ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ ಸೇರಿದಂತೆ ಇತರೆ ಅಗತ್ಯ ದಾಖಲೆಗಳನ್ನು ಪಡೆಯಲು ನಾಡಕಚೇರಿಗೆ ಭೇಟಿ ನೀಡುವ ಅವಶ್ಯಕತೆ ಇಲ್ಲ. ಸಾರ್ವಜನಿಕರ ಅನುಕೂಲಕ್ಕಾಗಿ ಎಲ್ಲಾ ಗ್ರಾ.ಪಂ ಬಾಪೂಜಿ ಸೇವಾ ಕೇಂದ್ರಗಳಲ್ಲಿ ನಾಡಕಚೇರಿ ಸೇವೆಗಳು ಲಭ್ಯವಿದ್ದು, ನಾಗರಿಕರು ಅಗತ್ಯ ಸೇವೆಗಳನ್ನು ಪಡೆಯಬಹುದು.
#Bapuji_Seva_Kendra
@eshwar_khandre
ಕೊಪ್ಪಳ ಜಿಲ್ಲೆ, ಗಂಗಾವತಿ ತಾಲ್ಲೂಕಿನ ಮಹಾತ್ಮ ಗಾಂಧಿ ಗ್ರಾ.ಪಂ ಆನೆಗುಂದಿ ಅರಿವು ಕೇಂದ್ರಕ್ಕೆ ಹಿಮಾಚಲ ಪ್ರದೇಶದ ಪ್ರವಾಸಿಗ ದಂಪತಿ ಭೇಟಿ ನೀಡಿ, ಅರಿವು ಕೇಂದ್ರದಲ್ಲಿನ ಸೌಲಭ್ಯಗಳು ಹಾಗೂ ಗ್ರಾಮೀಣ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾದ ವ್ಯವಸ್ಥೆ ಒದಗಿಸಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
#ArivuKendra
@eshwar_khandre
ಅಂತರರಾಷ್ಟ್ರೀಯ ಬಡತನ ನಿರ್ಮೂಲನೆ ದಿನ ದೇಶದಲ್ಲಿ ಬಡತನ ನಿರ್ಮೂಲನೆಗಾಗಿ ಎಲ್ಲರೂ ಕೈ ಜೋಡಿಸೋಣ, ನೆಮ್ಮದಿ ಹಾಗೂ ಸಮೃದ್ಧಿ ಗ್ರಾಮವಾಗಿಸೋಣ.
#RDPR #International_Day_for_the_Eradication_of_Poverty #PovertyEradication
ವಿಶ್ವ ಕೈತೊಳೆಯುವ ದಿನ
ಸ್ವಚ್ಛ ಕೈಗಳು - ಸುರಕ್ಷಿತ ದಿನಗಳು.
#RDPR #InternationalHandWashingDay #Handwash
@eshwar_khandre @rdwsd_gok
ಗ್ರಾಮೀಣ ಪ್ರದೇಶಗಳಲ್ಲಿ ಆತ್ಮಹತ್ಯೆ ಪ್ರಕರಣಗಳನ್ನು ತಡೆಯಲು ಮಾನಸಿಕ ಆರೋಗ್ಯ ಸುಧಾರಣೆ ಮತ್ತು ಆತ್ಮಹತ್ಯೆ ತಡೆಗಟ್ಟುವ ಉದ್ದೇಶದಿಂದ 'ಸುರಕ್ಷಾ' (Project Suraksha) ಎಂಬ ವಿಶೇಷ ಯೋಜನೆಯನ್ನು ಪ್ರಾಯೋಗಿಕವಾಗಿ, ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ 32 ಮಹಾತ್ಮ ಗಾಂಧಿ ಗ್ರಾ.ಪಂ ಜಾರಿ ಮಾಡಲಾಗಿದೆ.
