🌟 ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಎನ್.ಡಿ.ಎ. ಅಭ್ಯರ್ಥಿ ಶ್ರೀ ಎ.ಪಿ. ರಂಗನಾಥ್ ಅವರಿಗೆ ಐತಿಹಾಸಿಕ ಜಯಭೇರಿ! 🌟
ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಎನ್.ಡಿ.ಎ. ಅಭ್ಯರ್ಥಿಯಾದ ಶ್ರೀ ಎ.ಪಿ. ರಂಗನಾಥ್ ಅವರು ಅಭೂತಪೂರ್ವ ಗೆಲುವು ಸಾಧಿಸಿರುವುದು ಅತ್ಯಂತ ಸಂತಸದ ಸಂಗತಿ. 💐👏
ಶಿಕ್ಷಕ ಸಮುದಾಯದ ಅಪಾರ ಬೆಂಬಲ, ವಿಶ್ವಾಸ ಹಾಗೂ ಆಶೀರ್ವಾದದಿಂದ ಐತಿಹಾಸಿಕ ಜಯ ದಾಖಲಿಸಿದ ಶ್ರೀ ಎ.ಪಿ. ರಂಗನಾಥ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಗೆಲುವಿನ ಶುಭಾಶಯಗಳು! 💐
ಈ ಗೆಲುವು ಕೇವಲ ಒಬ್ಬ ಅಭ್ಯರ್ಥಿಯ ಗೆಲುವಲ್ಲ; ಇದು ಶಿಕ್ಷಕರ ಒಗ್ಗಟ್ಟಿನ ಶಕ್ತಿ, ಅವರ ಆಶಯಗಳ ಪ್ರತಿಬಿಂಬ ಹಾಗೂ ಶಿಕ್ಷಣ ಕ್ಷೇತ್ರದ ಹಕ್ಕು ಮತ್ತು ಗೌರವಕ್ಕೆ ಸಂದ ಜಯವಾಗಿದೆ. 📚✊
ಶಿಕ್ಷಕರ ಹಕ್ಕುಗಳ ರಕ್ಷಣೆ, ಅವರ ಗೌರವದ ಹೆಚ್ಚಳ ಹಾಗೂ ಶಿಕ್ಷಣ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ವಿಧಾನ ಪರಿಷತ್ತಿನಲ್ಲಿ ತಮ್ಮ ಧ್ವನಿಯನ್ನು ಇನ್ನಷ್ಟು ಪ್ರಬಲವಾಗಿ ಮೊಳಗಿಸಿ, ಶಿಕ್ಷಕರ ನಿರೀಕ್ಷೆಗಳಿಗೆ ತಕ್ಕಂತೆ ಕಾರ್ಯನಿರ್ವಹಿಸಲಿ ಎಂದು ಹಾರೈಸುತ್ತೇನೆ.
ಈ ಚುನಾವಣೆಯಲ್ಲಿ ಹಗಲಿರುಳು ಶ್ರಮಿಸಿ, ಸಂಘಟಿತವಾಗಿ ಕಾರ್ಯನಿರ್ವಹಿಸಿ ಎನ್.ಡಿ.ಎ. ಅಭ್ಯರ್ಥಿಯ ಗೆಲುವಿಗೆ ಶ್ರಮಿಸಿದ ನನ್ನ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಎಲ್ಲಾ ಹಿರಿಯ ಮುಖಂಡರು, ಪದಾಧಿಕಾರಿಗಳು ಹಾಗೂ ಸಮಸ್ತ ಕಾರ್ಯಕರ್ತರಿಗೆ ಹೃತ್ಪೂರ್ವಕ ಧನ್ಯವಾದಗಳು ಮತ್ತು ಅಭಿನಂದನೆಗಳು. 🙏
ನಮ್ಮ ಒಗ್ಗಟ್ಟು, ಸಂಘಟನಾ ಶಕ್ತಿ ಮತ್ತು ನಿರಂತರ ಪರಿಶ್ರಮವೇ ಈ ಯಶಸ್ಸಿನ ಹಿಂದಿನ ಶಕ್ತಿ. ಮುಂದೆಯೂ ಇದೇ ಉತ್ಸಾಹದಿಂದ ಜನಸೇವೆ ಹಾಗೂ ಸಂಘಟನೆಯ ಬಲವರ್ಧನೆಗೆ ನಾವೆಲ್ಲರೂ ಬದ್ಧರಾಗೋಣ.
💐 ಶ್ರೀ ಎ.ಪಿ. ರಂಗನಾಥ್ ಅವರಿಗೆ ಮತ್ತೊಮ್ಮೆ ಹೃತ್ಪೂರ್ವಕ ಅಭಿನಂದನೆಗಳು!
ಜಯವಾಗಲಿ ಶಿಕ್ಷಕ ಸಮುದಾಯಕ್ಕೆ!
ಜಯವಾಗಲಿ ಎನ್.ಡಿ.ಎ.! 🚩
#APRanganath #BengaluruTeachersConstituency #MLCElection #NDA #byrathibasavaraj
🚧 ಗುಬ್ಬಿ ಕ್ರಾಸ್‌ನಿಂದ ವಡ್ಡರಪಾಳ್ಯ ಸಿಗ್ನಲ್‌ವರೆಗೆ ವೈಟ್ ಟ್ಯಾಪಿಂಗ್ ರಸ್ತೆ ಕಾಮಗಾರಿ ತ್ವರಿತಗೊಳಿಸಲು ಕ್ರಮ!
