ಮಾನ್ಯ ಕೆಪಿಸಿಸಿ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶ್ರೀ ಬಿ ಕೆ ಹರಿಪ್ರಸಾದ್ ಅವರೊಂದಿಗೆ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ತಾಯಿ ಮಹಾಲಕ್ಷ್ಮಿಯ ದರ್ಶನ ಪಡೆದು ಆಶೀರ್ವಾದ ಪಡೆಯಲಾಯಿತು.
ಇಂದು ನಮ್ಮ ಬಿಳೇಕಹಳ್ಳಿ ವಾರ್ಡಿನ ಬೆಸ್ಕಾಂ (BESCOM) ಕಚೇರಿಯಲ್ಲಿ ಅತ್ಯಂತ ಭಕ್ತಿ-ಶ್ರದ್ಧೆಗಳಿಂದ ಆಯೋಜಿಸಲಾಗಿದ್ದ ದಸರಾ ಹಾಗೂ ಆಯುಧ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದೆ.
ನನ್ನನ್ನು ಈ ಕಾರ್ಯಕ್ರಮಕ್ಕೆ ಪ್ರೀತಿಯಿಂದ ಆಹ್ವಾನಿಸಿ, ಗೌರವಪೂರ್ವಕವಾಗಿ ಸನ್ಮಾನಿಸಿದ ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ಆದ (AE) ಶ್ರೀ ವೆಂಕಟೇಶ್ ಅವರಿಗೆ ಹಾಗೂ ಬೆಸ್ಕಾಂ ಸಿಬ್ಬಂದಿವರ್ಗದವರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು.
ಪವಿತ್ರವಾದ ಆಯುಧ ಪೂಜೆಯ ಶುಭ ಸಂದರ್ಭದಲ್ಲಿ, ಬಿಳೇಕಹಳ್ಳಿ ವಾರ್ಡಿನ ಪ್ರತಿಯೊಬ್ಬ ನೆಚ್ಚಿನ ಬಂಧುಗಳಿಗೂ ಹಾಗೂ ನಾಗರಿಕರಿಗೂ ವಿಜಯದಶಮಿ ಮತ್ತು ದಸರಾ ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ. ಶ್ರೀ ದುರ್ಗಾದೇವಿಯು ಎಲ್ಲರಿಗೂ ಸುಖ, ಶಾಂತಿ, ಸಮೃದ್ಧಿ ಹಾಗೂ ಆಯುರಾರೋಗ್ಯ ದಯಪಾಲಿಸಲಿ. 🌸🙏✨
#dasara
#DasaraFestival
#Karnataka
#ಆಯುಧಪೂಜೆ
#ಮಹಾನವಮಿ
ನಾಡಿನ ಜನತೆಯ ಪರಿಶ್ರಮಕ್ಕೆ ಸದಾ ಯಶಸ್ಸಿನ ಪ್ರತಿಫಲ ದೊರೆಯಲಿ, ಪ್ರತಿಯೊಂದು ಸತ್ಕಾರ್ಯಕ್ಕೂ ಶುಭಫಲ ಲಭಿಸಲಿ. ನಾಡಿನ ಸಮೃದ್ಧಿ, ಸುಖ-ಶಾಂತಿ ಹಾಗೂ ಸರ್ವರ ಏಳಿಗೆಯ ಸಂಕೇತವಾದ ಮಹಾನವಮಿ ಮತ್ತು ಆಯುಧಪೂಜೆಯ ಶುಭ ಸಂದರ್ಭದಲ್ಲಿ ಎಲ್ಲರಿಗೂ ಹಾರ್ದಿಕ ಶುಭಾಶಯಗಳು.
#ಮಹಾನವಮಿ #ಆಯುಧಪೂಜೆ #ಶುಭಾಶಯಗಳು #Mahanavami #AyudhaPooja
ಇಂದು ಅರಕೆರೆ ವಾರ್ಡ್ ಕಚೇರಿಯಲ್ಲಿ ಸಹಾಯಕ ಕಂದಾಯ ಅಧಿಕಾರಿಗಳಾದ (ARO) ಶ್ರೀ ಮಂಜುನಾಥ್ ಅವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಆಯುಧ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು. ಈ ಶುಭ ಸಂದರ್ಭದಲ್ಲಿ ನನ್ನನ್ನು ಗೌರವಿಸಿ ಸನ್ಮಾನಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿ, ಸಮಸ್ತ ಅಧಿಕಾರಿ ವರ್ಗ ಹಾಗೂ ಸಿಬ್ಬಂದಿಗಳಿಗೆ ನಾಡಹಬ್ಬ ದಸರಾ ಮಹೋತ್ಸವದ ಹಾರ್ದಿಕ ಶುಭಾಶಯಗಳನ್ನು ಕೋರಿದೆ.