@eshwar_khandre
ಮುಲ್ಕಿ ತಾಲ್ಲೂಕಿನ ಕೆಮ್ರಾಲ್‌ನಲ್ಲಿ ಗ್ರಾ. ಪಂ. ಮರುಬಳಕೆಗೆ ಯೋಗ್ಯವಲ್ಲದ ತ್ಯಾಜ್ಯಗಳಿಂದ ಇಂಧನ ಪೆಲೆಟ್‌ಗಳನ್ನು ತಯಾರಿಸುವ ಘಟಕವನ್ನು ಆರಂಭಿಸಿದ್ದು, ತ್ಯಾಜ್ಯ ನಿರ್ವಹಣೆಗೆ ಪರಿಣಾಮಕಾರಿ ಪರಿಹಾರ ಕಲ್ಪಿಸುವುದರ ಜೊತೆಗೆ, ಇಂಧನ ಪೆಲೆಟ್‌ಗಳ ಮಾರಾಟದ ಮೂಲಕ ಗ್ರಾಮ ಪಂಚಾಯತಿಗೆ ಆದಾಯದ ಮೂಲವನ್ನೂ ಸೃಷ್ಟಿಸಿದೆ.
youtu.be/Zzsj7TpHDf4
ಅಂತರರಾಷ್ಟ್ರೀಯ ಹೆಣ್ಣು ಮಕ್ಕಳ ದಿನ
ಹೆಣ್ಣು ಮಕ್ಕಳ ಸುರಕ್ಷತೆ, ಶಿಕ್ಷಣ, ಬಾಲ್ಯವಿವಾಹ ವಿರೋಧ ಹಾಗೂ ಭದ್ರತೆ ಕುರಿತು ಜನರಲ್ಲಿ ಜಾಗೃತಿ ಮೂಡಿಸೋಣ.
#RDPR #internationalgirlchildday #girlchildeducation
ಬೀದರ್ ತಾಲ್ಲೂಕಿನ ಮಹಾತ್ಮ ಗಾಂಧಿ ಗ್ರಾ.ಪಂ ಮಂದಕನಳ್ಳಿಯಲ್ಲಿ ಸುಸಜ್ಜಿತ ಮತ್ತು ಆಧುನಿಕ ಅಂಗನವಾಡಿ ಕೇಂದ್ರ ನಿರ್ಮಾಣ ಮಾಡಲಾಗಿದೆ. ಉತ್ತಮ ಕಲಿಕೆಯ ಜತೆಗೆ ಮಕ್ಕಳ ಕಲಿಕಾ ಸಾಮಾಗ್ರಿಗಳು, ಗುಣಮಟ್ಟದ ಆಹಾರ ಸೇರಿದಂತೆ ಅಗತ್ಯ ಸೌಕರ್ಯಗಳನ್ನು ಅಂಗನವಾಡಿಯಲ್ಲಿ ಕಲ್ಪಿಸಲಾಗಿದ್ದು, ಈ ಕೇಂದ್ರ ಮಕ್ಕಳ ಮೆಚ್ಚಿನ ತಾಣವಾಗಿದೆ.