ಇಂದು ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಶ್ರೀ ಕೃಷ್ಣ ಬೈರೇಗೌಡ ಅವರೊಂದಿಗೆ, ಹೆಣ್ಣೂರು–ಬಾಗಲೂರು ರಸ್ತೆಗೆ ಹೊಂದಿಕೊಂಡಿರುವ, ನನ್ನ ಕ್ಷೇತ್ರದ ವ್ಯಾಪ್ತಿಗೆ ಬರುವ ಗುಬ್ಬಿ ಕ್ರಾಸ್‌ನಿಂದ ವಡ್ಡರಪಾಳ್ಯ ಸಿಗ್ನಲ್‌ವರೆಗೆ ನಡೆಯುತ್ತಿರುವ ವೈಟ್ ಟ್ಯಾಪಿಂಗ್ ರಸ್ತೆ ಕಾಮಗಾರಿಯನ್ನು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಲಾಯಿತು.
✈️ ವಿಮಾನ ನಿಲ್ದಾಣ ಸಂಪರ್ಕಕ್ಕೆ ಪ್ರಮುಖ ರಸ್ತೆ – ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರದತ್ತ ಹೆಜ್ಜೆ!
ಈ ರಸ್ತೆಯು ಶ್ರೀ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳಲ್ಲಿ ಒಂದಾಗಿದೆ. ಬೆಂಗಳೂರು ನಗರ ವೇಗವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ನಮ್ಮ ಕ್ಷೇತ್ರದಲ್ಲಿ ಅಪಾರ್ಟ್‌ಮೆಂಟ್‌ಗಳ ಸಂಖ್ಯೆ ಹೆಚ್ಚಾಗಿದ್ದು, ಇಲ್ಲಿನ ನಿವಾಸಿಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಪ್ರತಿನಿತ್ಯ ತೀವ್ರ ವಾಹನ ದಟ್ಟಣೆ ಮತ್ತು ಸಂಚಾರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ರಸ್ತೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವಂತೆ ಸಚಿವರಲ್ಲಿ ಮನವಿ ಮಾಡಲಾಯಿತು. ಇದೇ ಸಂದರ್ಭದಲ್ಲಿ ಕಾಮಗಾರಿಯ ಪ್ರಗತಿ, ಸಂಚಾರ ದಟ್ಟಣೆ ನಿವಾರಣೆ ಹಾಗೂ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಮಹತ್ವದ ಸಲಹೆಗಳನ್ನು ಸಚಿವರೊಂದಿಗೆ ಚರ್ಚಿಸಲಾಯಿತು.
ನಮ್ಮ ಮನವಿಗೆ ಸ್ಪಂದಿಸಿದ ಸಚಿವರು, ಈ ರಸ್ತೆಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿ, ಸಾರ್ವಜನಿಕರ ಸಂಚಾರ ಸಮಸ್ಯೆಗಳನ್ನು ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಜನರ ಸುಗಮ ಸಂಚಾರವೇ ನಮ್ಮ ಆದ್ಯತೆ!
ಈ ರಸ್ತೆ ಕಾಮಗಾರಿ ಪೂರ್ಣಗೊಂಡಲ್ಲಿ, ಈ ಭಾಗದ ನಿವಾಸಿಗಳಿಗೆ ಹಾಗೂ ಪ್ರತಿನಿತ್ಯ ಸಂಚರಿಸುವ ಸಾವಿರಾರು ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗುವ ನಿರೀಕ್ಷೆಯಿದೆ. ಮುಂದಿನ ಕೆಲವೇ ತಿಂಗಳುಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ಸಂಚಾರ ದಟ್ಟಣೆಯನ್ನು ಗಣನೀಯವಾಗಿ ಕಡಿಮೆ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವ ವಿಶ್ವಾಸವಿದೆ.
ಈ ಸಂದರ್ಭದಲ್ಲಿ GBAಯ ಹಿರಿಯ ಅಧಿಕಾರಿಗಳು, ಸಂಬಂಧಪಟ್ಟ ಸ್ಥಳೀಯ ಅಧಿಕಾರಿಗಳು, ಪ್ರಮುಖ ಮುಖಂಡರುಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಜನರ ಸಮಸ್ಯೆಗಳಿಗೆ ಸ್ಪಂದನೆ – ಅಭಿವೃದ್ಧಿಯೇ ನಮ್ಮ ಸಂಕಲ್ಪ!
#KRpura #RoadDevelopment #WhiteTopping #TrafficRelief #Byrathibasavaraja
ಕಲ್ಕೆರೆಯ ಎನ್.ಆರ್.ಐ ಬಡಾವಣೆ ಮೊದಲನೇ ಹಂತದ (NRI LAYOUT PHASE–1) ರಾಜಕಾಲುವೆಯ ಬೃಹತ್ ಮಳೆನೀರು ಕಾಲುವೆ ನಿರ್ಮಾಣ ಕಾಮಗಾರಿಗೆ ಇಂದು ಗುದ್ದಲಿಪೂಜೆ ನೆರವೇರಿಸಲಾಯಿತು.
