Official twitter account of Mico Layout Police Station (080-2294-2569) Dial Namma 112 in case of emergency Help us to serve you better @BlrCityPolice

16th main road BTM 2nd Stage
Joined September 2023
ಮೈಕೋಲೇಔಟ್ ಪೊಲೀಸ್ ಠಾಣೆ Mico Layout Police Station retweeted
ಆಗ್ನೇಯ ವಿಭಾಗದ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಹಿರಿಯ ಅಧಿಕಾರಿಗಳ ಕಟ್ಟುನಿಟ್ಟಿನ ಆದೇಶ ಹಾಗೂ ಮಾರ್ಗದರ್ಶನದಂತೆ, ಪೊಲೀಸ್‌ ಸಿಬ್ಬಂದಿಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಿ, ಪೊಲೀಸ್‌ ಗಸ್ತು (Patrolling) ಹಾಗೂ ಸಾರ್ವಜನಿಕರಲ್ಲಿ ಸುರಕ್ಷತೆಯ ಭಾವನೆ ಮೂಡಿಸುವ ನಿಟ್ಟಿನಲ್ಲಿ ಪೊಲೀಸ್‌ ಗೋಚರತೆಯನ್ನು (Visibility) ಗಣನೀಯವಾಗಿ ಹೆಚ್ಚಿಸಲಾಯಿತು. ವಾಹನ ತಪಾಸಣೆ ನಡೆಸಿ, ಅನುಮಾನಾಸ್ಪದ ವ್ಯಕ್ತಿಗಳು ಹಾಗೂ ಸಂಶಯಾಸ್ಪದ ವಾಹನಗಳ ಚಲನವಲನದ ಮೇಲೆ ವಿಶೇಷ ನಿಗಾ ವಹಿಸಿ, ಸಾರ್ವಜನಿಕರ ಗರಿಷ್ಠ ಸುರಕ್ಷತೆಗಾಗಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಯಿತು. #BengaluruCityPolice #SouthEastDivision #PolicePatrolling #PoliceVisibility #NakaBandhi #VehicleChecking #CrimePrevention #PublicSafety
4
4
473
ಮೈಕೋಲೇಔಟ್ ಪೊಲೀಸ್ ಠಾಣೆ Mico Layout Police Station retweeted
🚦 ರಸ್ತೆ ರೋಷಾವೇಶಕ್ಕೆ ಬ್ರೇಕ್ ಹಾಕೋಣ! ನಗರದ ವಾಹನ ದಟ್ಟಣೆಯಲ್ಲಿ ಸಣ್ಣ ತಪ್ಪುಗಳು, ತಪ್ಪು ಅರ್ಥೈಸಿಕೊಳ್ಳುವಿಕೆ ಅಥವಾ ಆತುರ ಕೋಪಕ್ಕೆ ಕಾರಣವಾಗಬಹುದು. ಆದರೆ ಒಂದು ಕ್ಷಮೆಯಾಚನೆಯ ಮಾತು, ಒಂದು ಕ್ಷಣದ ತಾಳ್ಮೆ ರಸ್ತೆ ರೋಷಾವೇಶವನ್ನು ತಡೆಯಲು ಸಹಾಯ ಮಾಡುತ್ತದೆ. 🙏 “ಕ್ಷಮಿಸಿ” ಎನ್ನುವ ಒಂದು ಮಾತು, ಸಂಘರ್ಷವನ್ನು ತಪ್ಪಿಸಿ ಸುರಕ್ಷಿತ ಪ್ರಯಾಣಕ್ಕೆ ದಾರಿ ಮಾಡಿಕೊಡಬಹುದು. 🚗 ಕೋಪಕ್ಕೆ ಬದಲಾಗಿ ತಾಳ್ಮೆ ತೋರಿಸಿ. 🛑 ವಾಗ್ವಾದಕ್ಕೆ ಬದಲಾಗಿ ಪರಿಸ್ಥಿತಿಯಿಂದ ದೂರ ಸರಿಯಿರಿ. 📞 ಪರಿಸ್ಥಿತಿ ಕೈಮೀರಿದರೆ 112ಕ್ಕೆ ಕರೆ ಮಾಡಿ. ರಸ್ತೆಯಲ್ಲಿ ಗೆಲ್ಲಬೇಕಾಗಿರುವುದು ವಾದವಲ್ಲ — ಸುರಕ್ಷಿತವಾಗಿ ಮನೆ ತಲುಪುವುದು. #RoadRage #RoadSafety #DriveSafe #StayCalm #112 #BengaluruCityTraffic #SouthEastDivision
5
8
517
ಮೈಕೋಲೇಔಟ್ ಪೊಲೀಸ್ ಠಾಣೆ Mico Layout Police Station retweeted