@eshwar_khandre
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರಾದ ಶ್ರೀ @eshwar_khandre ರವರ ಅಧ್ಯಕ್ಷತೆಯಲ್ಲಿ ಚಿಕ್ಕಮಗಳೂರಿನ ಜಿಲ್ಲಾ ಪಂಚಾಯತಿ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ವಿಬಿ-ಜಿ ರಾಮ್ ಜಿ ಯೋಜನೆ, ಬರಗಾಲದ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಪೂರೈಕೆ,
1/2
ಗ್ರಾಮೀಣ ಭಾಗದ ಸುಸ್ಥಿರ ಅಭಿವೃದ್ಧಿಗೆ ಸಂಬಂಧಿಸಿದ ಪ್ರಗತಿ ಹಾಗೂ ಅನುಷ್ಠಾನದ ಕುರಿತು ಅಧಿಕಾರಿಗಳೊಂದಿಗೆ ಸಮಗ್ರವಾಗಿ ಚರ್ಚಿಸಲಾಯಿತು. ಸಭೆಯಲ್ಲಿ ಪಂಚಾಯತ್ ರಾಜ್ ಆಯುಕ್ತರಾದ ಶ್ರೀ. ಪಾಟೀಲ್ ಯಲಗೌಡ ಶಿವನಗೌಡ ಹಾಗೂ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. 2/2
#RDPR #GramPanchayat #RuralDevelopment
ಬಳ್ಳಾರಿ ಜಿಲ್ಲೆ, ಕುರುಗೋಡು ತಾಲ್ಲೂಕಿನ ಮಹಾತ್ಮ ಗಾಂಧಿ ಗ್ರಾ .ಪಂ ಘನತಾಜ್ಯ ನಿರ್ವಹಣಾ ಘಟಕದಲ್ಲಿ ಕೆಲಸ ನಿರ್ವಹಿಸುತ್ತಿರುವ ಸ್ವಚ್ಛತಾ ಕಾರ್ಮಿಕರಿಗೆ ಆರೋಗ್ಯ ಹಿತದೃಷ್ಟಿಯಿಂದ ಆರೋಗ್ಯ ಕಾರ್ಡ್‌ಗಳನ್ನು ಕಾರ್ಯನಿರ್ವಾಹಕ ಅಧಿಕಾರಿಯವರಾದ ಶ್ರೀ ಪಂಪಾಪತಿ ಹಿರೇಮಠ ರವರು ವಿತರಿಸಿದರು.
#RDPR #SanitaryWorkers
@eshwar_khandre
ಮಾನ್ಯ ಇಲಾಖಾ ಸಚಿವರಾದ ಶ್ರೀ @eshwar_khandre ರವರ ಅಧ್ಯಕ್ಷತೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕರ್ನಾಟಕ ಸರ್ಕಾರ ಹಾಗೂ National Gallery of Modern Art, Bengaluru ಯೊಂದಿಗೆ ಅರಿವು ಕೇಂದ್ರ ಬಲವರ್ಧನೆಗೆ ಹಾಗೂ ಕಲೆ ಮತ್ತು ಶಿಕ್ಷಣ ಕಾರ್ಯಕ್ರಮವನ್ನು ವಿಸ್ತರಿಸಲು ಒಡಂಬಡಿಕೆಗೆ ವಿನಿಮಯ ಮಾಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಸರ್ಕಾರದ ಕಾರ್ಯದರ್ಶಿಗಳಾದ (ಪಂ.ರಾಜ್.) ಶ್ರೀ ರಂದೀಪ್ ಡಿ., ಪಂಚಾಯತ್ ರಾಜ್ ಆಯುಕ್ತರಾದ ಶ್ರೀ. ಪಾಟೀಲ್ ಯಲಗೌಡ ಶಿವನಗೌಡ ಹಾಗೂ ರಾಷ್ಟ್ರೀಯ ಆಧುನಿಕ ಕಲಾ ಗ್ಯಾಲರಿ (NGMA) ನಿರ್ದೇಶಕರಾದ ಶ್ರೀಮತಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಉಪಸ್ಥಿತರಿದ್ದರು.
#RDPR #nationalgalleryofmodernart #ArivuKendra
ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳ ನೇಮಕಾತಿ ನಿಷೇಧ ಮತ್ತು ಅವರ ಪುನರ್ವಸತಿ ಕಾಯ್ದೆ, 2013’ರ ಕುರಿತು ಜಾಗೃತಿ.
ಮ್ಯಾನುಯಲ್ ಸ್ಕ್ಯಾವೆಂಜರ್‌ಗಳು ಕಂಡುಬಂದಲ್ಲಿ ಅಥವಾ ಇಂತಹ ಪ್ರಕರಣಗಳು ಗಮನಕ್ಕೆ ಬಂದಲ್ಲಿ, ಪಂಚಮಿತ್ರ ಸಹಾಯವಾಣಿ: 8277506000 ಕರೆ ಮಾಡಿ.