ಸ್ಥಳೀಯರ ಬಹುದಿನಗಳ ಅಗತ್ಯಕ್ಕೆ ಸ್ಪಂದಿಸಿ, ಬಡಾವಣೆಯ ಮೂಲಸೌಕರ್ಯ ಅಭಿವೃದ್ಧಿ ವ್ಯವಸ್ಥೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಈ ಕಾಮಗಾರಿಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳು, ಊರಿನ ಪ್ರಮುಖ ಮುಖಂಡರು, ಅಸೋಸಿಯೇಷನ್ ಪದಾಧಿಕಾರಿಗಳು, ಬಡಾವಣೆಯ ನಿವಾಸಿಗಳು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಜನರ ಆಶಯಗಳಿಗೆ ಸ್ಪಂದನೆ, ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನಮ್ಮ ಸಂಕಲ್ಪ!
#KRpura #NriLayout #Development #PublicWorks #byrathibasavaraj
ಸಮಸ್ತ ನಾಡಿನ ಜನತೆಗೆ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಷಯಗಳು.
#valmikijayanthi2026
ಗೆದ್ದಲಹಳ್ಳಿಯಿಂದ ಕೈಗೊಳ್ಳಬೇಕಾಗಿರುವ ವೈಟ್ ಟ್ಯಾಪಿಂಗ್ ರಸ್ತೆ ಕಾಮಗಾರಿಯ ಕುರಿತು ಇಂದು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ, ಕಾಮಗಾರಿಯ ಪ್ರಗತಿ ಹಾಗೂ ಅಗತ್ಯ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.
ಸ್ಥಳೀಯ ಜನರ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ಜನರ ಅನುಕೂಲವೇ ನಮ್ಮ ಆದ್ಯತೆ, ಕ್ಷೇತ್ರದ ಅಭಿವೃದ್ಧಿಯೇ ನಮ್ಮ ಸಂಕಲ್ಪ!
#KRpura #Geddalahalli #WhiteToppingRoad #ಅಭಿವೃದ್ಧಿಯೇ_ಆದ್ಯತೆ #byrathibasavaraj
ದಕ್ಷ ನಾಯಕಿ, ಜನಸೇವೆಯೇ ತಮ್ಮ ಧ್ಯೇಯವಾಗಿಸಿಕೊಂಡಿರುವ ಕೇಂದ್ರ ಸಚಿವರು ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸದರಾದ ಕು. ಶೋಭಾ ಕರಂದ್ಲಾಜೆ Shobha Karandlaje ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. 🎂💐
ದೇವರು ತಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ಜನಸೇವೆಗೆ ಇನ್ನಷ್ಟು ಶಕ್ತಿ ಮತ್ತು ಯಶಸ್ಸನ್ನು ಕರುಣಿಸಲಿ ಎಂದು ಹಾರೈಸುತ್ತೇನೆ.
ರಾಷ್ಟ್ರದ ಅಭಿವೃದ್ಧಿ ಹಾಗೂ ಜನಕಲ್ಯಾಣದ ಕಾರ್ಯಗಳಲ್ಲಿ ತಮ್ಮ ಸೇವೆ ನಿರಂತರವಾಗಿ ಮುಂದುವರಿಯಲಿ. 🙏🏻
ಭಾರತ ಮಾತಾ ಕೀ ಜೈ! 🇮🇳
#HappyBirthday #ShobhaKarandlaje #BJP #BengaluruNorth #ByrathiBasavaraj
ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರದ ಮತದಾರ ಬಂಧುಗಳಲ್ಲಿ ವಿನಂತಿ.
ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರ, ಆಗ್ನೇಯ ಪದವೀಧರರ ಕ್ಷೇತ್ರ, ಈಶಾನ್ಯ ಶಿಕ್ಷಕರ ಕ್ಷೇತ್ರ ಮತ್ತು ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಗಳಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಹೆಚ್ಚಿನ ಮತಗಳಿಂದ ಗೆಲ್ಲಿಸೋಣ.
#MLCElection #BJP4Karnataka
🇮🇳 ನವ ಭಾರತದ ಚಾಣಕ್ಯ… ರಾಷ್ಟ್ರದ ಸಂಕಲ್ಪದ ಶಕ್ತಿ… ಭಾರತದ ಆಂತರಿಕ ಭದ್ರತೆಯ ಅಪ್ರತಿಮ ರಕ್ಷಕ! 🇮🇳
ದೇಶದ ಏಕತೆ, ಅಖಂಡತೆ ಮತ್ತು ಭದ್ರತೆಯ ವಿಚಾರದಲ್ಲಿ ಅಚಲ ಸಂಕಲ್ಪದೊಂದಿಗೆ ಕಾರ್ಯನಿರ್ವಹಿಸುತ್ತಿರುವ, ತಮ್ಮ ದಿಟ್ಟ ನಿರ್ಧಾರಗಳು ಹಾಗೂ ಸಂಘಟನಾ ಚಾತುರ್ಯದಿಂದ ರಾಷ್ಟ್ರೀಯ ರಾಜಕಾರಣದಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಜೀ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು! 💐🔥
ರಾಷ್ಟ್ರದ ಹಿತವೇ ಪರಮ ಗುರಿ, ದೇಶದ ಭದ್ರತೆಯೇ ಪ್ರಥಮ ಆದ್ಯತೆ, ಭಾರತಮಾತೆಯ ಸೇವೆಯೇ ಜೀವನದ ಸಂಕಲ್ಪ ಎಂಬ ಧ್ಯೇಯದೊಂದಿಗೆ ಮುನ್ನಡೆಯುತ್ತಿರುವ ನಿಮ್ಮ ನಾಯಕತ್ವ ದೇಶದ ಕೋಟ್ಯಂತರ ಜನರಿಗೆ ಸ್ಫೂರ್ತಿಯಾಗಿದೆ.