ಈ ಕಾರ್ಯಕ್ರಮದಲ್ಲಿ ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಅಪರ ಆಯುಕ್ತರಾದ (ಕಂದಾಯ) ಶ್ರೀ ಎಂ. ರಾಚಪ್ಪ ಅವರು, ವಲಯ ಜಂಟಿ ಆಯುಕ್ತರಾದ ಶ್ರೀ ಹೆಚ್. ಎಸ್. ಸತೀಶ್ ಬಾಬು ಅವರು ಉಪಸ್ಥಿತರಿದ್ದರು.
ಅರಕೆರೆ ವಾರ್ಡಿನ ಕಾಂಗ್ರೆಸ್ ಮುಖಂಡರಾದ ಶ್ರೀ ಕೆ. ಲೋಕೇಶ್ ರೆಡ್ಡಿ ಅವರು , ಸೇರಿದಂತೆ ಹಲವು ಗಣ್ಯರು ಹಾಗೂ ಕಚೇರಿಯ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
#Ayudapoojr
#DasaraFestival
ಇಂದು ವಿ.ಬಿ.ಟಿ. (VBT) ಮಾಲೀಕರು, ಸಮಾಜ ಸೇವಕರು ಹಾಗೂ ಅರಕೆರೆ ವಾರ್ಡಿನ ಕಾಂಗ್ರೆಸ್ ಮುಖಂಡರಾದ ಶ್ರೀ ಕೆ. ಲೋಕೇಶ್ ರೆಡ್ಡಿ ಅವರ ಭವ್ಯ ಜನ್ಮದಿನೋತ್ಸವ ಸಮಾರಂಭದಲ್ಲಿ ಅತ್ಯಂತ ಸಂತೋಷದಿಂದ ಭಾಗವಹಿಸಿ, ಅವರಿಗೆ ಹೃತ್ಪೂರ್ವಕ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿ ಶುಭ ಹಾರೈಸಲಾಯಿತು.
ಸಾರ್ವಜನಿಕರು ಹಾಗೂ ಅಭಿಮಾನಿಗಳ ಅಪಾರ ಜನಸ್ತೋಮದ ನಡುವೆ ಅತ್ಯಂತ ಅದ್ಧೂರಿಯಾಗಿ ಆಯೋಜಿಸಲಾಗಿದ್ದ ಈ ಸಮಾರಂಭದಲ್ಲಿ ಬೊಮ್ಮನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಮಧು ಅವರು, ಬಿಳೇಕಹಳ್ಳಿ ವಾರ್ಡ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಧನಂಜಯ್ ಅವರು, ಬಿಳೇಕಹಳ್ಳಿ ಮುಖಂಡರಾದ ಶ್ರೀ ಕೋದಂಡರಾಮ್ ಅವರು, ಶ್ರೀ ಗೋಪಾಲ್ ಅವರು, ಶ್ರೀ ಗೋಕುಲ್ ಅವರು ಸೇರಿದಂತೆ ಪಕ್ಷದ ಪ್ರಮುಖ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
#happybirthday
#Congress
#Bilekahalliward
ವಿ.ಬಿ.ಟಿ. ಮಾಲೀಕರು, ಸಮಾಜ ಸೇವಕರು ಹಾಗೂ ಅರಕೆರೆ ವಾರ್ಡ್‌ನ ಕಾಂಗ್ರೆಸ್ ಮುಖಂಡರಾದ ಶ್ರೀ ಕೆ. ಲೋಕೇಶ್ ರೆಡ್ಡಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
ಸಮಾಜ ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿರುವ ನಿಮಗೆ ಆಯುಷ್ಯ, ಆರೋಗ್ಯ ಮತ್ತು ಹೆಚ್ಚಿನ ಶಕ್ತಿಯನ್ನು ನೀಡಿ ಆಶೀರ್ವದಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಸಮಾಜಮುಖಿ ಕಾರ್ಯಗಳು ಹೀಗೆಯೇ ಮುಂದುವರಿಯಲಿ.