ಗಣೇಶೋತ್ಸವದ ಹಿನ್ನೆಲೆಯಲ್ಲಿ, ಆಗ್ನೇಯ ವಿಭಾಗದ ಪೊಲೀಸ್ ಠಾಣಾ ವ್ಯಾಪ್ತಿಯ ಸೂಕ್ಷ್ಮ ಪ್ರದೇಶಗಳಲ್ಲಿ ಕಾರ್ಯಕ್ರಮಗಳು ಹಾಗೂ ಮೆರವಣಿಗೆಗಳ ಸಂದರ್ಭದಲ್ಲಿ ಸೂಕ್ತ ನಿಗಾ ವಹಿಸಿ, ಸಾರ್ವಜನಿಕರ ಸುರಕ್ಷತೆ, ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸುಗಮ ಸಂಚಾರಕ್ಕೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಯಿತು. ಆಯೋಜಕರು ಹಾಗೂ ಮೇಲ್ವಿಚಾರಕರು ಸಾರ್ವಜನಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿ, ಇಲಾಖೆಯ ಸೂಚನೆಗಳು ಹಾಗೂ ಸುರಕ್ಷತಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವುದರ ಜೊತೆಗೆ, ಪೊಲೀಸರೊಂದಿಗೆ ಸಹಕರಿಸುವಂತೆ ಸೂಚಿಸಲಾಯಿತು. #ಸಾರ್ವಜನಿಕಸುರಕ್ಷತೆ #ಕಾನೂನುಮತ್ತುಸುವ್ಯವಸ್ಥೆ #BengaluruCityPolice #SouthEastDivision #GaneshChaturthi #SafeGaneshotsav #PublicSafety
6
8
692
ಮೈಕೋಲೇಔಟ್ ಪೊಲೀಸ್ ಠಾಣೆ Mico Layout Police Station retweeted
🙏 ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು 🙏 ವಿಘ್ನ ವಿನಾಶಕ ಶ್ರೀ ಗಣೇಶನು ನಮ್ಮ ಜೀವನದ ಎಲ್ಲಾ ವಿಘ್ನಗಳು ಹಾಗೂ ಸಂಕಷ್ಟಗಳನ್ನು ದೂರಮಾಡಿ, ಸಂತೋಷ, ಶಾಂತಿ, ಆರೋಗ್ಯ ಮತ್ತು ಸಮೃದ್ಧಿಯನ್ನು ಕರುಣಿಸಲಿ. ಎಲ್ಲರ ಮನೆ-ಮನಗಳಲ್ಲಿ ಸೌಹಾರ್ದತೆ, ನೆಮ್ಮದಿ ಮತ್ತು ಸಂತಸದ ಬೆಳಕು ಸದಾ ತುಂಬಿರಲಿ. #ಗಣೇಶೋತ್ಸವ, #ಸಂತೋಷ #ಶಾಂತಿ, #GaneshUtsav #HappyGaneshChaturthi #DCPSouthEast #BengaluruCityPolice
5
6
486
ಮೈಕೋಲೇಔಟ್ ಪೊಲೀಸ್ ಠಾಣೆ Mico Layout Police Station retweeted
ಅಧಿಕಾರಿಗಳು ಹಾಗೂ ಸಿಬ್ಬಂದಿಯ ತನಿಖಾ ಸಾಮರ್ಥ್ಯವನ್ನು ಮತ್ತಷ್ಟು ಪರಿಣಾಮಕಾರಿಗೊಳಿಸುವ ಉದ್ದೇಶದಿಂದ, ಹೊಸ ಅಪರಾಧ ಕಾನೂನುಗಳು, ಸೈಬರ್‌ ಅಪರಾಧ, ವೈಜ್ಞಾನಿಕ ತನಿಖೆ, ಸಾಕ್ಷ್ಯ ನಿರ್ವಹಣೆ ಹಾಗೂ ತನಿಖಾ ಸಂಪನ್ಮೂಲಗಳ ಕುರಿತು ತಜ್ಞರಿಂದ ವಿಶೇಷ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಯಿತು. 🎯 ವೈಜ್ಞಾನಿಕ ಮತ್ತು ಗುಣಮಟ್ಟದ ತನಿಖೆ. With the objective of further enhancing the investigative capabilities of officers and staff, a specialised training workshop was conducted by experts covering New Criminal Laws, Cyber Crime, Scientific Investigation, Evidence Handling, and Investigative Resources. #Investigation #PoliceTraining #ScientificInvestigation #CyberCrime #BengaluruCityPolice #DCPSouthEastDivision