💥 ದಿಟ್ಟ ನಿರ್ಧಾರಗಳಿಗೆ ಮತ್ತೊಂದು ಹೆಸರು — ಅಮಿತ್ ಶಾ ಜೀ!
🛡️ ರಾಷ್ಟ್ರದ ಭದ್ರತೆಗೆ ಅಚಲ ಸಂಕಲ್ಪ — ಅಮಿತ್ ಶಾ ಜೀ!
🇮🇳 ದೇಶ ಮೊದಲು, ರಾಷ್ಟ್ರದ ಹಿತವೇ ಸದಾ ಮೊದಲು!
ಭಗವಂತನು ತಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಮತ್ತು ರಾಷ್ಟ್ರಸೇವೆಯಲ್ಲಿ ಇನ್ನಷ್ಟು ಶಕ್ತಿ ನೀಡಲಿ. ನಿಮ್ಮ ಮಾರ್ಗದರ್ಶನದಲ್ಲಿ ಭಾರತವು ಅಭಿವೃದ್ಧಿ, ಸುರಕ್ಷತೆ ಮತ್ತು ಪ್ರಗತಿಯ ಹೊಸ ಶಿಖರಗಳನ್ನು ತಲುಪಲಿ ಎಂದು ಹಾರೈಸುತ್ತೇನೆ.
ವಂದೇ ಮಾತರಂ! 🇮🇳
ಭಾರತ ಮಾತಾ ಕೀ ಜೈ! 🚩
#HBDayAmitShahji #Bjp #bjpkarnataka #krpura #byrathibasavaraj
🌺 ದಸರಾ – ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು 🌺
ನಾಡಿನ ಸಮಸ್ತ ಜನತೆಗೆ ಹಾಗೂ ನನ್ನ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಆತ್ಮೀಯ ಬಂಧುಗಳಿಗೆ ದಸರಾ – ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು.
ತಾಯಿ ಚಾಮುಂಡೇಶ್ವರಿ ದೇವಿಯ ಆಶೀರ್ವಾದದಿಂದ ಎಲ್ಲರ ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿ ಮತ್ತು ಆರೋಗ್ಯ ನೆಲೆಸಲಿ. ದುಷ್ಟಶಕ್ತಿಯ ಮೇಲೆ ಶಿಷ್ಟಶಕ್ತಿಯ ವಿಜಯದ ಸಂಕೇತವಾದ ಈ ಪವಿತ್ರ ಹಬ್ಬವು ಎಲ್ಲರ ಬದುಕಿನಲ್ಲಿ ಹೊಸ ಭರವಸೆ ಮತ್ತು ಯಶಸ್ಸನ್ನು ತರಲಿ.
ಸರ್ವರಿಗೂ ವಿಜಯದಶಮಿಯ ಶುಭಾಶಯಗಳು! 🙏
#ದಸರಾ #ವಿಜಯದಶಮಿ #ನಾಡಹಬ್ಬ #KRPURA #byrathibasavaraj
🌺🙏 ಮಹಾನವಮಿ – ಆಯುಧ ಪೂಜೆಯ ಹಾರ್ದಿಕ ಶುಭಾಶಯಗಳು 🙏🌺
ಸಮಸ್ತ ನಾಡಿನ ಜನತೆಗೆ ಹಾಗೂ ನನ್ನ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಪ್ರೀತಿಯ ಬಂಧುಗಳೆಲ್ಲರಿಗೂ ಮಹಾನವಮಿ ಹಾಗೂ ಆಯುಧ ಪೂಜೆಯ ಹಾರ್ದಿಕ ಶುಭಾಶಯಗಳು. 💐
ನಾಡಿನ ಜನರೆಲ್ಲರಿಗೂ ಸುಖ, ಶಾಂತಿ, ಸಮೃದ್ಧಿ ಹಾಗೂ ಆರೋಗ್ಯವನ್ನು ಕರುಣಿಸಲಿ. ದುಷ್ಟಶಕ್ತಿಗಳ ವಿರುದ್ಧ ಒಳಿತಿನ ವಿಜಯ ಸದಾ ನಮ್ಮದಾಗಲಿ ಎಂದು ಪ್ರಾರ್ಥಿಸುತ್ತೇನೆ.
