವು ಮತ್ತು ಅದನ್ನು ಬಳಸಿ ಅವರು ನಡೆಸಿದ ಕಾಳಗಗಳು ಮತ್ತು ಸಾಮ್ರಾಜ್ಯ ಹಬ್ಬುಗೆಯ ಬಗ್ಗೆ ಕನ್ನಡಿಗರು ಹೆಮ್ಮೆಪಡಬಹುದು. ಭಾರತೀಯ ಉಪಖಂಡದಲ್ಲಿದ್ದ ಕನ್ನಡಿಗರ ಸಾಮ್ರಾಜ್ಯಗಳ ಕೆಚ್ಚು ಹೆಮ್ಮೆಯ ಕಥೆಯಾಗಿದೆ.
ತಾಳಗುಂದದ ಪ್ರಣಮೇಶ್ವರ ಗುಡಿಯ ಸಿಂಹಕಟಾಂಜನ ಕಲ್ಬರಹವು (೩೭೦-೩೮೦ CE) ಈವರೆಗೆ ದೊರೆತ ಕನ್ನಡದ ಕಲ್ಬರಹಗಳಲ್ಲೇ ಹಳೆಯದಾದದ್ದು
ಕನ್ನಡದ ಮೊದಲ ಗಣಿತಜ್ಞ ರಾಜಾದಿತ್ಯನ (≈ 1190 CE) ಬಗ್ಗೆ ವಿರೂಪಾಕ್ಷಪ್ಪ ಕೋರಗಲ್ ಅವರು ಸಂಪಾದಿಸಿರುವ ಪುಸ್ತಕಗಳು :-
೧. ಕನ್ನಡದ ಮೊದಲ ಗಣಿತಜ್ಞ ಜೈನಕವಿ ಗಣಿತವಿಳಾಸ ರಾಜಾದಿತ್ಯ
೨. ಭೂ ಅಳತೆಯ ಕ್ಷೇತ್ರ ಗಣಿತ
ರಾಜಾದಿತ್ಯನು ತನ್ನ ಬರಹಗಳಲ್ಲಿ ಗಣಿತದ ಹಲವಾರು ಕನ್ನಡದ ಪದಗಳನ್ನು ಹಾಗು ಅಳತೆಗಳನ್ನು ಪರಿಚಯಿಸುವ ಕೆಲಸ ಮಾಡಿದ್ದಾರೆ.
100BCE- 400CE ವರೆಗೆ ತಮಿಳಿನ ಮೇಲೆ #ಹಳೆಗನ್ನಡ'ದ ಪ್ರಭಾವವನ್ನು ತಮಿಳು ಇತಿಹಾಸಕಾರ ಐರಾವತಮ್ ಮಹಾದೇವನ್ ಗುರುತಿಸಿದ್ದಾರೆ
(ಸೆಲೆ :- ಷ. ಶೆಟ್ಟರ್ ಅವರ "ಶಂಗಂ ತಮಿಳಗಂ ಮತ್ತು ಕನ್ನಡ ನಾಡು-ನುಡಿ)
ಚೆನ್ನಭೈರಾದೇವಿ
ದಕ್ಷಿಣ ಕೊಂಕಣ ಹಾಗೂ ಮಲೆನಾಡನ್ನು 54 ವರ್ಷಗಳವರೆಗೂ ಆಳಿದ ಚೆನ್ನಭೈರಾದೇವಿ, ಕರಿಮೆಣಸಿನ ರಾಣಿಯ ಅಕಳಂಕ ಚರಿತೆ ಈ ಕೃತಿ.
harivubooks.com/products/che…
ಬಿಹಾರ ಮತ್ತು ಮಿಥಿಲಾವನ್ನು(ನೇಪಾಳ) ಆಳಿದ ನಾನ್ಯದೆವನೆಂಬ ಅರಸನು(ಹನ್ನೊಂದನೆ ಶತಮಾನ) ಭರತನ ನಾಟ್ಯಶಾಸ್ತ್ರಕ್ಕೆ ತಾನು ಬರೆದ ವಿಮರ್ಶೆಯಲ್ಲಿ, ತಾನು ಕರ್ನಾಟಕದವನೆಂದು ಹೇಳಿಕೊಂಡಿದ್ದಾನೆ
ಸೆಲೆ:- ಎಡೆಗಳು ಹೇಳುವ ಕಂನಾಡ ಕತೆ, ಶಂ.ಬಾ.ಜೋಶಿ (ಪುಟ ೫೯)
ಸಾಮ್ರಾಜ್ಯದ ಹೆಸರು "ಕರ್ನಾಟಕ ಸಾಮ್ರಾಜ್ಯ"
ವಿಜಯನಗರ ಅದರ ನೆಲೆವೀಡು
ಸೆಲೆ :-
The History Of The Vijayanagar Empire (Beginnings and Expansion)
archive.org/details/in.ernet…
ಹೊಯ್ಸಳ ದೊರೆ ವಿಷ್ಣುವರ್ಧನ ಅವರ ತೀರಿಕೊಂಡ ದಿನಾಂಕ ಕುರಿತು ಇತ್ತೀಚಗೆ ಹೊಸ ತಿಳಿವು ದೊರತಿದೆ, ಅದರ ಕುರಿತು ಇತ್ತೀಚಗೆ ಪ್ರಜಾವಾಣಿಯಲ್ಲಿ ಮೂಡಿ ಬಂದ ಅಂಕಣ.
ಬೆಟ್ಟದ ಮೇಲೊಂದು ಮನೆಯ ಮಾಡಿ
ಮೃಗಗಳಿಗಂಜಿದಡೆಂತಯ್ಯಾ?
ಸಮುದ್ರದ ತಡಿಯಲೊಂದು ಮನೆಯ ಮಾಡಿ
ನೊರೆತೆರೆಗಳಿಗಂಜಿದಡೆಂತಯ್ಯಾ?
ಸಂತೆಯೊಳಗೊಂದು ಮನೆಯ ಮಾಡಿ
ಶಬ್ದಕ್ಕೆ ನಾಚಿದಡೆಂತಯ್ಯಾ?
ಚೆನ್ನಮಲ್ಲಿಕಾರ್ಜುನದೇವ
#ಅಕ್ಕಮಹಾದೇವಿ
ಕರ್ನಾಟಕ ಗತವೈಭವ
ಕನ್ನಡಿಗರಿಗೆ ಎಕೀಕರಣದ ಅರಿವು ಮೂಡಿಸಿದ ಮಹತ್ವದ ಗ್ರಂಥ ಕರ್ನಾಟಕ ಗತವೈಭವ ಪ್ರಕಟಿಸುವ ಮೂಲಕ ಮತ್ತೊಮ್ಮೆ ಜನರ ಕೈಗೆ ಈ ಗ್ರಂಥ ಸಿಗಲಿ ಎಂಬ ಆಶಯದೊಂದಿಗೆ ಪ್ರತಿಷ್ಠಾನವು ಇದನ್ನು ಪ್ರಕಟಿಸುತ್ತಿದೆ.
harivubooks.com/products/kar…






