5
7
629
ಮೈಕೋಲೇಔಟ್ ಪೊಲೀಸ್ ಠಾಣೆ Mico Layout Police Station retweeted
🌸 ಶಿಕ್ಷಕರ ದಿನಾಚರಣೆಯ ಶುಭಾಶಯಗಳು | Happy Teachers’ Day 🌸 ನಿಮ್ಮ ಮಾರ್ಗದರ್ಶನವು ವಿದ್ಯಾರ್ಥಿಗಳ ಕನಸುಗಳಿಗೆ ದಾರಿದೀಪವಾಗಲಿ, ನಿಮ್ಮ ಬೋಧನೆಯು ಸಮಾಜಕ್ಕೆ ಉತ್ತಮ ನಾಗರಿಕರನ್ನು ರೂಪಿಸಲಿ. ಶಿಕ್ಷಕರ ಸೇವೆ ಸದಾ ಗೌರವಕ್ಕೆ ಪಾತ್ರ. 🙏🌷 Your guidance lights the path to success, and your dedication helps build a stronger, responsible and better society. 🙏🌷 #ಶಿಕ್ಷಕರದಿನಾಚರಣೆ #TeachersDay #DrSarvepalliRadhakrishnan #RespectTeachers #BengaluruCityPolice #SouthEastDivision
6
8
478
ಅಂತರಾಷ್ಟ್ರೀಯ ಮಾದಕ ವ್ಯಸನ ಮತ್ತು ಕಳ್ಳಸಾಗಾಣಿಕೆ ವಿರೋಧಿ ದಿನದ ಪ್ರಯುಕ್ತ, ಮೈಕೋ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ, ಮಾದಕ ವ್ಯಸನದ ದುಷ್ಪರಿಣಾಮಗಳು, ಕಳ್ಳಸಾಗಾಣಿಕೆಯ ವಿರುದ್ಧ ಜಾಗೃತಿ ಮೂಡಿಸಲಾಯಿತು.@BlrCityPolice @CPBlr @DCPSEBCP @acpmicolayout @CMofKarnataka @HMOKarnataka
4
4
182
ದಿನಾಂಕ: 11-06-2026 ರಂದು ಮೈಕೋ ಲೇಔಟ್ ಪೊಲೀಸ್ ಠಾಣಾ ಸರಹದ್ದಿನ ವಿದ್ಯಾಜ್ಯೋತಿ ಕನ್ನಡ ಮಾಧ್ಯಮ ಪ್ರೌಢ ಶಾಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂಯೋಜನೆಯೊಂದಿಗೆ ನಡೆಸಿದ ತೆರೆದ ಮನೆ ಕಾರ್ಯಕ್ರಮದಲ್ಲಿ ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿ ಕಾನೂನಿನ ಅರಿವು ಮೂಡಿಸಲಾಯಿತು.
1
34
ಮೈಕೋಲೇಔಟ್ ಪೊಲೀಸ್ ಠಾಣೆ Mico Layout Police Station retweeted
🚨 ಅಕ್ರಮ ಲೋನ್ ಆಪ್ ವಂಚನೆ ಎಚ್ಚರಿಕೆ🚨 ಸಣ್ಣ ಸಾಲದ ಆಮಿಷದಿಂದ ಆರಂಭವಾಗುವ ಈ ವಂಚನೆ, ನಂತರ ಕಿರುಕುಳ, ಬ್ಲ್ಯಾಕ್‌ಮೇಲ್ ಹಾಗೂ ಆರ್ಥಿಕ ಸಂಕಷ್ಟಕ್ಕೆ ದಾರಿ ಮಾಡಿಕೊಡಬಹುದು. ⚠️ ನಕಲಿ ಲೋನ್ ಆಫ್‌ಗಳು ಕೇವಲ ಹಣದ ಮೋಸವಲ್ಲ; ನಿಮ್ಮ ವೈಯಕ್ತಿಕ ಮಾಹಿತಿಯನ್ನು ದುರುಪಯೋಗಪಡಿಸಿ ಭಯದ ವಾತಾವರಣ ಸೃಷ್ಟಿಸಿ ಡಿಜಿಟಲ್ ಸುಲಿಗೆಕೋರರಾಗಿರುತ್ತಾರೆ. ❌ ಕೆಲವೊಮ್ಮೆ ಹಣ ಮರುಪಾವತಿಸಿದರೂ, ಆಪ್‌ನಲ್ಲಿ ಅಪ್‌ಡೇಟ್ ಮಾಡದೆ “ಪಾವತಿ ಆಗಿಲ್ಲ” ಎಂದು ಮತ್ತೆ ಹಣಕ್ಕೆ ಒತ್ತಾಯಿಸುತ್ತಾರೆ. 💡 ಎಚ್ಚರಿಕೆಯಿಂದಿರಿ: • RBI ಮಾನ್ಯತೆ ಪಡೆದ ಸಾಲದಾತರನ್ನು ಮಾತ್ರ ಪರಿಶೀಲಿಸಿ ಬಳಸಿ • ಅನುಮಾನಾಸ್ಪದ ಆಪ್‌ಗಳನ್ನು ಡೌನ್‌ಲೋಡ್ ಮಾಡಬೇಡಿ • ವೈಯಕ್ತಿಕ ಮಾಹಿತಿ ಹಂಚಿಕೊಳ್ಳಬೇಡಿ • ಬೆದರಿಕೆ ಕರೆ/ಸಂದೇಶಗಳಿಗೆ ಮಣಿಯಬೇಡಿ, ತಕ್ಷಣ ಹತ್ತಿರದ ಪೊಲೀಸ್‌ ಠಾಣೆಗೆ ದೂರು ನೀಡಿ ಅಥವಾ 1930 ಗೆ ಕರೆ ಮಾಡಿ ದೂರು ನೀಡಿ ಜಾಗೃತಿಯೇ ನಿಜವಾದ ರಕ್ಷಣೆ. @DgpKarnataka @BlrCityPolice @jt_cpeastbcp #LoanAppFraud #CyberCrimeAwareness #StayAlert #DigitalSafety #southeastdivision