ಸರ್ವರಿಗೂ ಶುಭವಾಗಲಿ, ವಿಜಯವಾಗಲಿ! 🙏🌼
— ಭೈರತಿ ಬಸವರಾಜ್
ಶಾಸಕರು, ಕೆ.ಆರ್.ಪುರ ವಿಧಾನಸಭಾ ಕ್ಷೇತ್ರ
ರಾಜ್ಯ ಉಪಾಧ್ಯಕ್ಷರು, ಬಿಜೆಪಿ ಕರ್ನಾಟಕ
#ಮಹಾನವಮಿ #ಆಯುಧಪೂಜೆ #ದಸರಾ #KRPura #BharathiBasavaraj
🚩 ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆ! 🚩
ರಾಮಮೂರ್ತಿನಗರದ ಕಾಂಗ್ರೆಸ್ ವಾರ್ಡ್ ಅಧ್ಯಕ್ಷರಾದ ಶ್ರೀ ಶಂಕರ್ ಅವರು ತಮ್ಮ ಸಂಗಡಿಗರಾದ ನಾಗರಾಜ್, ಪ್ರವೀಣ್, ರತನ್ ಸೇರಿದಂತೆ ಹಲವಾರು ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಇಂದು ಕಾಂಗ್ರೆಸ್ ಪಕ್ಷವನ್ನು ತೊರೆದು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡರು. 💐
ಈ ಸಂದರ್ಭದಲ್ಲಿ ಮಾಜಿ ಸಂಸದರಾದ ಶ್ರೀ ಪ್ರತಾಪ್ ಸಿಂಹ ಹಾಗೂ ಶ್ರೀ ಮುನಿಸ್ವಾಮಿ ಮತ್ತು ರಾಮಮೂರ್ತಿನಗರದ ಪ್ರಮುಖ ಮುಖಂಡರು ಉಪಸ್ಥಿತರಿದ್ದು, ಪಕ್ಷಕ್ಕೆ ಸೇರ್ಪಡೆಗೊಂಡ ಕಾರ್ಯಕರ್ತರನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಬಿಜೆಪಿಯ ತತ್ವ, ಸಿದ್ಧಾಂತ ಹಾಗೂ ರಾಷ್ಟ್ರಸೇವೆಯ ಸಂಕಲ್ಪಕ್ಕೆ ಮತ್ತಷ್ಟು ಬಲ! 🚩
#BJP #byrathibasavaraj #RamamurthyNagar #bjpkrpura
ಇಂದು ಕೆ.ಆರ್. ಪುರ ಯುವಮೋರ್ಚಾ ವತಿಯಿಂದ ಕೆ.ಆರ್.ಪುರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ “ನಶಾ ಮುಕ್ತ ಭಾರತ ಅಭಿಯಾನ” ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಯುವಜನತೆಯನ್ನು ಮಾದಕ ವಸ್ತುಗಳ ದುಷ್ಪರಿಣಾಮಗಳಿಂದ ದೂರವಿರಿಸಿ, ಆರೋಗ್ಯಕರ ಹಾಗೂ ಜವಾಬ್ದಾರಿಯುತ ಸಮಾಜ ನಿರ್ಮಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಯುವಶಕ್ತಿಯೇ ದೇಶದ ಶಕ್ತಿ ಎಂಬ ಆಶಯದೊಂದಿಗೆ, ಮಾದಕ ವ್ಯಸನಮುಕ್ತ ಭಾರತದ ನಿರ್ಮಾಣಕ್ಕೆ ನಾವೆಲ್ಲರೂ ಕೈಜೋಡಿಸೋಣ.
ಈ ಸಂದರ್ಭದಲ್ಲಿ ಮಂಡಲದ ಪದಾಧಿಕಾರಿಗಳು, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು, ಪಕ್ಷದ ಕಾರ್ಯಕರ್ತರು, ಮಂಡಲ ಯುವಮೋರ್ಚಾ ತಂಡದ ಪದಾಧಿಕಾರಿಗಳು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಶೆ ಮುಕ್ತ ಯುವಜನತೆ – ಸದೃಢ ಭಾರತ, ಸಮರ್ಥ ಭಾರತ! 🇮🇳
#NashaMuktBharat #BJYM #BJPKarnataka #BengaluruNorth #KRPura
ರೈಲ್ವೆ ಉದ್ಯೋಗಿಗಳಿಗೆ ಮೋದಿ ಸರ್ಕಾರದ ದೀಪಾವಳಿ ಉಡುಗೊರೆ : 11.40 ಲಕ್ಷ ರೈಲ್ವೆ ಉದ್ಯೋಗಿಗಳಿಗೆ 78 ದಿನಗಳ ಬೋನಸ್ !
ರೈಲ್ವೆ ಉದ್ಯೋಗಿಗಳಿಗೆ ₹2,009.61 ಕೋಟಿಗಳ ಉತ್ಪಾದಕತೆ ಆಧಾರಿತ ಬೋನಸ್ (PLB) ಅನ್ನು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ.
11.40 ಲಕ್ಷಕ್ಕೂ ಅಧಿಕ ರೈಲ್ವೆ ಉದ್ಯೋಗಿಗಳು ಇದರಿಂದ ಪ್ರಯೋಜನ ಪಡೆಯಲಿದ್ದಾರೆ.
#CabinetDecisions
Byrathi Basavaraja retweeted
ಕಬ್ಬು ಬೆಳೆಗಾರರ ಸಮಸ್ಯೆ ಕುರಿತಾಗಿ ಅಕ್ಟೋಬರ್ 12 ರಂದು ದೆಹಲಿಯಲ್ಲಿ ನಡೆದ ಸಭೆಯಲ್ಲಿ, ಕಬ್ಬು ರೈತರಿಗೆ ನೀಡಿದ ಭರವಸೆಯಂತೆ, ಸಭೆಯ ಬಳಿಕ ಎರಡು ದಿನದೊಳಗೆ ವಿಶೇಷ ತಜ್ಞರ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯು ಕಬ್ಬು ಬೆಳೆಗಾರರ ಸಮಸ್ಯೆಗಳ ಬಗ್ಗೆ ಸೂಕ್ತವಾದ ವರದಿಯನ್ನು ನೀಡಲಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ @narendramodi ನೇತೃತ್ವದ ನಮ್ಮ ಸರ್ಕಾರ ಕಬ್ಬು ಬೆಳೆಗಾರರ ಹಿತವನ್ನು ಕಾಪಾಡಲು ಹಾಗೂ ಅವರ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲು ಬದ್ದವಿದೆ ಎಂಬುದನ್ನು ಈ ಸಂದರ್ಭದಲ್ಲಿ ಪುನರುಚ್ಚಿಸುತ್ತಿದ್ದೇನೆ.