#happybirthday
#Congress
#Karnataka
ನಮ್ಮ ಆತ್ಮೀಯ ಸ್ನೇಹಿತರಾದ
ಶ್ರೀ ಚಿನ್ನರಾಜ್ ಅವರಿಗೆ
ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
ಸರ್ವಶಕ್ತನಾದ ಭಗವಂತನು ತಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಮತ್ತು ಸಮೃದ್ಧಿಯನ್ನು ಕರುಣಿಸಲಿ. ಜನಸೇವೆ ಮಾಡುವ ನಿಮ್ಮ ನಿರಂತರ ಶ್ರಮ ಹೀಗೆಯೇ ಮುಂದುವರಿಯಲಿ ಎಂದು ಹಾರೈಸುತ್ತೇನೆ.
#happybirthday
ಅಷ್ಟಸಿದ್ಧಿಗಳನ್ನು ಕರುಣಿಸುವ ಮಾತೆ ಸಿದ್ಧಿದಾತ್ರಿ ದೇವಿಯ ದಿವ್ಯ ಅನುಗ್ರಹದಿಂದ ನಿಮ್ಮ ಹಾಗೂ ನಿಮ್ಮ ಕುಟುಂಬದವರ ಬಾಳಿನಲ್ಲಿ ಆಯುರಾರೋಗ್ಯ, ಸುಖ-ಶಾಂತಿ, ಸಂತೋಷ ಮತ್ತು ಸಕಲ ಸೌಭಾಗ್ಯ ಸದಾ ನೆಲೆಸಿರಲಿ. ದೇವಿಯ ಕೃಪೆಯಿಂದ ಸಕಲ ಇಷ್ಟಾರ್ಥಗಳು ಸಿದ್ಧಿಸಿ, ಜೀವನ ಮಂಗಳಮಯವಾಗಲಿ.
#ಸಿದ್ಧಿದಾತ್ರಿ #ನವದುರ್ಗೆ #ನವರಾತ್ರಿ #ದೇವಿಯಅನುಗ್ರಹ
ನವದುರ್ಗೆಯರ ಎಂಟನೇ ಸ್ವರೂಪವಾದ ಮಾತೆ ಮಹಾಗೌರಿಯು ಪರಿಶುದ್ಧತೆ, ಶಾಂತಿ ಹಾಗೂ ಕರುಣೆಯ ಪ್ರತೀಕ. ತಾಯಿಯ ದಿವ್ಯ ಕೃಪೆಯಿಂದ ಎಲ್ಲರ ಬದುಕಿನಲ್ಲಿ ಸುಖ, ಶಾಂತಿ, ಸಮೃದ್ಧಿ ಮತ್ತು ಸೌಭಾಗ್ಯ ಸದಾ ನೆಲೆಸಲಿ. ಸಕಲ ಸಂಕಷ್ಟಗಳು ದೂರವಾಗಿ, ಸರ್ವರ ಬಾಳು ಮಂಗಳಮಯವಾಗಲಿ ಎಂದು ಮಾತೆ ಮಹಾಗೌರಿಯಲ್ಲಿ ಪ್ರಾರ್ಥಿಸೋಣ.
#MaaMahagauri #Navadurga #Navaratri #DivineBlessings
ನವದುರ್ಗೆಯರ ಎಂಟನೇ ಸ್ವರೂಪವಾದ ಮಾತೆ ಮಹಾಗೌರಿಯು ಪರಿಶುದ್ಧತೆ, ಶಾಂತಿ ಹಾಗೂ ಕರುಣೆಯ ಪ್ರತೀಕ. ತಾಯಿಯ ದಿವ್ಯ ಕೃಪೆಯಿಂದ ಎಲ್ಲರ ಬದುಕಿನಲ್ಲಿ ಸುಖ, ಶಾಂತಿ, ಸಮೃದ್ಧಿ ಮತ್ತು ಸೌಭಾಗ್ಯ ಸದಾ ನೆಲೆಸಲಿ. ಸಕಲ ಸಂಕಷ್ಟಗಳು ದೂರವಾಗಿ, ಸರ್ವರ ಬಾಳು ಮಂಗಳಮಯವಾಗಲಿ ಎಂದು ಮಾತೆ ಮಹಾಗೌರಿಯಲ್ಲಿ ಪ್ರಾರ್ಥಿಸೋಣ.