8
5
303
ಮೈಕೋಲೇಔಟ್ ಪೊಲೀಸ್ ಠಾಣೆ Mico Layout Police Station retweeted
ಆಗ್ನೇಯ ವಿಭಾಗದ @hsrlayoutps ತಂಡವು ತಮ್ಮ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ, ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ, ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳವಾಗಿದ್ದ ಒಟ್ಟು ₹5.3 ಲಕ್ಷ ಮೌಲ್ಯದ 10 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. 👏 ಈ ಉತ್ತಮ ಕಾರ್ಯಕ್ಕಾಗಿ ಹಿರಿಯ ಅಧಿಕಾರಿಗಳು ಪೊಲೀಸ್ ತಂಡವನ್ನು ಪ್ರಶಂಸಿಸಿದ್ದಾರೆ. 🚔 ನಿಮ್ಮ ಮನೆಯ ಸುತ್ತಮುತ್ತ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಅನುಮಾನಾಸ್ಪದ ವ್ಯಕ್ತಿಗಳು ಅಥವಾ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ಅಥವಾ #112 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿ. ⚠️ ಎಚ್ಚರಿಕೆಯೇ ಅಪರಾಧ ತಡೆಗೆ ಮೊದಲ ಹೆಜ್ಜೆ. @DgpKarnataka @BlrCityPolice @jt_cpeastbcp #BengaluruCityPolice #CrimePrevention #PublicSafety #StayAlert #VehicleTheft #SouthEastDivision
3
10
13
1,967
ಮೈಕೋಲೇಔಟ್ ಪೊಲೀಸ್ ಠಾಣೆ Mico Layout Police Station retweeted
ಆಗ್ನೇಯ ವಿಭಾಗದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ನಿರ್ಜನ ಪ್ರದೇಶಗಳು, ಜನನಿಬಿಡ ಸ್ಥಳಗಳು, ಬಸ್ ನಿಲ್ದಾಣಗಳು ಹಾಗೂ ಪ್ರಮುಖ ರಸ್ತೆಗಳಲ್ಲಿ ಪಥ ಸಂಚಲನ ನಡೆಸಿ #AreaDomination ಕಾರ್ಯಾಚರಣೆ ನಡೆಸಿ, ಅನುಮಾನಾಸ್ಪದ ವಾಹನಗಳು ಮತ್ತು ವ್ಯಕ್ತಿಗಳ ದಾಖಲೆಗಳನ್ನು ಕೂಲಂಕುಶವಾಗಿ ಪರಿಶೀಲನೆ ನಡೆಸಿ, ಸಾರ್ವಜನಿಕರಲ್ಲಿ ಭದ್ರತಾ ಭಾವನೆ ಮೂಡಿಸುವ ಜೊತೆಗೆ ಅಪರಾಧ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲಾಯಿತು. ⚠️ ಸಾರ್ವಜನಿಕರ ಸುರಕ್ಷತೆ ನಮ್ಮ ಆದ್ಯತೆ. 🤝 @DgpKarnataka @BlrCityPolice @jt_cpeastbcp #BengaluruCityPolice #AreaDomination #PublicSafety #PolicePatrolling #StaySafe #CrimePrevention
