ಕೇವಲ 12-13 ವರ್ಷಗಳಲ್ಲಿ 50 ಕೋಟಿ ಭಾರತೀಯರು ಬಡತನವನ್ನು ಸೋಲಿಸಿದ್ದಾರೆ ಎಂಬ ವಿಶ್ವಬ್ಯಾಂಕ್‌ನ ಇತ್ತೀಚಿನ ವರದಿ ಪ್ರತಿಯೊಬ್ಬರಿಗೂ ಹೆಮ್ಮೆಯ ವಿಷಯ!
70ರ ದಶಕದಲ್ಲಿ ದೇಶದ ಜನಸಂಖ್ಯೆ 50 ಕೋಟಿ ಇದ್ದಾಗ ಬಡತನ ತೊಲಗಿಸಿ ಎಂಬ ಘೋಷಣೆ ನೀಡಲಾಗಿತ್ತು. ಆಗಲೂ ಇದನ್ನು ಸಾಧಿಸಬಹುದಿತ್ತು, ಆದರೆ ಅಂದಿನ ನೀತಿ ಮತ್ತು ನಿಯತ್ತಿನ ಕೊರತೆಯಿಂದ ಅದು ಸಾಧ್ಯವಾಗಲಿಲ್ಲ.
- ಪ್ರಧಾನಿ ಶ್ರೀ @narendramodi
#ViksitBharat
ಪ್ರಧಾನಮಂತ್ರಿ ಶ್ರೀ @narendramodi ಜಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ದೇಶದ ವಾಯುಯಾನ ಕ್ಷೇತ್ರದಲ್ಲಿ ಮಹತ್ವದ ಪ್ರಗತಿ ಸಾಧಿಸಲಾಗಿದೆ.
2014ರಲ್ಲಿ ದೇಶದಲ್ಲಿದ್ದ 74 ವಿಮಾನ ನಿಲ್ದಾಣಗಳ ಸಂಖ್ಯೆ 2026ರಲ್ಲಿ 166ಕ್ಕೆ ಏರಿಕೆಯಾಗಿದ್ದು, ವಿಮಾನ ನಿಲ್ದಾಣಗಳ ಸಂಖ್ಯೆ ಎರಡು ಪಟ್ಟು ಹೆಚ್ಚಾಗಿದೆ.
ಉಡಾನ್ (UDAN) ಯೋಜನೆಯ ಮೂಲಕ ಸಾಮಾನ್ಯ ಜನರಿಗೂ ವಿಮಾನ ಪ್ರಯಾಣದ ಕನಸು ನನಸಾಗುತ್ತಿದೆ. ಸಣ್ಣ ನಗರಗಳನ್ನು ಪ್ರಮುಖ ಆರ್ಥಿಕ ಮತ್ತು ಪ್ರವಾಸಿ ಕೇಂದ್ರಗಳೊಂದಿಗೆ ಸಂಪರ್ಕಿಸುವ ಮೂಲಕ ಸಮಯದ ಉಳಿತಾಯದ ಜೊತೆಗೆ ವ್ಯಾಪಾರ, ಪ್ರವಾಸೋದ್ಯಮ ಮತ್ತು ಉದ್ಯೋಗಾವಕಾಶಗಳಿಗೂ ಹೊಸ ದಾರಿಗಳು ತೆರೆದಿವೆ.