ಕಬ್ಬು ಬೆಳೆಗಾರರಿಗೆ ನನ್ನ ಕಳಕಳಿಯ ಪ್ರಾರ್ಥನೆ, ನೀವು ಬಿಸಿಲಿನಲ್ಲಿ ರಸ್ತೆ ಮಧ್ಯೆ ಕೂತು ಪ್ರತಿಭಟನೆ ನಡೆಸುವ ಅವಶ್ಯಕತೆಯಿಲ್ಲ, ನಮ್ಮ ಸರ್ಕಾರ ನಿಮ್ಮ ಹಿತ ಕಾಪಾಡಲು ಸದಾ ಸಿದ್ದವಿದೆ, ದಯವಿಟ್ಟು ಈ ಪ್ರತಿಭಟನೆ ಕೈಬಿಡಲು ನಾನು ಮನವಿ ಮಾಡುತ್ತೇನೆ.
ಪ್ರತಿದಿನದಂತೆ ಇಂದು ಭೈರತಿಯಲ್ಲಿರುವ ನನ್ನ ಗೃಹ ಕಚೇರಿಯಲ್ಲಿ ಕ್ಷೇತ್ರದ ನಾಗರಿಕರು ಹಾಗೂ ಮುಖಂಡರನ್ನು ಭೇಟಿಯಾಗಿ, ಅವರ ಅಹವಾಲುಗಳನ್ನು ಆಲಿಸಿ, ಸಮಸ್ಯೆಗಳ ಪರಿಹಾರಕ್ಕೆ ಸೂಕ್ತವಾಗಿ ಸ್ಪಂದಿಸಲಾಯಿತು.
ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ, ಅವುಗಳಿಗೆ ಶೀಘ್ರ ಪರಿಹಾರ ಒದಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ನಮ್ಮ ಆದ್ಯತೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಮತ್ತು ಅವರ ಆಶೋತ್ತರಗಳಿಗೆ ಧ್ವನಿಯಾಗುವುದು ನಮ್ಮ ಕರ್ತವ್ಯ.
ಜನಸೇವೆಯೇ ನಮ್ಮ ಸಂಕಲ್ಪ, ಜನರ ಕಲ್ಯಾಣವೇ ನಮ್ಮ ಗುರಿ! 🙏
#ಜನಸೇವೆ #KRPura #ByrathiBasavaraj
ಬೆಂಗಳೂರು ಉತ್ತರ ಜಿಲ್ಲಾ ಯುವಮೋರ್ಚಾ ವತಿಯಿಂದ ಹಮ್ಮಿಕೊಳ್ಳಲಾಗಿರುವ “ನಶಾ ಮುಕ್ತ ಭಾರತ ಅಭಿಯಾನ” ಕಾರ್ಯಕ್ರಮಕ್ಕೆ ಹೃತ್ಪೂರ್ವಕ ಶುಭಾಶಯಗಳನ್ನು ಕೋರಲಾಯಿತು.
ಯುವಜನತೆ ಮಾದಕ ವ್ಯಸನಗಳಿಂದ ದೂರವಿದ್ದು, ಆರೋಗ್ಯಕರ ಹಾಗೂ ಜವಾಬ್ದಾರಿಯುತ ಜೀವನವನ್ನು ರೂಪಿಸಿಕೊಳ್ಳುವ ಮೂಲಕ ಸದೃಢ ಸಮಾಜ ನಿರ್ಮಾಣಕ್ಕೆ ಕೈಜೋಡಿಸಲಿ ಎಂಬ ಆಶಯದೊಂದಿಗೆ ಈ ಅಭಿಯಾನ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ.
#byrathibasavaraj #NashaMuktBharat #BJYM #BJPKarnataka #BengaluruNorth
ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾಗಿ ನೇಮಕಗೊಂಡಿರುವ ಡಾ. ಸುಧಾ ಯಾದವ್ ಜೀ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. 🙏🏻
ಐಐಟಿ ರೂರ್ಕಿಯಲ್ಲಿ ರಸಾಯನಶಾಸ್ತ್ರದಲ್ಲಿ ಚಿನ್ನದ ಪದಕ ಪಡೆದಿರುವ ಅವರು, ಮಹೇಂದ್ರಗಢದ ಮಾಜಿ ಸಂಸದೆಯಾಗಿ ಸಾರ್ವಜನಿಕ ಸೇವೆಯಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಕಾರ್ಗಿಲ್ ಯುದ್ಧದಲ್ಲಿ ವೀರಮರಣವನ್ನಪ್ಪಿದ ಡೆಪ್ಯುಟಿ ಕಮಾಂಡೆಂಟ್ ಸುಖಬೀರ್ ಸಿಂಗ್ ಯಾದವ್ ಜೀ ಅವರ ಧರ್ಮಪತ್ನಿಯಾಗಿರುವ ಅವರು, ದಶಕಗಳ ಸಾರ್ವಜನಿಕ ಸೇವೆ ಹಾಗೂ ವೈಯಕ್ತಿಕ ತ್ಯಾಗದ ಹಿನ್ನೆಲೆಯನ್ನು ಹೊಂದಿದ್ದಾರೆ.