6
4
8
311
ಮೈಕೋಲೇಔಟ್ ಪೊಲೀಸ್ ಠಾಣೆ Mico Layout Police Station retweeted
ಒಂದೇ ಟ್ಯಾಪ್. ತಕ್ಷಣದ ಸಹಾಯ. ಶೀಘ್ರಗತಿಯ ರಕ್ಷಣೆ. ಈಗ ಓಲಾ (Ola), ಉಬರ್ (Uber) ಮತ್ತು ನಮ್ಮ ಯಾತ್ರಿ (Namma Yatri) ಆಪ್‌ಗಳೊಂದಿಗೆ ಸಂಯೋಜಿಸಲಾಗಿದೆ - ನೀವು ಸಂಕಷ್ಟದಲ್ಲಿದ್ದಾಗ 'ಡಯಲ್ 112' ನಿಮ್ಮ ಲೊಕೇಶನ್ ಅನ್ನು ಹಂಚಿಕೊಳ್ಳುವ ಮೂಲಕ ನೇರವಾಗಿ ತುರ್ತು ಸಹಾಯ ಮತ್ತು ಪೊಲೀಸರ ತ್ವರಿತ ಸ್ಪಂದನೆಯನ್ನು ಒದಗಿಸುತ್ತದೆ. ನಿಮ್ಮ ಸುರಕ್ಷತೆ ನಿಮ್ಮ ಪ್ರಯಾಣದ ಜೊತೆಗಿರಲಿ. One Tap. Instant Help. Faster Protection. Now integrated with Ola, Uber & Namma Yatri - Dial 112 connects you directly to emergency support with quick location sharing and rapid police response when you need it most. Your safety travels with you. #Dial112 #Namma112 #SafeRide #PassengerSafety #KSP #BCP
5
6
144
ಮೈಕೋಲೇಔಟ್ ಪೊಲೀಸ್ ಠಾಣೆ Mico Layout Police Station retweeted
ರಾಣಿ ಚೆನ್ನಮ್ಮ ಪಡೆಯವರು ಆಗ್ನೇಯ ವಿಭಾಗದ ಪೊಲೀಸ್ ಠಾಣೆಗಳ ವ್ಯಾಪ್ತಿಯ ಬಸ್ ನಿಲ್ದಾಣಗಳಿಗೆ ಭೇಟಿ ನೀಡಿ, ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆಯ ಕುರಿತು ಜಾಗೃತಿ ಮೂಡಿಸಿದರು. ಸಾರ್ವಜನಿಕ ಸ್ಥಳಗಳಲ್ಲಿ ಸರಗಳ್ಳತನ ಹಾಗೂ ಮೊಬೈಲ್ ಕಳ್ಳತನಗಳ ಬಗ್ಗೆ ಎಚ್ಚರಿಕೆಯಿಂದಿರುವಂತೆ ತಿಳಿಸಿ, ಯಾವುದೇ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ತುರ್ತು ಸಂದರ್ಭಗಳಲ್ಲಿ ಪೊಲೀಸ್ ಇಲಾಖೆಯ KSP App, #112 ಹಾಗೂ #1930 ಸಹಾಯವಾಣಿ ಸಂಖ್ಯೆಗಳ ಬಳಕೆಯ ಕುರಿತು ಮಾಹಿತಿಯನ್ನು ನೀಡಿದರು. @DgpKarnataka @BlrCityPolice @jt_cpeastbcp #WomenSafety #PublicAwareness #MobileTheftAwareness #StayAlert #southeastdivision
3
4
143
ಮೈಕೋಲೇಔಟ್ ಪೊಲೀಸ್ ಠಾಣೆ Mico Layout Police Station retweeted
🚦 ರಸ್ತೆ ಜಗಳ (Road Rage) ನಿಮ್ಮ ಆಕ್ರೋಶವನ್ನು ಅಪರಾಧದ ದಾರಿಗೆ ಕೊಂಡೊಯ್ಯಬಹುದು. ತಾಳ್ಮೆಯೇ ಸುರಕ್ಷಿತ ಸಂಚಾರದ ಮೂಲ ಮಂತ್ರ. ⚠️ ನಗರದಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಒತ್ತಡದ ನಡುವೆ ವಾಹನ ಚಾಲನೆ ಮಾಡುವಾಗ ಕೋಪ, ಅಸಹನೆ ಹಾಗೂ ವಾಗ್ವಾದಗಳು ಅಪಘಾತಗಳಿಗೆ ಮತ್ತು ಅನಾಹುತಗಳಿಗೆ ಕಾರಣವಾಗುತ್ತಿವೆ. 