ಸಂಪರ್ಕದಿಂದ ಸಮೃದ್ಧಿಯತ್ತ, ಅಭಿವೃದ್ಧಿಯಿಂದ ವಿಕಸಿತ ಭಾರತದತ್ತ.🛫
#UDAN #ViksitBharat
ಬಿಜೆಪಿ ಒಬಿಸಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಮಾಜಿ ಸಚಿವರು ಹಾಗೂ ಆತ್ಮೀಯರಾದ ಶ್ರೀ ಪ್ರಮೋದ್ ಮಧ್ವರಾಜ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ತಮ್ಮ ಅಪಾರ ಸಂಘಟನಾತ್ಮಕ ಅನುಭವ, ಬದ್ಧತೆ ಹಾಗೂ ಕ್ರಿಯಾಶೀಲತೆಯ ಮೂಲಕ ಹಿಂದುಳಿದ ವರ್ಗಗಳ ಸಬಲೀಕರಣಕ್ಕೆ ಮತ್ತು ಪಕ್ಷದ ಸಂಘಟನೆಯನ್ನು ಇನ್ನಷ್ಟು ಬಲಪಡಿಸಲು ಮಹತ್ವದ ಕೊಡುಗೆ ನೀಡಲಿದ್ದೀರಿ ಎಂಬ ವಿಶ್ವಾಸವಿದೆ.
ತಮಗೆ ಲಭಿಸಿರುವ ಈ ಹೊಸ ಜವಾಬ್ದಾರಿಯಲ್ಲಿ ಯಶಸ್ಸು ದೊರೆಯಲಿ ಹಾಗೂ ತಮ್ಮ ಸೇವೆ ಪಕ್ಷ ಮತ್ತು ಸಮಾಜಕ್ಕೆ ಮತ್ತಷ್ಟು ಶಕ್ತಿ ತುಂಬಲಿ ಎಂದು ಹಾರೈಸುತ್ತೇನೆ.
@BJP4Karnataka @PMadhwaraj @BJP4OBCMorcha @BJP4India
ಅನ್ನದಾತರಿಗೆ ಪ್ರಧಾನಿ ಶ್ರೀ @narendramodi ಅವರ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್!
ಜಾಗತಿಕ ಯುದ್ಧದ ನಡುವೆಯೂ ರಸಗೊಬ್ಬರ ಪೂರೈಕೆಯಲ್ಲಿ ರೈತರಿಗೆ ತೊಂದರೆಯಾಗದಂತೆ ಕೇಂದ್ರ ಸರ್ಕಾರ ಐತಿಹಾಸಿಕ ಹೆಜ್ಜೆ ಇಟ್ಟಿದೆ. ರೈತರ ಬೆನ್ನಿಗೆ ಮೋದಿ ಸರ್ಕಾರ ಸದಾ ನಿಲ್ಲುತ್ತದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ರಸಗೊಬ್ಬರ ವಿತರಣೆಯಲ್ಲಿ ಸಂಪೂರ್ಣ ಪಾರದರ್ಶಕತೆ ತರಲು ಕೇಂದ್ರ ಸರ್ಕಾರ ಹೊಸ ಆ್ಯಪ್ ಬಿಡುಗಡೆ ಮಾಡಿದೆ. ಎಂತಹದ್ದೇ ಸಂಕಷ್ಟ ಬಂದರೂ ರೈತರ ಹಿತಕಾಯಲು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಸರ್ಕಾರ ಸದಾ ಸಿದ್ಧವಿದೆ ಎಂಬುದಕ್ಕೆ ಇದೇ ಸಾಕ್ಷಿ.
#FarmersFirst #FertilizerApp
ನಾಡಿನ ಸಮಸ್ತ ಜನತೆಗೆ ತುಳಸಿ ಹಬ್ಬದ ಹಾರ್ದಿಕ ಶುಭಾಶಯಗಳು.
ಸಂಸ್ಕೃತಿಯ ಸಂರಕ್ಷಣೆ, ಸಂಪ್ರದಾಯಗಳ ಗೌರವ ಮತ್ತು ಆಧ್ಯಾತ್ಮಿಕ ಮೌಲ್ಯಗಳ ಪಾಲನೆಯೇ ನಮ್ಮ ಸಮಾಜದ ನಿಜವಾದ ಶಕ್ತಿ. ತುಳಸಿ ಮಾತೆಯ ದಿವ್ಯ ಆಶೀರ್ವಾದದಿಂದ ಪ್ರತಿಯೊಬ್ಬರ ಬದುಕಿನಲ್ಲಿ ಆರೋಗ್ಯ, ನೆಮ್ಮದಿ, ಸುಖ-ಸಮೃದ್ಧಿ ನೆಲೆಸಲಿ.