#MaaMahagauri #Navadurga #Navaratri #DivineBlessings
ಪೂಜೆ ಮತ್ತು ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಕ್ತಿಯಿಂದ ಪ್ರಾರ್ಥಿಸಿದೆ.
ನಮ್ಮ ಬಿಳೇಕಹಳ್ಳಿಯ ಸರ್ವಾಂಗೀಣ ಅಭಿವೃದ್ಧಿ, ಪ್ರತಿಯೊಂದು ಕುಟುಂಬದ ಆರೋಗ್ಯ, ಅಭ್ಯುದಯ ಹಾಗೂ ನಮ್ಮ ಜನರ ಒಳಿತಿಗಾಗಿ ವಿಘ್ನ ವಿನಾಶಕನಲ್ಲಿ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದ ಕ್ಷಣಗಳು.
ನಮ್ಮ ಬಡಾವಣೆಯ ಪ್ರತಿಯೊಬ್ಬರ ಪ್ರೀತಿ, ಸಹಕಾರ ಮತ್ತು ಒಗ್ಗಟ್ಟು ಹೀಗೆಯೇ ಮುಂದುವರಿಯಲಿ. ನಿಮ್ಮ ಸೇವೆಯೇ ನನ್ನ ಧರ್ಮ. ಗಜಮುಖನ ಆಶೀರ್ವಾದ ಸದಾ ನಮ್ಮ ಬಿಳೇಕಹಳ್ಳಿಯ ಪ್ರತಿಯೊಬ್ಬ ಜನತೆಯ ಮೇಲಿರಲಿ ಎಂದು ಆಶಿಸುತ್ತೇನೆ. 🌺🙏
#BilekahalliWard #GaneshPooja #Pranapratishta #LordGanesha #GaneshBlessings #CommunityUnity #PublicService #CommunityDevelopment
ನವದುರ್ಗೆಯರಲ್ಲಿ ಏಳನೇ ಸ್ವರೂಪವಾದ ಶ್ರೀ ಕಾಳರಾತ್ರಿ ದೇವಿಯು ಅಜ್ಞಾನವೆಂಬ ಕತ್ತಲೆಯನ್ನು ಕಳೆದು ಜ್ಞಾನದ ಬೆಳಕನ್ನು ಹರಡುವ ಶಕ್ತಿಸ್ವರೂಪಿಣಿ. ಭಕ್ತರ ಭಯ, ಸಂಕಷ್ಟ ಹಾಗೂ ಅಡೆತಡೆಗಳನ್ನು ದೂರಮಾಡಿ ಅಭಯವನ್ನು ಕರುಣಿಸುವ ತಾಯಿ ಕಾಳರಾತ್ರಿಯ ದಿವ್ಯ ಆಶೀರ್ವಾದದಿಂದ ನಿಮ್ಮ ಜೀವನದಲ್ಲಿ ಸುಖ, ಶಾಂತಿ, ಸಂತೋಷ ಮತ್ತು ಸಮೃದ್ಧಿ ಸದಾ ನೆಲೆಸಿರಲಿ.
#ಕಾಳರಾತ್ರಿ #ನವರಾತ್ರಿ
ಬಿಳೇಕಹಳ್ಳಿಯಲ್ಲಿ ವಿಜೃಂಭಣೆಯ ಗಣೇಶೋತ್ಸವ
ನಮ್ಮ ಬಿಳೇಕಹಳ್ಳಿಯ SKP ಗ್ರೂಪ್ ವತಿಯಿಂದ ಅತ್ಯಂತ ಶ್ರದ್ಧೆ, ಭಕ್ತಿ ಮತ್ತು ಅದ್ಧೂರಿಯಾಗಿ ಆಯೋಜಿಸಲಾಗಿದ್ದ "ಪ್ರಥಮ ವರ್ಷದ ನಮ್ಮ ಬಿಳೇಕಹಳ್ಳಿ ಗಣೇಶೋತ್ಸವ"ದ ಪ್ರಥಮ ದಿನದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ವಿಘ್ನವಿನಾಶಕ ಶ್ರೀ ಮಹಾಗಣಪತಿಯ ದಿವ್ಯ ದರ್ಶನ ಪಡೆದು ಪುನೀತನಾದೆ🙏
ಗಣೇಶೋತ್ಸವ ಎನ್ನುವುದು ಬರೀ ಹಬ್ಬವಲ್ಲ, ಅದು ಸಮಾಜದಲ್ಲಿ ಶಾಂತಿ, ಸಾಮರಸ್ಯ ಹಾಗೂ ಸೋದರತ್ವವನ್ನು ಬೆಸೆಯುವ ಭಾವನಾತ್ಮಕ ಕೊಂಡಿ.