🚘 ನೆನಪಿರಲಿ: • ಕ್ಷಣಿಕ ಕೋಪ ಅಪರಾಧವಾಗಿ, ಜೀವಿತಾವಧಿಯ ಪಶ್ಚಾತ್ತಾಪವಾಗಬಹುದು • ರಸ್ತೆ ಎಲ್ಲರಿಗೂ ಸಾಮಾನ್ಯ ಸ್ಥಳ • ಪರಸ್ಪರ ಗೌರವ ಮತ್ತು ಶಾಂತ ಮನೋಭಾವವೇ ಉತ್ತಮ ನಾಗರಿಕತೆ 💡 ಸಂಯಮದಿಂದ ಚಾಲನೆ ಮಾಡಿ – ಸುರಕ್ಷಿತ ಪ್ರಯಾಣ ನಿಮ್ಮ ಮತ್ತು ಇತರರ ಜವಾಬ್ದಾರಿ. @DgpKarnataka @KarnatakaCops @jt_cpeastbcp #RoadSafety #RoadRageAwareness #SafeDriving #TrafficAwareness #southeastdivision
6
9
232
ಮೈಕೋಲೇಔಟ್ ಪೊಲೀಸ್ ಠಾಣೆ Mico Layout Police Station retweeted
🚨 ಸೈಬರ್‌ ವಂಚಕರ ಈ ಸಂದೇಶಕ್ಕೆ ಮೋಸ ಹೋಗಬೇಡಿ “Sir, please install this APK file…” ಸೈಬರ್ ವಂಚಕರು ಬ್ಯಾಂಕ್ ಅಥವಾ ಕ್ರೆಡಿಟ್ ಕಾರ್ಡ್ ಅಧಿಕಾರಿಗಳಂತೆ ನಟಿಸಿ WhatsApp ಅಥವಾ SMS ಮೂಲಕ .APK ಫೈಲ್‌ಗಳನ್ನು ಕಳುಹಿಸುತ್ತಾರೆ. ನೀವು ಆ ಫೈಲ್‌ನ್ನು ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್ ಮಾಡಿದ ತಕ್ಷಣ, ವಂಚಕರು ನಿಮ್ಮ ಮೊಬೈಲ್‌ಗೆ ಅನಧಿಕೃತ ಪ್ರವೇಶ ಪಡೆಯಬಹುದು. ನಂತರ ನಿಮ್ಮ ಫೋನ್ ಡೇಟಾ, ಬ್ಯಾಂಕಿಂಗ್ ಮಾಹಿತಿ, OTP ಹಾಗೂ ವೈಯಕ್ತಿಕ ಮಾಹಿತಿಯನ್ನು ದುರುಪಯೋಗಪಡಿಸಿ ನಿಮ್ಮ ಖಾತೆಯಿಂದ ಹಣ ಕಳವು ಮಾಡಬಹುದು— ನಿಮಗೆ ತಿಳಿಯದೇ. 📱💳 🔒 ಸುರಕ್ಷಿತವಾಗಿರಿ: • ಅಪರಿಚಿತ APK ಫೈಲ್‌ಗಳು ಅಥವಾ ಆ್ಯಪ್‌ಗಳನ್ನು ಎಂದಿಗೂ ಡೌನ್‌ಲೋಡ್ ಮಾಡಬೇಡಿ • Google Play Store ಅಥವಾ App Store ಮುಂತಾದ ಅಧಿಕೃತ ಆ್ಯಪ್ ಸ್ಟೋರ್‌ಗಳಿಂದ ಮಾತ್ರ ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡಿ • ಪರಿಶೀಲಿಸದ ಲಿಂಕ್‌, ಫೈಲ್‌ ಅಥವಾ ಸಂದೇಶಗಳ ಮೇಲೆ ಕ್ಲಿಕ್ ಮಾಡಬೇಡಿ • ಬ್ಯಾಂಕ್ ಅಥವಾ ಕಸ್ಟಮರ್ ಕೇರ್ ಅಧಿಕಾರಿಗಳೆಂದು ಹೇಳುವ ಕರೆಗಳ ಬಗ್ಗೆ ಎಚ್ಚರಿಕೆಯಿಂದಿರಿ 📞 ಸೈಬರ್ ವಂಚನೆಗೆ ಒಳಗಾದರೆ ತಕ್ಷಣ 1930 ಗೆ ಕರೆ ಮಾಡಿ ಅಥವಾ 🌐 cybercrime.gov.in ನಲ್ಲಿ ದೂರು ದಾಖಲಿಸಿ @DgpKarnataka @BlrCityPolice @jt_cpeastbcp #CyberAwareness #CyberSafety #APKScam #WhatsAppScam #OnlineFraud #CyberCrime #StayAlert
8
7
291
ಮೈಕೋಲೇಔಟ್ ಪೊಲೀಸ್ ಠಾಣೆ Mico Layout Police Station retweeted
Replying to @bomanahalli_ps