#tulasipooja
ಸಮಸ್ತ ಮೀನುಗಾರ ಸಹೋದರ ಮತ್ತು ಸಹೋದರಿಯರಿಗೆ ವಿಶ್ವ ಮೀನುಗಾರಿಕೆ ದಿನದ ಶುಭಾಶಯಗಳು.
ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ, ಮೀನುಗಾರರ ಬದುಕಿನ ಭದ್ರತೆ ಮತ್ತು ಅವರ ಕುಟುಂಬಗಳ ಸಮೃದ್ಧಿಯೇ ನಮ್ಮ ಸಂಕಲ್ಪವಾಗಲಿ. ಮೀನುಗಾರ ಸಮುದಾಯದ ಕೊಡುಗೆ ಸದಾ ಸ್ಮರಣೀಯ.
#WorldFisheriesDay
ವಿಶ್ವ ಕಂಡ ಶ್ರೇಷ್ಠ ಭೌತಶಾಸ್ತ್ರಜ್ಞ, ನೊಬೆಲ್ ಪ್ರಶಸ್ತಿ ಪಡೆದ ಪ್ರಪ್ರಥಮ ಭಾರತೀಯ ವಿಜ್ಞಾನಿ, ಹಲವಾರು ಯುವ ವಿಜ್ಞಾನಿಗಳಿಗೆ ಸ್ಪೂರ್ತಿಯಾಗಿರುವ ಸರ್ ಸಿ.ವಿ. ರಾಮನ್ ಅವರ ಪುಣ್ಯಸ್ಮರಣೆಯಂದು ಶತ ಶತ ನಮನಗಳು.
#cvraman
ಇಂದು ತುಮಕೂರಿನ ಪವಿತ್ರ ಶ್ರೀ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಮಠದ ಶಾಲಾ ಮಕ್ಕಳೊಂದಿಗೆ ಆತ್ಮೀಯವಾಗಿ ಸಂವಾದ ನಡೆಸಿ, ಅವರೊಂದಿಗೆ ಕೆಲಕಾಲ ಸಂತೋಷದ ಕ್ಷಣಗಳನ್ನು ಕಳೆದೆನು.
ಮಕ್ಕಳ ಮುಗ್ಧ ಮಾತುಗಳು, ಅವರ ಉತ್ಸಾಹ ಮತ್ತು ಕಲಿಯುವ ಆಸಕ್ತಿ ಮನಸ್ಸಿಗೆ ವಿಶೇಷ ಸಂತೋಷ ನೀಡಿತು. ಮಕ್ಕಳೊಂದಿಗೆ ಕಳೆದ ಈ ಕ್ಷಣಗಳು ಸದಾ ಸ್ಮರಣೀಯ.
@BJP4Karnataka @BJP4India @narendramodi
Heartfelt condolences to Hon’ble Uttar Pradesh Chief Minister Shri @myogiadityanath Ji on the sad demise of his revered mother, Smt. Savitri Devi Ji.
May God grant strength to him and his family to bear this irreparable loss. May the departed soul attain eternal peace.
Om Shanti 🙏
ಬಸವಣ್ಣ ಅವರು ಮಹಾನ್ ಮಾನವತಾವಾದಿಯಾಗಿದ್ದು, ಅವರ ತತ್ವಗಳು ಸಾರ್ವಕಾಲಿಕ ಪ್ರಸ್ತುತವಾಗಿವೆ. ಅವರು ವಿಶ್ವಮಾನವರಾಗಿದ್ದು, ಅವರ ವಿಚಾರಗಳನ್ನು ಎಲ್ಲರೂ ಗೌರವಿಸುತ್ತಾರೆ.