ಇಂತಹ ಅದ್ಭುತ ಹಾಗೂ ಅರ್ಥಪೂರ್ಣ ಕಾರ್ಯಕ್ರಮವನ್ನು ಅಭೂತಪೂರ್ವವಾಗಿ ಯಶಸ್ವಿಗೊಳಿಸಿದ ನಮ್ಮ ನೆಚ್ಚಿನ ಯುವ ಶಕ್ತಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು💐
ಈ ಮಂಗಳಕರ ಸಂದರ್ಭದಲ್ಲಿ ಹಿರಿಯ ಕಾಂಗ್ರೆಸ್ ನಾಯಕರಾದ ಶ್ರೀ ಎ. ಬರ್ತಲೋಮ್ ಅವರು, ಬಿಳೇಕಹಳ್ಳಿಯ ಮುಖಂಡರಾದ ಶ್ರೀ ಗೋಪಾಲ್ ಅವರು, ಶ್ರೀ ಕೋದಂಡರಾಮ್ ಅವರು, ಶ್ರೀ ಗೋಕುಲ್ ಅವರು, ಶ್ರೀ ಶಿವು ಅವರು
ಹಾಗೂ ಸ್ಥಳೀಯ ನಾಯಕರು ಮತ್ತು ಅಪಾರ ಸಂಖ್ಯೆಯ ಸಾರ್ವಜನಿಕರು ಉಪಸ್ಥಿತರಿದ್ದು ಹಬ್ಬದ ಶೋಭೆಯನ್ನು ಹೆಚ್ಚಿಸಿದರು.
#BilekahalliWard
#Bengaluru
#GBA
#GaneshaBlessings
#Karnataka
ನಾವು ಸೇವಿಸುವ ಪ್ರತಿಯೊಂದು ತುತ್ತಿನ ಹಿಂದೆ ರೈತರ ಬೆವರಿನ ಹನಿಗಳಿವೆ. ಅನ್ನದಾತರ ಪರಿಶ್ರಮವನ್ನು ಗೌರವಿಸುವುದರ ಜೊತೆಗೆ, ಪ್ರತಿಯೊಬ್ಬರಿಗೂ ಪೌಷ್ಟಿಕ ಆಹಾರ ದೊರೆಯುವ ಸಮಾಜವನ್ನು ನಿರ್ಮಿಸುವುದು ನಮ್ಮೆಲ್ಲರ ಜವಾಬ್ದಾರಿ.
ಈ ವಿಶ್ವ ಆಹಾರ ದಿನದಂದು ಆಹಾರದ ಮೌಲ್ಯ ಅರಿಯೋಣ, ಅನ್ನದಾತರನ್ನು ಗೌರವಿಸೋಣ, ಹಸಿವಿಲ್ಲದ ಜಗತ್ತಿಗಾಗಿ ಸಂಕಲ್ಪ ಮಾಡೋಣ.
#ವಿಶ್ವಆಹಾರ_ದಿನ #WorldFoodDay #ಅನ್ನದಾತ #ಆಹಾರವೇ_ಜೀವನ
ಮಹಿಷಾಸುರನನ್ನು ಸಂಹರಿಸಿ ಧರ್ಮದ ವಿಜಯವನ್ನು ಸಾರಿದ ವೀರರೂಪಿಣಿ ಶ್ರೀ ಕಾತ್ಯಾಯಿನಿ ದೇವಿಯ ದಿವ್ಯ ಕೃಪೆಯಿಂದ ಸಕಲರ ಬಾಳಿನಲ್ಲಿ ಸುಖ, ಶಾಂತಿ, ಆಯುರಾರೋಗ್ಯ ಹಾಗೂ ಸಮೃದ್ಧಿ ನೆಲೆಸಲಿ. ಸಕಲ ಸಂಕಷ್ಟಗಳು ದೂರವಾಗಿ, ಮನದ ಇಷ್ಟಾರ್ಥಗಳೆಲ್ಲ ಈಡೇರಲಿ.