#RDPR #StopManualScavenging #SanitationWorkers
@eshwar_khandre
ಬಸ್ ತಂಗುದಾಣವೇ ಪುಸ್ತಕ ಗೂಡು – ಓದಿನತ್ತ ಗ್ರಾಮಸ್ಥರ ಹೆಜ್ಜೆ!
ಬಸ್ ತಂಗುದಾಣವನ್ನು ಪುಸ್ತಕದ ಗೂಡಾಗಿ ಪರಿವರ್ತಿಸಿ, ಗ್ರಾಮದ ಜನರಲ್ಲಿ, ಮಕ್ಕಳಲ್ಲಿ ಪುಸ್ತಕಗಳ ಅರಿವನ್ನು ಮೂಡಿಸಿ, ಓದಿನ ಕಡೆಗೆ ಸೆಳೆಯುವ ವಿಶಿಷ್ಟ ಪ್ರಯತ್ನವಾಗಿದೆ
@eshwar_khandre @GramKarnataka
ಕೊಪ್ಪಳ ಜಿಲ್ಲೆ, ಕುಷ್ಟಗಿ ತಾಲ್ಲೂಕಿನ ಮಹಾತ್ಮ ಗಾಂಧಿ ಗ್ರಾಮ ಪಂಚಾಯತಿ ಹಿರೇಗೊಣ್ಣಗರ ವ್ಯಾಪ್ತಿಯ ಮೂಗನೂರು ಗ್ರಾಮದ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಲ್ಲಿ ಪುಸ್ತಕ ಓದುವ ಹವ್ಯಾಸ ಬೆಳಸಲು ‘ಪುಸ್ತಕ ಗೂಡು’ ನಿರ್ಮಿಸಲಾಗಿದೆ.
#RDPR #RuralDevelopment #GramPanchayat #PustakaGudu
ನಿಮ್ಮ ಮನೆಗೆ ನಲ್ಲಿ ನೀರು ಸಂಪರ್ಕ ಪಡೆಯಲು ಹತ್ತಿರದ ಮಹಾತ್ಮ ಗಾಂಧಿ ಗ್ರಾಮ ಪಂಚಾಯತಿ ಬಾಪೂಜಿ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಅಥವಾ bsk.karnataka.gov.in ತಂತ್ರಾಶದಲ್ಲಿ ಅರ್ಜಿ ಸಲ್ಲಿಸಿ. ಹೆಚ್ಚಿನ ಮಾಹಿತಿಗಾಗಿ ಪಂಚಮಿತ್ರ ಸಹಾಯವಾಣಿ ಸಂಖ್ಯೆ: 8277506000ಗೆ ಕರೆ ಮಾಡಿ.
#RDPR #DrinkingWater
@eshwar_khandre @rdwsd_gok
ಉಡುಪಿ ಜಿಲ್ಲೆ, ಬ್ರಹ್ಮಾವರ ತಾಲ್ಲೂಕಿನ ಮಹಾತ್ಮ ಗಾಂಧಿ ಗ್ರಾಮ ಪಂಚಾಯತಿ ಹಾವಂಜೆಯಲ್ಲಿ 2026-27ನೇ ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಫಲಾನುಭವಿಗಳ ಸಭೆಯಲ್ಲಿ ಗ್ರಾಮ ಪಂಚಾಯತಿ ಸ್ವಂತ ಸಂಪನ್ಮೂಲದಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅಭ್ಯುದಯಕ್ಕಾಗಿ ಪ್ರೋತ್ಸಾಹಧನ, ಹಳೆ ಮನೆ ದುರಸ್ತಿಗಾಗಿ ಧನಸಹಾಯ ಹಾಗೂ









