ಬಸವಣ್ಣನವರ ಕುರಿತು ಲೇಖಕ ರವಿ ಹಂಜ್ ಅವರು ಬರೆದಿರುವ ಪುಸ್ತಕದ ಹೆಸರು ಬಸವ ಮಂಟಪ ಎಂದಿದ್ದರೂ, ಅವರು ಪುಸ್ತಕದಲ್ಲಿ ಬಸವಣ್ಣನವರ ಬಗ್ಗೆ ಅವಹೇಳನಕಾರಿಯಾಗಿ ಬರೆದಿರುವುದು ಇಡೀ ಮನುಕುಲಕ್ಕೆ ಅವಮಾನ ಮಾಡಿದಂತೆ.
ಲೇಖಕರು ಸಂಶೋಧನೆಯ ಹೆಸರಿನಲ್ಲಿ ಪೂರ್ವಾಗ್ರಹಪೀಡಿತರಾಗಿ ಬರೆದಿದ್ದು, ಇದನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. ಅವರು ಈ ಬಗ್ಗೆ ಬಹಿರಂಗವಾಗಿ ಕ್ಷಮೆ ಕೇಳಬೇಕು ಮತ್ತು ಪುಸ್ತಕವನ್ನು ವಾಪಸ್ ಪಡೆಯಬೇಕು. ಸರ್ಕಾರ ಲೇಖಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು.
ಪ್ರಧಾನಿ ಶ್ರೀ @narendramodi ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಕಳೆದ 12 ವರ್ಷಗಳಲ್ಲಿ ಸುಮಾರು 50 ಕೋಟಿ ಭಾರತೀಯರು ಬಡತನದಿಂದ ಹೊರಬಂದಿದ್ದಾರೆ. ಬಡವರ ಬದುಕಿನಲ್ಲಿ ಹೊಸ ಭರವಸೆ, ದೇಶದ ಅಭಿವೃದ್ಧಿಗೆ ಹೊಸ ವೇಗ!
ಮೋದಿ ಅವರ ನಾಯಕತ್ವ, ವಿಕಸಿತ ಭಾರತದ ಸಂಕಲ್ಪ!
#PMNarendraModi #ViksitBharat
Warm birthday greetings to Hon’ble Union Minister Shri @KirenRijiju Ji.
May you be blessed with good health, happiness and continued success in your dedicated service to the nation. Wishing you many more years of meaningful contributions to Bharat.
ದೇಶದ ಜನರೊಂದಿಗೆ ಹೃದಯದ ಬೆಸುಗೆ ಬೆಸೆದುಕೊಂಡಿರುವ ನಾಯಕತ್ವಕ್ಕೆ ಜನರ ಪ್ರೀತಿ, ವಿಶ್ವಾಸ ಮತ್ತು ಆಶೀರ್ವಾದವೇ ದೊಡ್ಡ ಶಕ್ತಿ!
ಪ್ರಧಾನಮಂತ್ರಿ ಶ್ರೀ @narendramodi ಅವರ ಮೇಲಿನ ಜನರ ಅಪಾರ ಅಭಿಮಾನ, ಆತ್ಮೀಯತೆ ಮತ್ತು ಪ್ರೀತಿ ಈ ಹೃದಯಸ್ಪರ್ಶಿ ಕ್ಷಣಗಳಲ್ಲಿ ಎದ್ದು ಕಾಣುತ್ತದೆ. ಜನರ ನಡುವೆ ಬೆರೆತು, ಜನರ ಭಾವನೆಗಳಿಗೆ ಸ್ಪಂದಿಸುವ ಈ ಆತ್ಮೀಯ ಕ್ಷಣಗಳು ನಿಜಕ್ಕೂ ವಿಶೇಷ!
ಜನರ ಪ್ರೀತಿ, ಜನರ ವಿಶ್ವಾಸ – ಸದಾ ಜನರೊಂದಿಗೆ ನರೇಂದ್ರ ಮೋದಿ ಜೀ!