#ಶ್ರೀಕಾತ್ಯಾಯಿನಿದೇವಿ #ಕಾತ್ಯಾಯಿನಿಮಾತೆ #ದುರ್ಗಾಮಾತೆ #ದೇವಿಯಆಶೀರ್ವಾದ #ನವರಾತ್ರಿ
Heartiest Birthday Wishes to Shri Sachin Paul Ji
On this special occasion, we extend our warmest wishes to Shri Sachin Paul Ji, our well-wisher and Personal Secretary to Smt. Sonia Gandhi Ji, Chairperson of the Congress Parliamentary Party.
May the year ahead bring him good health, happiness, prosperity and success in all his endeavours.
Wishing you a wonderful birthday and a fulfilling year ahead.
ನಮ್ಮ ಬಿಳೇಕಹಳ್ಳಿಯ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಶ್ರೀ ಗೋಕುಲ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಶ್ರೀಯುತರಿಗೆ ಭಗವಂತನು ಆಯುಷ್ಯ, ಆರೋಗ್ಯ, ಸುಖ-ಶಾಂತಿ ನೀಡಿ, ಬಿಳೇಕಹಳ್ಳಿ ಹಾಗೂ ಸಾರ್ವಜನಿಕರ ಸೇವೆ ಮಾಡಲು ಇನ್ನಷ್ಟು ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇವೆ.
#HappyBirthday
#Bilekahalliwad
#GBA
ಭಾರತ ರತ್ನ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಜಯಂತಿ
“ಕನಸು ಕಾಣಿರಿ, ಆ ಕನಸುಗಳನ್ನು ನನಸಾಗಿಸಲು ಶ್ರಮಿಸಿರಿ.”
ಭಾರತದ ಕ್ಷಿಪಣಿ ಪುರುಷ, ಶ್ರೇಷ್ಠ ವಿಜ್ಞಾನಿ ಹಾಗೂ ಯುವಜನತೆಗೆ ಸದಾ ಸ್ಫೂರ್ತಿಯಾಗಿರುವ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಜಯಂತಿಯಂದು ಅವರಿಗೆ ಗೌರವಪೂರ್ವಕ ನಮನಗಳು.
ಜ್ಞಾನ, ಸರಳತೆ ಮತ್ತು ದೇಶಪ್ರೇಮದ ಮೂಲಕ ಕೋಟ್ಯಂತರ ಭಾರತೀಯರ ಮನದಲ್ಲಿ ಶಾಶ್ವತ ಸ್ಥಾನ ಪಡೆದ ಅವರ ಆದರ್ಶಗಳು ಪ್ರತಿಯೊಬ್ಬರಿಗೂ ದಾರಿದೀಪವಾಗಲಿ.
ಕಲಾಂ ಅವರ ಕನಸಿನ ಭಾರತವನ್ನು ಕಟ್ಟಲು ಜ್ಞಾನ ಮತ್ತು ಪರಿಶ್ರಮದ ಹಾದಿಯಲ್ಲಿ ಮುನ್ನಡೆಯೋಣ.
#AbdulKalam #KalamJayanti #MissileManOfIndia #DrAPJAbdulKalam
ವಾತ್ಸಲ್ಯಮಯಿ ಶ್ರೀ ಸ್ಕಂದಮಾತೆಯ ದಿವ್ಯ ಕೃಪೆಯಿಂದ ನಿಮ್ಮ ಜೀವನದಲ್ಲಿ ಸುಖ, ಶಾಂತಿ, ಸಂತೋಷ ಹಾಗೂ ಸಮೃದ್ಧಿ ಸದಾ ನೆಲೆಸಿರಲಿ. ತಾಯಿಯ ಆಶೀರ್ವಾದದಿಂದ ಸಕಲ ಸಂಕಷ್ಟಗಳು ದೂರವಾಗಿ, ಬದುಕು ಸುಂದರವಾಗಿ ಅರಳಲಿ. ಸರ್ವರ ಬಾಳು ಮಂಗಳಮಯವಾಗಲಿ.
#ಸ್ಕಂದಮಾತೆ #Skandamata #ದೇವಿಯಆಶೀರ್ವಾದ #ಭಕ್ತಿಭಾವ #ಶುಭದಿನ




