ಕರ್ನಾಟಕದ ಸಾಂವಿಧಾನಿಕ ಮುಖ್ಯಸ್ಥರಾಗಿ ಅವರ ನೇತೃತ್ವದಲ್ಲಿ ಸಂವಿಧಾನದ ಮೌಲ್ಯಗಳು, ಕಾನೂನಿನ ಆಳ್ವಿಕೆ ಹಾಗೂ ಪ್ರಜಾಪ್ರಭುತ್ವದ ಆಶಯಗಳು ರಾಜ್ಯದ ಪ್ರತಿಯೊಬ್ಬ ಕನ್ನಡಿಗನಿಗೂ ಎತ್ತಿಹಿಡಿಯಲ್ಪಡಲಿ ಎಂದು ಆಶಿಸುತ್ತೇವೆ.
ಮತ್ತೊಮ್ಮೆ ಹೃತ್ಪೂರ್ವಕ ಅಭಿನಂದನೆಗಳು. 💐🙏🏻
#govrnerofkarnataka #drsudhayadav
📍 ಬೆಂಗಳೂರು ಶಿಕ್ಷಕರ ಕ್ಷೇತ್ರ | ಮತದಾರರು ಹಾಗೂ ಕಾರ್ಯಕರ್ತರ ಸಭೆ
ಮುಂಬರುವ ವಿಧಾನ ಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ಇಂದು ಆಯೋಜಿಸಲಾಗಿದ್ದ ಬೆಂಗಳೂರು ಶಿಕ್ಷಕರ ಕ್ಷೇತ್ರದ ಮತದಾರರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ ಬಿ.ವೈ. ವಿಜಯೇಂದ್ರ ಅವರೊಂದಿಗೆ ಪಾಲ್ಗೊಳ್ಳಲಾಯಿತು.
ಶಿಕ್ಷಕ ವೃಂದದವರ ಆಶೋತ್ತರಗಳು, ನ್ಯಾಯಯುತ ಬೇಡಿಕೆಗಳು ಹಾಗೂ ಸಮಸ್ಯೆಗಳಿಗೆ ಸ್ಪಂದಿಸುವುದು ನಮ್ಮೆಲ್ಲರ ಆದ್ಯತೆಯಾಗಿದೆ. ಶಿಕ್ಷಕರ ಹಿತರಕ್ಷಣೆಯ ಬದ್ಧತೆಯೊಂದಿಗೆ ಕಣಕ್ಕಿಳಿದಿರುವ ಎನ್.ಡಿ.ಎ ಮೈತ್ರಿಕೂಟದ ಅಧಿಕೃತ ಅಭ್ಯರ್ಥಿ ಶ್ರೀ ಎ.ಪಿ. ರಂಗನಾಥ್ ಅವರ ಗೆಲುವಿಗಾಗಿ ರೂಪಿಸಬೇಕಾದ ಕಾರ್ಯತಂತ್ರಗಳ ಕುರಿತು ಸಭೆಯಲ್ಲಿ ಸಮಾಲೋಚನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಸಹ-ಉಸ್ತುವಾರಿಗಳಾದ ಶ್ರೀ ಡಾ. ಕಾಸಂ
ವೆಂಕಟೇಶ್ವರಲು, ವಿಧಾನಪರಿಷತ್ತಿನ ವಿರೋಧಪಕ್ಷದ ನಾಯಕರಾದ ಶ್ರೀ ಛಲವಾದಿ ನಾರಾಯಣಸ್ವಾಮಿ, ಶಾಸಕರಾದ ಶ್ರೀ ಎಸ್.ಆರ್. ವಿಶ್ವನಾಥ್, ಶ್ರೀ ಕೆ. ಗೋಪಾಲಯ್ಯ, ಶ್ರೀ ಎಸ್. ಮುನಿರಾಜು, ವಿಧಾನಪರಿಷತ್ ಸದಸ್ಯರಾದ ಶ್ರೀ ಹೆಚ್.ಎಸ್. ಗೋಪಿನಾಥ್ ರೆಡ್ಡಿ, ಶ್ರೀ ಕೇಶವ ಪ್ರಸಾದ್, ರಾಜ್ಯ ಕಾರ್ಯದರ್ಶಿಗಳಾದ ಶ್ರೀ ಹೆಚ್.ಸಿ. ತಮ್ಮೇಶ್ ಗೌಡ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷರಾದ ಶ್ರೀ ಎಸ್. ಹರೀಶ್ ಸೇರಿದಂತೆ ಎನ್.ಡಿ.ಎ ಮೈತ್ರಿಕೂಟದ ಪ್ರಮುಖರು ಉಪಸ್ಥಿತರಿದ್ದರು.