#ModiHaiTohMumkinHai #ModiKahinNahiJayega
ಸ್ವಾತಂತ್ರ್ಯ, ಸ್ವಾಭಿಮಾನ ಮತ್ತು ಅಪ್ರತಿಮ ಶೌರ್ಯದ ಪ್ರತೀಕವಾಗಿದ್ದ ವೀರವನಿತೆ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರು ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ಧೈರ್ಯದಿಂದ ಹೋರಾಡಿ, ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೊಸ ಶಕ್ತಿ ಮತ್ತು ಸ್ಫೂರ್ತಿ ತುಂಬಿದ ಮಹಾನ್ ಕ್ರಾಂತಿಕಾರಿ.
ವೀರವನಿತೆ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು.
#JhansiRaniLakshmiBai
🇮🇳 Your Ideas, Our Nation’s Progress!
Be a part of Prime Minister Shri @narendramodi Ji’s Mann Ki Baat on 29th November 2026.
Share your thoughts, innovative ideas and valuable suggestions to contribute towards building a stronger and more developed India.
📞 Call: 1800-11-7800
🌐 Visit: mygov.in/
Last date to share your ideas: 27th November 2026.
Let your voice shape the vision of Viksit Bharat!
#MannKiBaat #ViksitBharat
ಬೆಳೆ ಖರೀದಿಗಾಗಿ ₹27.8 ಲಕ್ಷ ಕೋಟಿ ವ್ಯಯಿಸಿದೆ ಮೋದಿ ಸರ್ಕಾರ !
ಕಳೆದ 12 ವರ್ಷಗಳಲ್ಲಿ ರೈತರಿಗೆ ಖಚಿತ ಆದಾಯವನ್ನು ಖಾತ್ರಿಪಡಿಸಲು ಮೋದಿ ಸರ್ಕಾರವು ಕನಿಷ್ಠ ಬೆಂಬಲ ಬೆಲೆ (MSP) ಆಧಾರಿತ ಖರೀದಿ ವ್ಯವಸ್ಥೆಯನ್ನು ಬಲಪಡಿಸಿದೆ.
ನಿರಂತರ ನೀತಿ ಬೆಂಬಲ ಮತ್ತು ರೈತರ ಕಲ್ಯಾಣದ ಬದ್ಧತೆಯೊಂದಿಗೆ ಮೋದಿ ಸರ್ಕಾರವು ಭಾರತದ ರೈತರ ಪರವಾಗಿ ದೃಢವಾಗಿ ನಿಂತಿದ್ದು ಅವರ ಆರ್ಥಿಕ ಭವಿಷ್ಯವನ್ನು ಭದ್ರಪಡಿಸುತ್ತಿದೆ.
#ModiWithFarmers
ಬುಡಕಟ್ಟು ಸಮುದಾಯವು ಪಕ್ಕಾ ಮನೆಗಳು, ವಿದ್ಯುತ್, ಶುದ್ಧ ಕುಡಿಯುವ ನೀರು ಮತ್ತು ಮೂಲಭೂತ ಸೌಕರ್ಯಗಳೊಂದಿಗೆ ಸಬಲೀಕರಣಗೊಳ್ಳುತ್ತಿದೆ !
ಪಿಎಂ-ಜನ್‌ಮನ್ ಯೋಜನೆಯಡಿಯಲ್ಲಿ 75 ದುರ್ಬಲ ಬುಡಕಟ್ಟು ಗುಂಪುಗಳಿಗೆ ₹24,104 ಕೋಟಿ ಬಜೆಟ್ ಅನುಮೋದಿಸಲಾಗಿದೆ. ಅಭಿವೃದ್ಧಿಯ ಈ ವೇಗವು ನವ ಭಾರತದ ಚಿತ್ರಣವನ್ನು ಪರಿವರ್ತಿಸುತ್ತಿದೆ.