@bomanahalli_ps ವ್ಯಾಪ್ತಿಯ ರೂಪೇನ ಅಗ್ರಹಾರ ಗ್ರಾಮದಲ್ಲಿ ನಡೆದ ಬ್ರಹ್ಮ ರಥೋತ್ಸವದ ಪ್ರಯುಕ್ತ ನಡೆದ ರಥೋತ್ಸವ ನಿಮಿತ್ತ ಪ್ರಮುಖ ಸ್ಥಳಗಳಲ್ಲಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಟ್ಟುನಿಟ್ಟಿನ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸಾರ್ವಜನಿಕರ ಸುರಕ್ಷತೆ ಮತ್ತು ಶಾಂತಿ-ಸುವ್ಯವಸ್ಥೆಯನ್ನು ಕಾಪಾಡಲು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಲಾಗಿದೆ. @KarnatakaCops @BlrCityPolice #PublicSafety #StaySafe #LawAndOrder #PoliceBandobast #SouthEastDivision
4
6
280
ಮೈಕೋಲೇಔಟ್ ಪೊಲೀಸ್ ಠಾಣೆ Mico Layout Police Station retweeted
🚨 ನಕಲಿ ಇ-ಮೇಲ್‌ ವಂಚನೆ ಎಚ್ಚರಿಕೆ 🚨 ಸೈಬರ್‌ ವಂಚಕರು ನಕಲಿ ಇ-ಮೇಲ್‌ ಸಂದೇಶಗಳ ಮೂಲಕ ಜನರನ್ನು ಮೋಸಗೊಳಿಸಿ ಹಣ ದೋಚುತ್ತಿದ್ದಾರೆ. ⚠️ ನಿಮಗೆ ಪರಿಚಿತವಾಗಿರುವ ಇ-ಮೇಲ್‌ ಐಡಿಯಂತೆ ಕಾಣುವ ನಕಲಿ ಇ-ಮೇಲ್‌ ವಿಳಾಸಗಳನ್ನು ಸೃಷ್ಟಿಸಿ, ಅದರಲ್ಲಿ ಅಪಾಯಕಾರಿ ಲಿಂಕ್‌ಗಳು ಹಾಗೂ ಅಟ್ಯಾಚ್‌ಮೆಂಟ್‌ಗಳನ್ನು ಕಳುಹಿಸಿ ವಂಚನೆ ನಡೆಸಲಾಗುತ್ತಿದೆ. 🔍 ಎಚ್ಚರಿಕೆಯಿಂದಿರಿ: • ಅಪರಿಚಿತ ಲಿಂಕ್‌ & ಅಟ್ಯಾಚ್‌ಮೆಂಟ್‌ಗಳನ್ನು ಕ್ಲಿಕ್‌ ಮಾಡಬೇಡಿ ❌ • ಇ-ಮೇಲ್‌ ಕಳುಹಿಸಿದವರ ವಿಳಾಸವನ್ನು ಸರಿಯಾಗಿ ಪರಿಶೀಲಿಸಿ 📧 • OTP, ಪಾಸ್‌ವರ್ಡ್‌, ಬ್ಯಾಂಕ್‌ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ 🔒 • ಅನುಮಾನಾಸ್ಪದ ಇ-ಮೇಲ್‌ ಕಂಡರೆ ತಕ್ಷಣ 1930 ಗೆ ವರದಿ ಮಾಡಿ 🚔 💡 ಸುರಕ್ಷಿತವಾಗಿರಿ – ಸೈಬರ್‌ ವಂಚನೆಗಳಿಂದ ನಿಮ್ಮ ಮಾಹಿತಿಯನ್ನೂ ಹಣವನ್ನೂ ಕಾಪಾಡಿಕೊಳ್ಳಿ. @DgpKarnataka @BlrCityPolice @jt_cpeastbcp #CyberSafety #EmailFraud #StayAlert #CyberCrimeAwareness #SafeInternet #southeastdivision
6
7
206
ಮೈಕೋಲೇಔಟ್ ಪೊಲೀಸ್ ಠಾಣೆ Mico Layout Police Station retweeted
🚨 ಆನ್‌ಲೈನ್ ಬೆಟ್ಟಿಂಗ್‌ ಎಚ್ಚರಿಕೆ 🚨 ಆನ್‌ಲೈನ್ ಬೆಟ್ಟಿಂಗ್‌ ಶಿಕ್ಷಾರ್ಹ ಅಪರಾಧವಾಗಿದೆ. ⚠️ ಆನ್‌ಲೈನ್ ಗೇಮಿಂಗ್‌ ಆಪ್‌ಗಳ ಮೂಲಕ ಆರಂಭದಲ್ಲಿ ಹಣ ದ್ವಿಗುಣ, ಹೆಚ್ಚಿನ ಲಾಭದ ಆಮಿಷವೊಡ್ಡಿ, ಬಳಿಕ ದೊಡ್ಡ ಮೊತ್ತದ ಹಣ ಹೂಡಿಕೆ ಮಾಡಿದ ನಂತರ ತಾಂತ್ರಿಕ ವಂಚನೆ ಮೂಲಕ ಹಣ ವಂಚಿಸಲಾಗುತ್ತದೆ. 💸 ವಂಚಕರು ಈ ಹಣವನ್ನು ವಿದೇಶಗಳಿಗೆ ಅಥವಾ ಬೇನಾಮಿ ಖಾತೆಗಳಿಗೆ ವರ್ಗಾಯಿಸುತ್ತಾರೆ. ❌ 💡 ಜಾಗರೂಕರಾಗಿರಿ: • ಸುಲಭ ಹಣದ ಆಮಿಷಕ್ಕೆ ಒಳಗಾಗಬೇಡಿ • ಅನುಮಾನಾಸ್ಪದ ಗೇಮಿಂಗ್‌/ಬೆಟ್ಟಿಂಗ್‌ ಆಪ್‌ಗಳನ್ನು ಬಳಸಬೇಡಿ • ನಿಮ್ಮ ವೈಯಕ್ತಿಕ/ಬ್ಯಾಂಕ್ ವಿವರಗಳನ್ನು ಹಂಚಿಕೊಳ್ಳಬೇಡಿ • ಸೈಬರ್ ವಂಚನೆ ಕಂಡುಬಂದರೆ ತಕ್ಷಣ 1930 ಗೆ ಕರೆ ಮಾಡಿ @DgpKarnataka @BlrCityPolice @jt_cpeastbcp #CyberSafety #OnlineBetting #StayAlert #CyberCrime #StopOnlineFraud