ಶಿಕ್ಷಕರ ಹಿತವೇ ನಮ್ಮ ಆದ್ಯತೆ, ಶಿಕ್ಷಕರ ನ್ಯಾಯಯುತ ಬೇಡಿಕೆಗಳಿಗೆ ನಮ್ಮ ಬದ್ಧತೆ! 🙏🏻
#BJPKarnataka #NDA #Byrathibasavaraja #TeachersConstituency
🙏🏻 ರಾಜ್ಯ ಸಹ ಉಸ್ತುವಾರಿ ಡಾ. ಕಾಸಂ ವೆಂಕಟೇಶ್ವರಲು ಅವರ ಭೇಟಿ 🤝
ರಾಜ್ಯ ಸಹ ಉಸ್ತುವಾರಿಗಳಾಗಿ ನಿಯುಕ್ತಿಗೊಂಡ ಬಳಿಕ ಮೊದಲ ಬಾರಿಗೆ ಕರ್ನಾಟಕಕ್ಕೆ ಆಗಮಿಸಿದ ಡಾ. ಕಾಸಂ ವೆಂಕಟೇಶ್ವರಲು ಅವರನ್ನು ಭೇಟಿಯಾಗಿ, ನನ್ನನ್ನು ಪರಿಚಯಿಸಿಕೊಳ್ಳಲಾಯಿತು.
ಈ ಇಂದು ನಡೆದ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಅವರನ್ನು ಆತ್ಮೀಯವಾಗಿ ಭೇಟಿ ಮಾಡಿ, ಪಕ್ಷದ ಸಂಘಟನೆ ಹಾಗೂ ಮುಂದಿನ ಕಾರ್ಯಚಟುವಟಿಕೆಗಳ ಕುರಿತು ಚರ್ಚಿಸುವ ಅವಕಾಶ ದೊರೆತಿದ್ದು ಸಂತಸ ತಂದಿದೆ. ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸೋಣ.
🇮🇳 ರಾಷ್ಟ್ರ ಮೊದಲು, ಪಕ್ಷ ಸದಾ, ಜನಸೇವೆ ನಮ್ಮ ಸಂಕಲ್ಪ!
#BJPKarnataka #drKasamvenkateshwaralu #byrathibasavaraja
📍 ರಾಜ್ಯ ಪದಾಧಿಕಾರಿಗಳ ಮಹತ್ವದ ಸಭೆ | ಬಿಜೆಪಿ ಕರ್ನಾಟಕ
ಬೆಂಗಳೂರಿನ ಪಕ್ಷದ ಕೇಂದ್ರ ಕಾರ್ಯಾಲಯ ಜಗನ್ನಾಥ ಭವನದಲ್ಲಿ, ಇಂದು ರಾಜ್ಯಾಧ್ಯಕ್ಷರಾದ ಶ್ರೀ ಬಿ.ವೈ. ವಿಜಯೇಂದ್ರ ಅವರ ಅಧ್ಯಕ್ಷತೆಯಲ್ಲಿ, ಪಕ್ಷದ ನೂತನ ರಾಜ್ಯ ಸಹ-ಪ್ರಭಾರಿಗಳಾಗಿ ನೇಮಕಗೊಂಡಿರುವ ಶ್ರೀ ಡಾ. ಕಸಂ ವೆಂಕಟೇಶ್ವರಲು ಹಾಗೂ ನಮ್ಮ ರಾಷ್ಟ್ರೀಯ ಉಪಾಧ್ಯಕ್ಷರಾದ ಶ್ರೀ ಪ್ರೊ. ಎಂ. ನಾಗರಾಜ್ ಅವರ ನೇತೃತ್ವದಲ್ಲಿ ಪಕ್ಷದ ರಾಜ್ಯ ಪದಾಧಿಕಾರಿಗಳ ಸಭೆ ನಡೆಸಲಾಯಿತು.
ಈ ಸಭೆಯಲ್ಲಿ ಬೂತ್ ಮಟ್ಟದಿಂದ ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಿಷ್ಠಗೊಳಿಸುವುದು, ರಾಜ್ಯದ ಜ್ವಲಂತ ಸಮಸ್ಯೆಗಳ ಕುರಿತು ಜನರ ಧ್ವನಿಯಾಗಿ ಕಾರ್ಯನಿರ್ವಹಿಸುವುದು ಹಾಗೂ ರಾಜ್ಯ ಸರ್ಕಾರದ ಜನವಿರೋಧಿ ಧೋರಣೆಗಳ ವಿರುದ್ಧ ಪಕ್ಷದ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು.
ಸಭೆಯಲ್ಲಿ ಪಕ್ಷದ ರಾಜ್ಯ ಪದಾಧಿಕಾರಿಗಳು ಭಾಗವಹಿಸಿ, ಸಂಘಟನೆಯನ್ನು ಬಲಪಡಿಸುವ ಹಾಗೂ ಜನಪರ ಹೋರಾಟಗಳನ್ನು ಪರಿಣಾಮಕಾರಿಯಾಗಿ ಮುಂದುವರಿಸುವ ನಿಟ್ಟಿನಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಸಂಘಟನೆಯೇ ಶಕ್ತಿ – ಜನಸೇವೆಯೇ ಸಂಕಲ್ಪ! 🚩
#BJPKarnataka #BYVijayendra #BJP #byrathibasavaraja #JagannathBhavan














