#JanjatiyaGauravDiwas
🌾 ರೈತರ ಹಿತವೇ ಮೋದಿ ಸರ್ಕಾರದ ಸಂಕಲ್ಪ! 🇮🇳
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ₹3,000 ಬೆಲೆ ಹೊಂದಿರುವ ಒಂದು ಚೀಲ ಯೂರಿಯಾವನ್ನು ಭಾರತದ ರೈತರಿಗೆ ಕೇವಲ ₹300ಕ್ಕೆ ಒದಗಿಸುವ ಮೂಲಕ ಕೃಷಿ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ಬಲ ತುಂಬುತ್ತಿದೆ.
ಪ್ರಧಾನಮಂತ್ರಿ ಶ್ರೀ @narendramodi ಜೀ ಅವರ ನೇತೃತ್ವದ ಕೇಂದ್ರ ಸರ್ಕಾರವು ಕಳೆದ 12 ವರ್ಷಗಳಲ್ಲಿ ರೈತರಿಗೆ ಕೈಗೆಟುಕುವ ದರದಲ್ಲಿ ರಸಗೊಬ್ಬರ ಲಭ್ಯವಾಗುವಂತೆ ಮಾಡಲು ಬರೋಬ್ಬರಿ ₹16 ಲಕ್ಷ ಕೋಟಿ ವೆಚ್ಚ ಮಾಡಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಗೊಬ್ಬರದ ಬೆಲೆ ಏರಿಕೆಯಾದರೂ ಅದರ ಹೊರೆ ಅನ್ನದಾತರ ಮೇಲೆ ಬೀಳದಂತೆ ಸಬ್ಸಿಡಿ ಮೂಲಕ ರೈತರ ಹಿತವನ್ನು ಕಾಪಾಡುತ್ತಿರುವುದು ಮೋದಿ ಸರ್ಕಾರದ ರೈತಪರ ಬದ್ಧತೆಗೆ ಸಾಕ್ಷಿಯಾಗಿದೆ.
ರೈತರ ಆರ್ಥಿಕ ಸಬಲೀಕರಣ, ಕೃಷಿಯ ಸಮೃದ್ಧಿ ಮತ್ತು ಆತ್ಮನಿರ್ಭರ ಭಾರತದ ನಿರ್ಮಾಣವೇ ಪ್ರಧಾನಿ ನರೇಂದ್ರ ಮೋದಿ ಜೀ ಅವರ ಸಂಕಲ್ಪ!
#ModiWithFarmers
ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರು ಹಾಗೂ ಆತ್ಮೀಯರಾದ ಶ್ರೀ ತೇಜಸ್ವಿ ಸೂರ್ಯ ಅವರಿಗೆ ಜನ್ಮದಿನದ ಶುಭಾಶಯಗಳು.
ಭಗವಂತನ ಕೃಪಾರ್ಶೀವಾದ ತಮ್ಮ ಮೇಲೆ ಸದಾ ಇರಲಿ ಎಂದು ಹಾರೈಸುತ್ತೇನೆ, ಶುಭವಾಗಲಿ.
@Tejasvi_Surya
ನನ್ನೆಲ್ಲಾ ಪತ್ರಕರ್ತ ಮಿತ್ರರಿಗೆ ರಾಷ್ಟ್ರೀಯ ಪತ್ರಿಕಾ ದಿನದ ಹಾರ್ದಿಕ ಶುಭಾಶಯಗಳು.
ಪತ್ರಿಕಾ ಸ್ವಾತಂತ್ರ್ಯ ಮತ್ತು ಜವಾಬ್ದಾರಿಯುತ ಪತ್ರಿಕೋದ್ಯಮ ಪ್ರಜಾಪ್ರಭುತ್ವಕ್ಕೆ ಅತ್ಯಗತ್ಯವಾಗಿದ್ದು, ಸಮಾಜದ ಬೆಳವಣಿಗೆಯಲ್ಲಿ ಸಹ ಪ್ರಮುಖ ಪಾತ್ರ ನಿರ್ವಹಿಸುತ್ತದೆ.
#NationalPressDay