2
12
13
1,588
ಮೈಕೋಲೇಔಟ್ ಪೊಲೀಸ್ ಠಾಣೆ Mico Layout Police Station retweeted
🚸 ಮಕ್ಕಳ ಸುರಕ್ಷತೆ ಕುರಿತು ಜಾಗೃತಿ ಕಾರ್ಯಕ್ರಮ 🚸 ಆಗ್ನೇಯ ವಿಭಾಗದ ರಾಣಿ ಚೆನ್ನಮ್ಮ ಪಡೆಯ ಸಿಬ್ಬಂದಿಯವರು ಮಕ್ಕಳ ಹಕ್ಕುಗಳು ಹಾಗೂ ಮಕ್ಕಳಿಗೆ ಸಂಬಂಧಿಸಿದ ಕಾನೂನುಗಳ ಬಗ್ಗೆ ಅರಿವು ಮೂಡಿಸಿ, ಆಟವಾಡುವ ಸಮಯದಲ್ಲಿ ಹೆಚ್ಚಿನ ಸುರಕ್ಷತೆ ಬಗ್ಗೆ ಗಮನ ಹರಿಸುವಂತೆ ತಿಳಿಸಿ. ಅಪರಿಚಿತ ವ್ಯಕ್ತಿಗಳು ಹಾಗೂ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ತಕ್ಷಣ ಪೋಷಕರಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡುವಂತೆ ಜಾಗೃತಿ ಮೂಡಿಸಲಾಯಿತು. ಇದೇ ವೇಳೆ ಧೂಮಪಾನ ವಿರೋಧಿ ಜಾಗೃತಿ ಮೂಡಿಸಿ, ತುರ್ತು ಸಂದರ್ಭಗಳಲ್ಲಿ ಪೊಲೀಸ್ ಇಲಾಖೆಯ KSP App, Dial 112 ಹಾಗೂ 1930 ಸಹಾಯವಾಣಿ ಸಂಖ್ಯೆಗಳ ಬಳಕೆ ಕುರಿತು ಮಕ್ಕಳಿಗೆ ತಿಳಿಸಲಾಯಿತು. 👮‍♂️📞 @DgpKarnataka @BlrCityPolice @jt_cpeastbcp #ChildSafety #Childlaws #PoliceAwareness #SayNoToSmoking #KSP #Dial112 #CyberSafety #SouthEastDivision
6
9
178
ಮೈಕೋಲೇಔಟ್ ಪೊಲೀಸ್ ಠಾಣೆ Mico Layout Police Station retweeted
“ಡಿಜಿಟಲ್‌ ಅರೆಸ್ಟ್” ಎಂಬ ಸೈಬರ್‌ ವಂಚನೆಗಳಿಂದ ಜಾಗ್ರತೆ ವಹಿಸಿ! 🚨 ಪೊಲೀಸರು ಅಥವಾ ಯಾವುದೇ ತನಿಖಾ ಸಂಸ್ಥೆಗಳು ವಿಡಿಯೋ ಕಾಲ್‌ ಮೂಲಕ ಯಾರನ್ನೂ ಬಂಧಿಸುವುದಿಲ್ಲ. ಭಾರತದಲ್ಲಿ “ಡಿಜಿಟಲ್‌ ಅರೆಸ್ಟ್” ಎಂಬ ಕಾನೂನು ಅಸ್ತಿತ್ವದಲ್ಲೇ ಇಲ್ಲ. ⚠️ ವಂಚಕರು ಸಾಮಾನ್ಯವಾಗಿ: • ಪೊಲೀಸರಂತೆ ಅಥವಾ ಅಧಿಕಾರಿಗಳಂತೆ ನಟಿಸುತ್ತಾರೆ • ನಿಮ್ಮನ್ನು ಹೆದರಿಸಿ ತಕ್ಷಣ ಹಣ ವರ್ಗಾವಣೆ ಮಾಡಲು ಒತ್ತಾಯಿಸುತ್ತಾರೆ 💡 ಸುರಕ್ಷಿತವಾಗಿರಿ: • ಅಪರಿಚಿತ ಕರೆಗಳು/ವಿಡಿಯೋ ಕಾಲ್‌ಗಳಿಗೆ ನಂಬಿಕೆ ಇಡಬೇಡಿ • OTP, ಬ್ಯಾಂಕ್ ವಿವರಗಳು ಅಥವಾ ವೈಯಕ್ತಿಕ ಮಾಹಿತಿ ಹಂಚಿಕೊಳ್ಳಬೇಡಿ • ಯಾವುದೇ ಒತ್ತಡಕ್ಕೆ ಒಳಗಾಗದೆ ಕರೆಗಳನ್ನು ತಕ್ಷಣ ಕಡಿತಗೊಳಿಸಿ • ತಕ್ಷಣ ನಿಮ್ಮ ಸ್ಥಳೀಯ ಪೊಲೀಸ್‌ ಠಾಣೆಯನ್ನು ಸಂಪರ್ಕಿಸಿ • ಅಥವಾ 1930 ಸೈಬರ್‌ ಕ್ರೈಂ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಜಾಗೃತರಾಗಿ – ಸುರಕ್ಷಿತರಾಗಿ! 🔐 @DgpKarnataka @BlrCityPolice @jt_cpeastbcp #DigitalArrestScam #CyberSafety #OnlineSafety #StopCyberCrime #FraudAwareness #ThinkBeforeYouClick #SouthEastDivision
13
16
332